ರಾಷ್ಟ್ರೀಯ

ಔಷಧ ಚೀಟಿಯನ್ನು ಓದಲು ನೀವಿನ್ನು ಪರದಾಡಬೇಕಿಲ್ಲ

Pinterest LinkedIn Tumblr

chiti-fi

ನವದೆಹಲಿ: ದೀರ್ಘಕಾಲದ ಸಮಸ್ಯೆಯೊಂದು ಬಗೆಹರಿದಿದೆ. ವೈದ್ಯರ ಕೈ ಬರಹವನ್ನು ಓದಲಾಗದೇ ಪರದಾಡುತ್ತಿದ್ದ ರೋಗಿಗಳ ಮತ್ತು ಅವರ ಸಂಬಂಧಿಕರ ಬಹುದೊಡ್ಡ ತಲೆಬೇನೆಗೆ ಈಗ ಶಾಶ್ವತ ಪರಿಹಾರ ಸಿಗುತ್ತಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಈ ಸಮಸ್ಯೆಗೆ ತಿಲಾಂಜಲಿ ನೀಡ ಹೊರಟಿದೆ. ಇನ್ನು ಮುಂದೆ ವೈದ್ಯರು ಔಷಧ ಚೀಟಿಯಲ್ಲಿ ಇಂಗ್ಲಿಷ್ ಕ್ಯಾಪಿಟಲ್ ಅಕ್ಷರಗಳನ್ನು ಕಡ್ಡಾಯವಾಗಿ ಬಳಸಬೇಕು. ಜತೆಗೆ ಔಷಧಗಳ ಸಾರ್ವತ್ರಿಕ ಹೆಸರನ್ನೇ ಬರೆಯಬೇಕು ಎಂಬ ನಿಯಮವನ್ನು ಇಲಾಖೆ ಜಾರಿಗೆ ತರುತ್ತಿದೆ.

“ಇನ್ನು ಕೆಲವೇ ದಿನಗಳಲ್ಲಿ ಈ ಆದೇಶ ಹೊರಬೀಳಲಿದ್ದು ದೇಶಾದ್ಯಂತ ಈ ನಿಯಮವನ್ನು ಜಾರಿಗೊಳಿಸಲಾಗುವುದು”, ಎಂದು ಭಾರತೀಯ ವೈದ್ಯಕೀಯ ಸಂಘದ ಡಾ.ಕೆ.ಕೆ. ಅಗರ್ವಾಲ್  ತಿಳಿಸಿದ್ದಾರೆ.

ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿರುವ ವೃತ್ತಿಪರ ವೈದ್ಯರು, ,ಹೊಸ ನಿಯಮ ನಮಗೆ ಸ್ವಲ್ಪ ಹೆಚ್ಚಿನ ಕೆಲಸವನ್ನು ಹೇರಲಿದೆ. ಆದರೆ ರೋಗಿಗಳ ಹಿತದೃಷ್ಟಿಯಿಂದ ಇದು ಸಮಂಜಸವಾದುದು’ ಎಂದು ಹೇಳಿದ್ದಾರೆ.

Write A Comment