ರಾಷ್ಟ್ರೀಯ

ಲಲಿತ್ ಪ್ರಕರಣ; ಕೊನೆಗೂ ಬಿಜೆಪಿ ವರಿಷ್ಠರ ಮುಂದೆ ತಪ್ಪೊಪ್ಪಿಕೊಂಡ ವಸುಂಧರಾ ರಾಜೇ

Pinterest LinkedIn Tumblr

vasu

ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿಗೆ ಸಹಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಬಿಜೆಪಿ ವರಿಷ್ಠರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, 2011ರಲ್ಲಿ ಲಲಿತ್ ಮೋದಿ ಅವರು ಲಂಡನ್ ಕೋರ್ಟ್‌ಗೆ ಸಲ್ಲಿಸಿದ ವಲಸೆ ಪತ್ರಗಳಿಗೆ ತಾವು ಸಹಿ ಹಾಕಿರುವುದಾಗಿ ರಾಜೇ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ನಿನ್ನೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಅವರು ರಾಜೇ ಮತ್ತು ಲಲಿತ್ ಮೋದಿ ನಡುವಿನ ಸಂಬಂಧದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.

ಲಲಿತ್ ಮೋದಿ ಬ್ರಿಟನ್‍ನಲ್ಲಿ ಉಳಿಯುವ ಸಲುವಾಗಿ ರಾಜೇ ಸಹಾಯ ಮಾಡಿರುವ ದಾಖಲೆಗಳೆಲ್ಲವನ್ನೂ ಜೈರಾಂ ರಮೇಶ್ ಮಾಧ್ಯಮಗಳಿಗೆ ನೀಡಿದ್ದಾರೆ. ಅಲ್ಲದೆ ಈ ಕೂಡಲೇ ವಸುಂಧರಾ ರಾಜೇ ರಾಜಿನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದರು.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ಈ ಬಗ್ಗೆ 24 ಗಂಟೆಗಳಲ್ಲಿ ವಿವರಣೆ ನೀಡುವಂತೆ ರಾಜೇ ಅವರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿವರಣೆ ನೀಡಿರುವ ರಾಜಸ್ಥಾನ ಸಿಎಂ ತಾನು ಅಫಿಡವಿಟ್‌ಗೆ ಸಹಿ ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

Write A Comment