ರಾಷ್ಟ್ರೀಯ

ದ್ವೇಷ ಭಾಷಣ: ಸುಬ್ರಹ್ಮಣ್ಯಂ ಸ್ವಾಮಿ ವಿರುದ್ಧ ಜಾಮೀನುರಹಿತ ವಾರೆಂಟ್‌ಗೆ ಸುಪ್ರೀಂಕೋರ್ಟ್ ತಡೆ

Pinterest LinkedIn Tumblr

suನವದೆಹಲಿ; ಆಸ್ಸಾಂ ವಿಶ್ವವಿದ್ಯಾಲಯದಲ್ಲಿ ದ್ವೇಷ ಭಾಷಣ ಮಾಡಿದ್ದ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ವಿರುದ್ಧ ಹೊರಡಿಸಲಾಗಿದ್ದ ಜಾಮೀನುರಹಿತ ವಾರೆಂಟ್‌ಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ದ್ವೇಷ ಭಾಷಣ ಕುರಿತಂತೆ ಸಂವಿಧಾನದ ಮೌಲ್ಯತೆ ಕುರಿತಂತೆ ಕೋರ್ಟ್‌ಗೆ ಮಾಹಿತಿ ನೀಡುವಂತೆ ನ್ಯಾಯಮೂರ್ತಿ ರಂಜನ್ ಗೊಗೊಯಿ  ಮತ್ತು ಎಂ.ವೈ ಇಕ್ಬಾಲ್ ನೇತೃತ್ವದ ನ್ಯಾಯಪೀಠ ಆದೇಶಿಸಿದೆ.

ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ವಿಶ್ವವಿದ್ಯಾಲಯದಲ್ಲಿ ದ್ವೇಷ ಭಾಷಣ ಮಾಡಿರುವುದು ಕೆಲ ಘಟನೆಗಳಿಗೆ ಕಾರಣವಾಗಿದೆ ಎಂದು ಆಸ್ಸಾಂ ರಾಜ್ಯದ ಕರೀಮ್ ಗಂಜ್‌ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

ಸುಪ್ರೀಂಕೋರ್ಟ್ ಕರೀಮ್‌ಗಂಜ್‌ ಕೋರ್ಟ್‌ನ ಜಾಮೀನುರಹಿತ ವಾರೆಂಟ್‌ಗೆ ಆರು ವಾರಗಳ ತಡೆ ನೀಡಿದ್ದು, ಆರು ವಾರಗಳೊಳಗೆ ಕೋರ್ಟ್‌ಗೆ ಹಾಜರಾಗಿ ಮನವಿ ಸಲ್ಲಿಸಬೇಕು ಎಂದು ಆದೇಶಸಿದೆ.

ಇದಕ್ಕಿಂತ ಮೊದಲು, ಕರೀಮ್‌ಗಂಜ್ ವಿಶ್ವವಿದ್ಯಾಲಯದಲ್ಲಿ ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದಿದ್ದರಿಂದ ಇಲ್ಲಿನ ಕೋರ್ಟ್ ಹೊರಡಿಸಿದ ಜಾಮೀನು ರಹಿತ ವಾರೆಂಟ್‌ಗೆ ತಡೆ ನೀಡುವಂತೆ ಕೋರಿ ಸುಪ್ರೀಂಗೆ ಮನವಿ ಸಲ್ಲಿಸಿದ್ದರು.

ಕಳೆದ ಮಾರ್ಚ್ 15 ರಂದು ಕಾಜಿರಂಗಾ ವಿಶ್ವವಿದ್ಯಾಲಯದಲ್ಲಿ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ದ್ವೇಷ ಭಾಷಣ ಮಾಡಿದ್ದರಿಂದ ಸ್ಥಳೀಯ ನ್ಯಾಯಾಲಯ ಮಾರ್ಚ್ 19 ರಂದು ನೋಟಿಸ್ ಜಾರಿಗೊಳಿಸಿತ್ತು.

Write A Comment