ಅಂತರಾಷ್ಟ್ರೀಯ

ಅಮೆರಿಕ ಅಧ್ಯಕ್ಷರ ಹುದ್ದೆಯ ಕಣಕ್ಕಿಳಿಯಲಿರುವ ಅನಿವಾಸಿ ಭಾರತೀಯ ಬಾಬ್ಬಿ ಜಿಂದಾಲ್

Pinterest LinkedIn Tumblr

Bobby_Jindal

ಅಮೆರಿಕದ ಲೂಸಿಯಾನದ ಗೌವರ್ನರ್ ಆಗಿರುವ ಅನಿವಾಸಿ ಭಾರತೀಯ ಬಾಬ್ಬಿ ಜಿಂದಾಲ್ ಅಮೆರಿಕ ಅಧ್ಯಕ್ಷರ ಹುದ್ದೆಯ ಕಣಕ್ಕಿಳಿದಿದ್ದಾರೆ. ಈ ಸಂಬಂಧ ಅವರು ನ್ಯೂ ಆರ್ಲಿಯಾನ್ಸ್​ನಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಿದರು.

ಅಮೆರಿಕ ಅಧ್ಯಕ್ಷರ ಹುದ್ದೆಗೆ ಆಯ್ಕೆ ಬಯಸಿ ಜೆಬ್ ಬುಷ್ ಮತ್ತು ರಿಕ್ ಪೆರ್ರಿ ಸೇರಿದಂತೆ ರಿಪಬ್ಲಿಕನ್ ಪಕ್ಷದ 12 ಜನರು ಕಣಕ್ಕಿಳಿದಿದ್ದಾರೆ. ಇವರೆಲ್ಲರಿಗೆ ಸೆಡ್ಡು ಹೊಡೆಯಲಂದು ಬಾಬ್ಬಿ ಜಿಂದಾಲ್ ಕೂಡ ಕಣಕ್ಕಿಳಿದಿದ್ದಾರೆ.

ಲೂಸಿಯಾನದ ಗೌವರ್ನರ್ ಆಗಿ ಸತತ 2 ಬಾರಿ ಜಯಗಳಿಸಿರುವ ಬಾಬ್ಬಿ ಜಿಂದಾಲ್ ಭಾರಿ ಜನಪ್ರಿಯತೆ ಹೊಂದಿದ್ದಾರೆ. ಆದರೆ 2009ರಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಭಾಷಣದ ಮೇಲಿನ ಚರ್ಚೆಯ ವೇಳೆ ರಚನಾತ್ಮಕವಾದ ಟೀಕೆಟಿಪ್ಪಣಿ ಮಾಡುವಲ್ಲಿ ಎಡವಿದ ಬಾಬ್ಬಿ ಜಿಂದಾಲ್ ಅವರ ಜನಪ್ರಿಯತೆ ನಿಧಾನವಾಗಿ ಕುಸಿಯಲಾರಂಭಿಸಿತು.

ಆದರೆ ಕಳೆದೊಂದು ವರ್ಷದಿಂದ ಅಮೆರಿಕದ ಉದ್ದಗಲಕ್ಕೂ ಸಂಚರಿಸಿರುವ ಅವರು, ಪ್ರಭಾವಶಾಲಿ ಭಾಷಣಗಳ ಮೂಲಕ ಜನರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿದೇಶಾಂಗ ನೀತಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸ್ವತಂತ್ರವಾದ ನೀತಿಗಳನ್ನು ರೂಪಿಸಿಕೊಂಡು, ಅವುಗಳನ್ನು ಜಾರಿಗೊಳಿಸುವುದರಿಂದಾಗುವ ಲಾಭಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಾ ಮತ್ತೊಮ್ಮೆ ಜನಪ್ರಿಯತೆಯ ಏಣಿಯ ಮೆಟ್ಟಿಲುಗಳನ್ನು ಏರಲು ಪ್ರಯತ್ನಿಸುತ್ತಿದ್ದಾರೆ.

Write A Comment