ರಾಷ್ಟ್ರೀಯ

ಲಲಿತ್ ಮೋದಿ ಜೊತೆ ವಸುಂದರಾ ಕುಟುಂಬಕ್ಕೆ ಕ್ರಿಮಿನಲ್ ನಂಟು: ಜೈರಾಮ್ ರಮೇಶ್

Pinterest LinkedIn Tumblr

jaai-rameshನವದೆಹಲಿ: ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಜೊತೆ  ರಾಜಸ್ತಾನ ಮುಖ್ಯಮಂತ್ರಿ ವಸುಂದರಾ ರಾಜೇ ಕುಟುಂಬ ಕ್ರಿಮಿನಲ್ ನಂಟು ಹೊಂದಿದೆ. ಹೀಗಾಗಿ ಬಿಜೆಪಿ ವಸುಂದರಾ ರಾಜೇ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈರಾಮ್ ರಮೇಶ್  ವಸುಂದರಾ ರಾಜೇ ಅವರನ್ನು ಬಿಜೆಪಿ ಉಚ್ಚಾಟಿಸುವವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು. ರಾಜಸ್ತಾನದ ಡೋಲ್ಪುರ್ ಅರಮನೆ 1949 ರಲ್ಲಿ ಸರ್ಕಾರದ ಒಡೆತನದಲ್ಲಿತ್ತು ಎಂಬುದರ ಬಗ್ಗೆ ಹೊಸ ದಾಖಲೆ ಬಿಡುಗಡೆ ಮಾಡಿದರು. ಸರ್ಕಾರಕ್ಕೆ ಸೇರಿದ ಡೋಲ್ಪುರ್ ಅರಮನೆಯನ್ನು ಲಲಿತ್ ಮೋದಿ ಜೊತೆ ಸೇರಿ ವಸುಂದರಾ ರಾಜೇ ಬಲವಂತವಾಗಿ, ಅನೈತಿಕವಾಗಿ ಆಕ್ರಮಿಸಿಕೊಂಡು, ಖಾಸಗಿ ಕಂಪನಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಡೋಲ್ಪುರ್ ಅರಮನೆ ಒಡೆತನಕ್ಕೆ ಸಂಬಂಧಿಸಿದಂತೆ ಬಿಜೆಪಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿ, ಆಸ್ತಿ ದುಶ್ಯಂತಿ ಸಿಂಗ್ ಗೆ ಸೇರಿದ್ದು ಎಂಬುದನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ 2007 ರಲ್ಲಿ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರ ಮುಂದೆ ದುಶ್ಯಂತ್ ಸಿಂಗ್ ಮತ್ತು ಹೇಮಂತ್ ಸಿಂಗ್ ನಡುವೆ ರಾಜೀ ಸಂಧಾನ ನಡೆದಿತ್ತು. ಅರಮನೆ ಸುತ್ತಲಿನ ಜಾಗ ಸಂಬಂಧ ರಾಜಸ್ತಾನ ಸರ್ಕಾರ  ದುಶ್ಯಂತ್ ಸಿಂಗ್ ಗೆ 2 ಕೋಟಿ ರೂ. ಪರಿಹಾರ ಹಣ ನೀಡಿತ್ತು. ಈ ಸಂಬಂಧ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದರು.

ಲಲಿತ್ ಮೋದಿ ಮತ್ತು ವಸುಂದರಾ ರಾಜೇ ಕುಟುಂಬದ ನಡುವೆ ಅಪವಿತ್ರ ಮೈತ್ರಿಯಿದೆ. ಈ ಇಬ್ಬರು ನಿಯಾಂತ್ ಹೆರಿಟೇಜ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಸರ್ಕಾರದ ಆಸ್ತಿಯನ್ನು ಐಷಾರಾಮಿ ಹೋಟೆಲ್ ಮಾಡಿದ್ದಾರೆ ಎಂದು ದೂರಿದರು,

ಡೋಲ್ಪುರ್ ಆಸ್ತಿ  ಸರ್ಕಾರಕ್ಕೆ ಸೇರಿದ್ದು ಎಂಬುದರ ಸೂಕ್ತ ದಾಖಲಾತಿಗಳಿವೆ ಎಂದು ಹೇಳಿದ ಜೈರಾಮ್ ರಮೇಶ್ ಪ್ರಕರಣದ ಪಾರದರ್ಶಕ ತನಿಖೆ ನಡೆಯಬೇಕಾದರೆ ವಸುಂದರಾ ರಾಜೇ  ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

Write A Comment