ರಾಷ್ಟ್ರೀಯ

ಗ್ಯಾಸ್ ಟ್ಯಾಂಕರ್ ಸೋರಿಕೆ : 6ಕ್ಕೂ ಹೆಚ್ಚು ಸಾವು, 100 ಮಂದಿ ಅಸ್ವಸ್ಥ

Pinterest LinkedIn Tumblr

Gas-Tanket

ಲೂಧಿಯಾನ(ಪಂಜಾಬ್), ಜೂ.13: ಅನಿಲ ಟ್ಯಾಂಕರ್ ಸೋರಿಕೆಯಾಗಿ 6ಕ್ಕೂ ಹೆಚ್ಚು ಜನ ಸಾವನ್ನಪ್ಪಿ, ಸುಮಾರು ಒಂದು ನೂರು ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ದೋರಾಹ ಬೈಪಾಸ್ ರಸ್ತೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೋರಾಹ ಬೈಪಾಸ್‌ನ ಫ್ಲೈಓವರ್ (ಮೇಲ್ಸೇತುವೆ) ಕೆಳಗೆ ಹಾಯ್ದು ಹೋಗುವಾಗ ಟ್ಯಾಂಕರ್ ಸಿಕ್ಕಿ ಹಾಕಿಕೊಂಡಿತು. ಇದರಿಂದ ಗ್ಯಾಸ್ ಸೋರಿಕೆಯಾಯಿತು. ಇದರಿಂದ 6ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು. ಮೃತದೇಹಗಳನ್ನು ಲೂಧಿಯಾನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ರಜನೀಶ್‌ಕುಮಾರ್ ಸೂದ್ ಹೇಳಿದ್ದಾರೆ. ಟ್ಯಾಂಕರ್‌ನಿಂದ ಸೋರಿಕೆಯಾದ ಗ್ಯಾಸ್, ಇಡೀ ಪ್ರದೇಶಕ್ಕೆ ವ್ಯಾಪಿಸಿತು. ಇದನ್ನು ನೋಡಲು ಮನೆಗಳಿಂದ ಹೊರ ಬಂದ ಜನ ಗ್ಯಾಸ್ ಉಸಿರಾಡಿ ಅಸ್ವಸ್ಥರಾದರು. ಕೆಲವರು ಬಿದ್ದು ಗಾಯಗೊಂಡರು. ಗುಜರಾತ್ ನೋಂದಣಿ ಸಂಖ್ಯೆ ಹೊಂದಿರುವ ಟ್ಯಾಂಕರ್ ಲೂಧಿಯಾನಾ ಮಾರ್ಗವಾಗಿ ಬೇರೆಲ್ಲಿಗೋ ಹೋಗುತ್ತಿತ್ತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment