ರಾಷ್ಟ್ರೀಯ

ಮ್ಯಾಗಿ ಆರೋಗ್ಯಕ್ಕೆ ಹಾನಿಕರ: ಎಫ್‌ಎಸ್‌ಎಸ್‌ಎಐ ವರದಿ

Pinterest LinkedIn Tumblr

maggiweb

ನವದೆಹಲಿ (ಪಿಟಿಐ): ನೆಸ್ಲೆ ಕಂಪೆನಿಯ ಮ್ಯಾಗಿ ನೂಡಲ್ಸ್‌ನ 9 ವಿವಿಧ ಮಾದರಿಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಅಂಶಗಳು ಇವೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹೇಳಿದೆ.

ಎಫ್‌ಎಸ್‌ಎಸ್‌ಎಐ ಶುಕ್ರವಾರ  ವರದಿ ನೀಡಿದ್ದು, ಮ್ಯಾಗಿ ಸೇವನೆಯು ಅಸುರಕ್ಷಿತ ಮತ್ತು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿದೆ. ಭಾರತದಲ್ಲಿ ಮ್ಯಾಗಿ ತಯಾರಿಕೆ, ಮಾರಾಟ ಮತ್ತು ಆಮದನ್ನು ಕೂಡಲೇ ನಿಲ್ಲಿಸುವಂತೆಯೂ ಕಂಪೆನಿಗೆ ಸೂಚಿಸಿದೆ.

ನೆಸ್ಲೆ ಕಂಪೆನಿಯು ಪರವಾನಗಿ ಪಡೆಯದೆ ಮತ್ತು ಸುರಕ್ಷತಾ ಮಾನದಂಡಗಳನ್ನು ಪಾಲಿಸದೆ ಭಾರತದಲ್ಲಿ ‘ಮ್ಯಾಗಿ ಓಟ್ಸ್‌ ಮಸಾಲ ನೂಡಲ್ಸ್‌’ ಎಂಬ ಹೊಸ ಉತ್ಪನ್ನವನ್ನು ಪರಿಚಯಿಸಿದೆ. ಇದನ್ನೂ ಒಳಗೊಂಡಂತೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಮ್ಯಾಗಿಯ 9 ವಿವಿಧ ಮಾದರಿಗಳನ್ನು ವಾಪಸ್‌ ಪಡೆಯುವಂತೆ  ಕಂಪೆನಿಗೆ ಸೂಚಿಸಲಾಗಿದೆ ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ.

ನೆಸ್ಲೆ ಕಂಪೆನಿಯು ಮ್ಯಾಗಿಯಲ್ಲಿ ರುಚಿವರ್ಧನೆಗಾಗಿ ಬಳಸುವ ಮೋನೊಸೋಡಿಯಂ ಗ್ಲುಟಮೇಟ್ (ಎಂಎಸ್‌ಜಿ) ಅಂಶವನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಳಸಿದೆ ಎಂದೂ  ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೇಳಿದೆ.

Write A Comment