ರಾಷ್ಟ್ರೀಯ

ಆಯಸ್ಸು ಕಡಿಮೆಯಾಗಲು ಇಲ್ಲಿವೆ ಹಲವು ಕಾರಣಗಳು

Pinterest LinkedIn Tumblr

918old-handsಮನುಷ್ಯನ ಆಯುಷ್ಯಕ್ಕೂ ಕೆಲವೊಂದು ಆಹಾರಕ್ಕೂ ನಂಟಿದೆ. ಯಾವ ಯಾವ ಆಹಾರವನ್ನು ಯಾವ ಸಮಯದಲ್ಲಿ ತಿಂದ್ರೆ ಆಯುಷ್ಯ ಕಡಿಮೆಯಾಗುತ್ತೆ ಎಂಬ ಬಗ್ಗೆ ನೀವೂ ತಿಳಿದುಕೊಳ್ಳಿ.

ಮೊಸರು:

ಅನೇಕರಿಗೆ ಮೊಸರೆಂದ್ರೆ ಪ್ರಾಣ. ರಾತ್ರಿ ಊಟಕ್ಕೆ ಮೊಸರು ಸೇವಿಸೋದ್ರಿಂದ ಹೊಟ್ಟೆ ತಂಪಾಗಿರುತ್ತೆ ಎಂಬ ನಂಬಿಕೆ. ಗರುಡ ಪುರಾಣದ ಪ್ರಕಾರ ರಾತ್ರಿ ಮೊಸರು ಸೇವಿಸಿದ್ರೆ ನಮ್ಮ ಆಯುಷ್ಯ ಕಡಿಮೆಯಾಗುತ್ತಂತೆ.

ಆಯುರ್ವೇದವೂ ಇದನ್ನೇ ಹೇಳುತ್ತೆ. ರಾತ್ರಿ ಊಟದ ನಂತರ ದೇಹಕ್ಕೆ ನಾವು ಅಷ್ಟು ಕೆಲಸ ಕೊಡುವುದಿಲ್ಲ. ಕೆಲವೇ ಗಂಟೆಗಳಲ್ಲಿ ನಿದ್ದೆಗೆ ಶರಣಾಗುತ್ತೇವೆ. ಆದ್ದರಿಂದ ಊಟ ಸರಿಯಾಗಿ ಜೀರ್ಣವಾಗುವುದಿಲ್ಲ. ಜೊತೆಗೆ ಮೊಸರು ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅನೇಕ ರೋಗಗಳಿಗೆ ಕಾರಣವಾಗುತ್ತದೆ.

ಒಣ ಮಾಂಸ ಸೇವನೆ:

ಗರುಡ ಪುರಾಣದ ಪ್ರಕಾರ ಒಣ ಮಾಂಸ ಸೇವನೆಯಿಂದಲೂ ಆಯಸ್ಸು ಕಡಿಮೆಯಾಗುತ್ತದೆ. ಒಣ ಮಾಂಸವನ್ನು ಅನೇಕ ದಿನಗಳಿಂದ ಸಂಗ್ರಹಿಸಿ ಇಡುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಸ್ ಹುಟ್ಟಿಕೊಳ್ಳುವ ಸಾಧ್ಯತೆ ಇದೆ.

ಬೆಳಗ್ಗೆ ತುಂಬ ಹೊತ್ತು ಮಲಗುವುದು:

ಗರುಡ ಪುರಾಣದ ಪ್ರಕಾರ ಬೆಳಗ್ಗೆ ತುಂಬ ಹೊತ್ತು ಮಲಗುವುದರಿಂದ ಆಯಸ್ಸು ಕಡಿಮೆಯಾಗುತ್ತದೆ. ಆಯುರ್ವೇದದ ಪ್ರಕಾರ ಬೆಳಗಿನ ಜಾವದಲ್ಲೇ ಏಳುವುದರಿಂದ ಉತ್ತಮ ಗಾಳಿಯ ಸೇವನೆ ಮಾಡಬಹುದು. ಶುದ್ಧ ಗಾಳಿ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹಾಗಾಗಿಯೇ ಹಿಂದಿನ ಕಾಲದಲ್ಲಿ ಹಿರಿಯರು ಬೇಗ ಎದ್ದು ತಮ್ಮ ಕಾರ್ಯ ಆರಂಭಿಸುತ್ತಿದ್ದರು. ಬೆಳಿಗ್ಗೆ ತಡವಾಗಿ ಏಳುವುದರಿಂದ ಶುದ್ಧ ಗಾಳಿ ಸೇವನೆ ಮಾಡಲು ಸಾಧ್ಯವಾಗದೆ ಇರುವುದರಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ.

ಅಂತ್ಯ ಸಂಸ್ಕಾರದ ಹೊಗೆ ಸೇವನೆ:

ಗರುಡ ಪುರಾಣದ ಪ್ರಕಾರ ಇದು ಕೂಡ ವಯಸ್ಸನ್ನು ಕಡಿಮೆ ಮಾಡುತ್ತದೆ. ಮನುಷ್ಯನ ಶರೀರ ಬೆಂಕಿಯಲ್ಲಿ ಸುಡುವುದರಿಂದ ಆ ಶವದಲ್ಲಿರುವ ಬ್ಯಾಕ್ಟೀರಿಯಾ ಗಾಳಿಯಲ್ಲಿ ಸೇರಿ ನಮ್ಮ ಶರೀರ ಪ್ರವೇಶಿಸುತ್ತವೆ. ಇದರಿಂದ ನಮಗೂ ಅನೇಕಾನೇಕ ರೋಗ ಬರುವ ಸಾಧ್ಯತೆ ಇದೆ.

ಬೆಳಗ್ಗೆ ಅತಿ ಹೆಚ್ಚು ಲೈಂಗಿಕ ಕ್ರಿಯೆ:

ಬೆಳಗಿನ ವೇಳೆ ಅತಿ ಹೆಚ್ಚು ಲೈಂಗಿಕ ಕ್ರಿಯೆ ಮಾಡುವುದರಿಂದಲೂ ಆಯಸ್ಸು ಕಡಿಮೆಯಾಗುತ್ತದೆ. ಅತಿ ಸಂಭೋಗದಿಂದ ದೇಹ ದುರ್ಬಲವಾಗುತ್ತದೆ. ದೇಹ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತದೆ ಎಂದು ಗರುಡ ಪುರಾಣ ಹೇಳಿದೆ.

Write A Comment