ರಾಷ್ಟ್ರೀಯ

ಹಿಮಾಚಲದ ರಾಂಪುರ ಸಮೀಪದ ನದಿಗೆ ಉರುಳಿದ ಬಸ್; 6 ಪ್ರಯಾಣಿಕರ ಬಲಿ

Pinterest LinkedIn Tumblr

acc

ಶಿಮ್ಲಾ: ರಾಂಪುರ ಸಮೀಪದ ಮಚ್ಚಡ ಖುಡ್ ಬಳಿ ಸಟ್ಲೆಜ್‌ ನದಿಗೆ ಶುಕ್ರವಾರ ಬೆಳಗ್ಗೆ ಉರುಳಿದ ಹಿಮಾಚಲ ಪ್ರದೇಶದ ಖಾಸಗಿ ಬಸ್ಸು ಆರು ಪ್ರಯಾಣಿಕರನ್ನು ಬಲಿ ತೆಗೆದುಕೊಂಡಿದೆ.

ಘಟನೆಯಲ್ಲಿ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಗು ಸೇರಿದಂತೆ ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಅವರೆಲ್ಲರೂ ನದಿ ಪಾಲಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಶಿಮ್ಲಾದಿಂದ 120 ಕಿಮೀ ದೂರದಲ್ಲಿರುವ ಕುಲ್ಲು ಜಿಲ್ಲೆಯ ರಾಂಪುರ ಬಳಿ ಬಸ್‌ ರಸ್ತೆಯಿಂದ ಜಾರಿ ಕಣಿವೆಗೆ ಬಿದ್ದಿದೆ. ರಾಂಪುರದಿಂದ ಶಿಮ್ಲಾಕ್ಕೆ ಬಸ್‌ ತೆರಳುತ್ತಿತ್ತು. ಈಗಾಗಲೇ ಆರು ಮೃತ ದೇಹಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ ಏರುವ ಸಾಧ್ಯತೆ ಇದೆ. ಬಸ್‌ನಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಬಸ್‌ ಅಪಘಾತದ ಮಾಹಿತಿ ಪಡೆದ ಸ್ಥಳೀಯರು ಹಾಗೂ ಪೊಲೀಸರು ಮೃತ ಆರು ಮಂದಿ ಶವ ಹಾಗೂ ಗಾಯಾಳುಗಳನ್ನು ರಾಂಪುರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ಧಾರೆ.

ಇನ್ನೂ ಅನೇಕ ಜನರು ನದಿಗೆ ಬಿದ್ದು ನೀರುಪಾಲಾಗಿರಬಹುದು ಎಂದು ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳೊಂದಿಗೆ ಬದುಕುಳಿದಿರುವ ಯೋಧ ನರೀಂದರ್‌ ವರ್ಮಾಶಂಕೆ ವ್ಯಕ್ತಪಡಿಸಿದ್ಧಾರೆ. ಅಪಘಾತದ ನಡೆದ ಪ್ರದೇಶದಲ್ಲಿ ಕೆಲ ಕಾಲ ಟ್ರಾಫಿಕ್‌ ಜಾಂ ಉಂಟಾಗಿತ್ತು. ಹೀಗಾಗಿ ಅಪಘಾತದಲ್ಲಿ ಸಿಲುಕಿದವರ ರಕ್ಷಣೆ, ಮೃತದೇಹಗಳ ಪತ್ತೆಗೆ ತೀವ್ರ ಹಿನ್ನಡೆ ಉಂಟಾಗಿತ್ತು.

ಬಸ್‌ನಲ್ಲಿ ಸ್ಥಳೀಯರೇ ಹೆಚ್ಚಾಗಿದ್ದರು. ಗಂಭೀರವಾಗಿ ಗಾಯಗೊಂಡಿರುವ ಕೆಲ ಪ್ರಯಾಣಿಕರೂ ಸಾವಿನ ಕದ ತಟ್ಟುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.

Write A Comment