ರಾಷ್ಟ್ರೀಯ

ದಾಂಪತ್ಯಕ್ಕೆ ಕಾಲಿಡುವ ನವಜೋಡಿಗಳಿಗೆ ಮಧುರ ಮಿಲನ ‘ಆ ದಿನ’ ಮೊದಲು ಮನಸ್ಸು ಗೆಲ್ಲಿರಿ

Pinterest LinkedIn Tumblr

First-Night

ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ದಾಂಪತ್ಯಕ್ಕೆ ಕಾಲಿಡುವ ನವಜೋಡಿಗಳಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಆ ಮೊದಲ ದಿನ ಜೀವನದಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತದೆ. ಆ ಮಿಲನಮಹೋತ್ಸವದ ದಿನ ಪ್ರತಿಯೊಬ್ಬರ ಬಾಳಲ್ಲೂ ಪ್ರಮುಖ ಪಾತ್ರ ವಹಿಸುತ್ತೆ. ಪ್ರತಿಯೊಬ್ಬ ಗಂಡು ಹೆಣ್ಣಿಗೆ ಜೀವನದಲ್ಲಿ  ಇದೊಂದು ಮೊದಲ ಪರೀಕ್ಷೆ ಎಂದರೂ ತಪ್ಪಾಗಲಾರದು. ಏಕಾಂಗಿ ದಿನಗಳನ್ನು ಸವೆಸಿ ಚತುರ್ಭುಜರಾಗುವÉ ಇತ್ತೀಚಿನ ದಿನಗಳಲ್ಲಿ ಅರ್ಧ ಆಯಸೇ ಕಳೆದಿರುತ್ತದೆ. ಕಾತುರದ ಕ್ಷಣಗಳು ಸಮೀಪಿಸುತ್ತಿರುವಂತೆ ನವ ಜೋಡಿಗಳ ಹೃದಯ ಬಡಿತ ಹತೋಟಿಯಲ್ಲಿ ಇರುವುದಿಲ್ಲ. ಜೀವನದ ಅಡಿಪಾಯಕ್ಕೆ ಭದ್ರ ಬುನಾದಿ ಹಾಕಿ ಬದುಕೆಂಬ ಸುಂದರ ದೇಗುಲ ಕಟ್ಟಿಕೊಳ್ಳುವ ಅಮೂಲ್ಯ ಗಳಿಗೆ ಆತುರಕ್ಕೆ ಗತಿಗೇಡು ಎಂಬಂತಾಗಬಾರದು. ತಾಳ್ಮೆ, ಸಂಯಮ, ಭಾವನೆಗಳ ವಿನಿಯಮದ ಮೂಲಕ ಮೊದಲ ರಾತ್ರಿಯನ್ನು ಜೀವನದ ಅವಿಸ್ಮರಣಿಯ ಕ್ಷಣವಾಗಿಸಬಹುದು. ಸಾಮಾನ್ಯವಾಗಿ ಮುಧುಮಗನಿಗೆ ವಿಜೃಂಭಣೆಯ ಕಾತುರವಾದರೆ, ಮಧುಮಗಳಿಗೆ ಮನೋಲ್ಲಾಸದ ಸುಮದುರ ಸ್ವಪ್ನಗಳಿಗೆ ಮತ್ತಷ್ಟು ಸವಿ ಬೆರೆಸುವ ಆಕಾಂಕ್ಷೆ. ಜೊತೆಗೊಂದಿಷ್ಟು ಭಯ, ಏನೋ ಹೇಗೋ ಎಂಬ ಗೊಂದಲ.

ಆಕೆ ಸುಮಧುರ ಸ್ವಪ್ನಗಳ ತೇರು ಏರುವ ಕಾತುರದಲ್ಲಿದ್ದರೆ, ಈತ ಉಕ್ಕರಿಯುವ ಸಾಗರ ದಾಟುವ ಧಾವಂತ. ಹೆಣ್ಣು ಸಂಕೋಚದ ಮುದ್ದೆಯಾಗಿರದಿದ್ದರೂ ಅವ್ಯಕ್ತ ಆತಂಕದಲ್ಲಿ ಮುದಿರುತ್ತಾಳೆ. ಮಧುಮಗ ಸಂಯಮದಿಂದ ಮನಸ್ಸೆಂದ ಮೊಗ್ಗನ್ನು ಹೂವಾಗಿಸಿದರೆ ಆಕೆ ಅರಳಬಲ್ಲಳು, ಕರಗಬಲ್ಲಳು. ಅರಳಿ, ಕರಗಿದವಳಿಂದ ದೊರೆಯುವ ಉತ್ತೇಜನ ಮಧುಮಗನ ಬದುಕಿಗೆ ಅಮೃತಧಾರೆಯಾದೀತು. ಸ್ಪೂರ್ತಿಯ ಸೆಲೆಯಾದೀತು. ಹೆಣ್ಣಿನ ಮನಸ್ಸು ಕೋಮಲ, ಚಂಚಲ. Zಡಪಡಿಕೆ ಹೃದಯ ಬಡಿತಕ್ಕೆ ಸವಿ ಮಾತುಗಳೆಂಬ ತಂಪನೆಯ ಸಿಂಚನ ಅವ್ಯಕ್ತ ಭಯವನ್ನು ತಹಬದಿಗೆ ತಂದಿತು. ಆ ಕ್ಷಣದಲ್ಲಿ ವಿಜೃಂಭಣೆಗಿಂತ ಮನಸ್ಸು ಗೆಲ್ಲುವುದು ಬಹಳ ಮುಖ್ಯ. ಅದು ಸುಖದ ಸೋಪಾನಕ್ಕೆ ಹೂ ಹಾಸಿಗೆಯಾಗುವುದು ಖಚಿತ. ಹಾಗೆಂದು ಮನಸ್ಸು ಗೆಲ್ಲುವುದರಲ್ಲೇ ಕಾಲಹರಣ ಮಾಡಿ ವಿಜಯೋತ್ಸವವಿಲ್ಲದೆ ಇದ್ದರೂ ಅನರ್ಥವಾದೀತು. ಹೆಣ್ಣಿಗೆ ಸುಹಾಗ್ ರಾತ್ ಭಾವನೆಗಳ ಬಂಧವಾದರೆ ಗಂಡಿಗೆ ಅಗ್ನಿ ಪರೀಕ್ಷೆಯೇ ಸರಿ. ಆತ ಆ ಕ್ಷಣದಲ್ಲಿ ತೋರಿಸಿದ ವರ್ತನೆ ಹೆಣ್ಣಿನ ಮನಸ್ಸಿನಲ್ಲಿ ಚಿತ್ರಪಟವಾಗಿ ಜೀವನಪೂರ್ತಿ ಅವನ ಕುರಿತು ಸ್ಪಷ್ಟ ಅಭಿಪ್ರಾಯಕ್ಕೆ ಬರಲು ಅನುಕೂಲವಾದಿತು.
ಆದ್ದರಿಂದ ಪ್ರೀತಿಯಿಂದ ಮನಸ್ಸನ್ನು ಗೆಲ್ಲುವುದು ಶಾಶ್ವತ ಜೀವನಕ್ಕೆ ಭದ್ರ ಬುನಾದಿಯೇ ಹೊರತು ಆಕ್ರಮಣಕಾರಿ ಮಿಲನವಲ್ಲ. ಅಂತಹ ಯಡವಟ್ಟು ನಡೆದರೆ ಅದು ಆಕೆಯ ಪಾಲಿಗೆ ಕರಾಳ ರಾತ್ರಿಯಾಗಿ ಜೀವನ ಪೂರ್ತಿ ಆತನ ಕುರಿತು ನಕಾರಾತ್ಮ ಅಭಿಪ್ರಾಯಕ್ಕೆ ಕಾರಣವಾಗಬಹುದು.

ಸೂಕ್ಷ್ಮವಾಗಿ, ಹೆಣ್ಣಿನ ಮನಸ್ಥಿತಿ ಅರಿಯುವುದು, ಅವಳ ಮನ ಗೆಲ್ಲುವುದು, ಅವಳ ಭಾವನೆಗಳಿಗೆ ಸ್ಪಂದಿಸುವುದು ಗಂಡಿನ ಕರ್ತವ್ಯವೂ ಕೂಡ. ಮೊದಲ ರಾತ್ರಿ ಹೆಂಡತಿಯ ಮನ ಗೆದ್ದಿದೆ ಆದರೆ ಅದು ಜೀವನದಲ್ಲಿ ಸಾಧಿಸಿದ ಮೊದಲ ಜಯವೇ ಸರಿ. ಹೆಣ್ಣಿನ ಮನಸ್ಸನ್ನು ಗೆದ್ದವನೇ ನಿಜವಾದ ಶೂರ. ಕೆಲ ನವಜೋಡಿಗಳು ಹನಿಮೂನ್ ನೆಪದಲ್ಲಿ ಹೊರ ರಾಜ್ಯಗಳಿಗೆ, ದೇಶ, ವಿದೇಶಗಳಿಗೆ ಹೋಗಿ ಮೊದಲ ರಾತ್ರಿಯ ಸುಖ ಅನುಭವಿಸಲು ಇಚ್ಚಿಸುತ್ತಾರೆ. ಅದು ಪರಸ್ಪರ ಅರ್ಥ ಮಾಡಿಕೊಳ್ಳಲು ಸಹಕಾರಿ ಕೂಡ, ಆದರೆ ಮನಸ್ಸಿನ ಮಿಲನಕ್ಕೆ ಜಾಗ ಮುಖ್ಯವಲ್ಲ ಸಹನೆ ಹಾಗೂ ಪ್ರೀತಿ ಮುಖ್ಯ. ಇತ್ತೀಚಿನ ದಿನಗಳಲ್ಲಿ ಜನರು ಈ ಬಹುಮುಖ್ಯವಾದ ಮೊದಲ ದಿನದ ಅರ್ಥವನ್ನೇ ಅನರ್ಥವಾಗಿಸುತ್ತಿದ್ದಾರೆ. ಕಾಲ ಕೆಟ್ಟಿದೆಯೋ ಅಥವಾ ಜನರ ಮನಸ್ಥಿತಿ ಬದಲಾಯಿತ್ತೋ..! ಗೋತ್ತಿಲ್ಲ. ಹೆಣ್ಣು ಎಷ್ಟು ಕ್ರೂರಳೋ ಅಷ್ಟೇ ಸೌಮ್ಯಳು. ಒಂದು ಬಾರಿ ಅವಳ ಮನಸ್ಸನ್ನು ಗೆದ್ದಿದ್ದೇ ಆದರೆÉ ಅದೇಂಥ ಭೂಕಂಪವಾದರೂ ಅವಳ ಮನಸ್ಸಿನಿಂದ ನೀವು ದೂರ ಸರಿಯುವುದಿಲ್ಲ. ಇಬ್ಬರ ಸಮ್ಮತದಿಂದ ಮಾತ್ರ ಮೊದಲ ರಾತ್ರಿ ಸುಖಕರವಾಗಿರಲು ಸಾಧ್ಯ. ಮೊದಲ ರಾತ್ರಿ ಎಂಬುದು ಮನಸ್ಸಿನ ಮಿಲನವೂ ಕೂಡ ಆಗಿರಲಿ.

Write A Comment