ರಾಷ್ಟ್ರೀಯ

ಆಟೊ ಚಾಲಕ ಪ್ರಯಾಣ ನಿರಾಕರಿಸಿದ್ದಕ್ಕೆ ಅಮೇರಿಕನ್ ಮಹಿಳೆ ವಿನೂತನವಾಗಿ ಪ್ರತಿಭಟಿಸಿದ್ದನ್ನು ನೀವೇ ನೋಡಿ ….

Pinterest LinkedIn Tumblr

collage

ಆಟೋ ಚಾಲಕರು ಕರೆದ ಕಡೆ ಬರುವುದಿಲ್ಲ ಎಂಬುದು ಬಹು ದಿನದ ಬಹು ಜನರ ಕೂಗು. ಇದಕ್ಕೆ ಆಟೋ ಚಾಲಕರನ್ನು ದೂಷಿಸಬೇಕೆಂದೇನಲ್ಲ. ಅವರಿಗೂ ಕೆಲವು ಇತಿಮಿತಿಗಳಿರುತ್ತವೆ. ಆದರೆ ಅದನ್ನು ಮೀರಿ ಕೆಲವೊಮ್ಮೆ ಒರಟಾಗಿ, ಅನಾಗರಿಕವಾಗಿ ವರ್ತಿಸುವ ಆಟೊ ಚಾಲಕರನ್ನು ಕಂಡಾಗ ಪ್ರಯಾಣಿಕರಿಗೆ ಗಾಬರಿಯಾಗುವುದು ಖಂಡಿತಾ.

ಇಲ್ಲಿ ನೋಡಿ ಅಮೇರಿಕ ಮಹಿಳೆಯೊಬ್ಬಳಿಗೆ ಆಟೋ ಚಾಲಕ ಪ್ರಯಾಣ ನಿರಾಕರಿಸಿದ್ದಕ್ಕೆ ಅವರು ವಿನೂತನವಾಗಿ ಪ್ರತಿಭಟಿಸಿದ್ದಾರೆ. ಆಟೋ ಚಾಲಕನ ಭಾಷೆಯಾದ ಹಿಂದಿಯಲ್ಲೇ ಮಾತನಾಡಿರುವ ಕ್ರಿಶ್ಚಿನ್ ಫೈರ್, ನಾನು ಪೂರ್ತಿ ದಿನ ಬಿಡುವಾಗಿದ್ದೇನೆ. ನೀವು ನಾನು ಕರೆದ ಕಡೆ ಬರಲು ನಿರಾಕರಿಸಿದರೆ ಇಡೀ ದಿನ ಇಲ್ಲೇ ಕೂರುತ್ತೇನೆ ಅಂದು ಆಟೋದಲ್ಲೇ ಕುಳಿತಿದ್ದಾರೆ.

ನಂತರ ಕೆಲವು ಬಾಲಿವುಡ್ ಹಾಡುಗಳನ್ನೂ ಈಕೆ ಹಾಡಿದ್ದಾರೆ. “ಭಾರತದಲ್ಲಿ ಮೀಟರ್ ಹಾಕಿ ನಾನು ಹೋಗಬೇಕಾದ ಜಾಗಕ್ಕೆ ಆಟೊ ಅಥವಾ ಟ್ಯಾಕ್ಸಿಯನ್ನು ಕೊಂಡೊಯ್ಯುವುದು ಹೇಗೆ ಎಂದು ತಿಳಿಯಲು ನನಗೆ ೨೦ ವರ್ಷ ಹಿಡಿಯಿತು” ಎಂದು ಅವರು ಯೂ ಟ್ಯೂಬ್ ನಲ್ಲಿ ಬರೆದು ಈ ಈ ವಿಡಿಯೋ ಹಾಕಿದ್ದಾರೆ.

ಇದಕ್ಕೆ ಖಾರವಾಗಿ ಕೆಲವರು ಪ್ರಕ್ರಿಯಿಸಿದ್ದು, ಯೂ ಟ್ಯೂಬ್ ನಲ್ಲಿ ಆಟೋ ಚಾಲಕನನ್ನು ‘ಸ್ಕ್ರೌಂಡ್ರೆಲ್’ ಎಂದು ಕರೆದಿರುವುದು ತಪ್ಪು ಮತ್ತು ಒಬ್ಬ ಬಡ ಆಟೋ ಚಾಲಕನನ್ನು ಅವಮಾನಿಸಿದ್ದೀರಿ ಎಂದು ಕೂಡ ಈ ಮಹಿಳೆಯನ್ನು ದೂಷಿಸಿದ್ದಾರೆ.

ಮುಂದಿನ ಬಾರಿ ಅಟೊ ಚಾಲಕ ನಿಮ್ಮನ್ನು ಕರೆದೊಯ್ಯಲು ನಿರಾಕರಿಸಿದರೆ ಏನು ಮಾಡಬಹುದು ಎಂದು ಈ ವಿಡಿಯೋ ನಿಮಗೆ ಹೇಳಿಕೊಡಬಹುದು!

 

Write A Comment