ರಾಷ್ಟ್ರೀಯ

ಇಲ್ಲಿ ಮೂತ್ರ ವಿಸರ್ಜನೆ ಮಾಡಿ ಒಂದು ರುಪಾಯಿ ಪಡೆಯಿರಿ

Pinterest LinkedIn Tumblr

Open-defectaion

ಅಹಮದಾಬಾದ್: ಸಾರ್ವಜನಿಕ ಮೂತ್ರಾಲಯಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಹಾಗು ಸಾರ್ವಜನಿಕ ತೆರೆದ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆಯನ್ನು ತಡೆಯುವ ನಿಟ್ಟಿನಲ್ಲಿ ಅಹಮದಾಬಾದ್ ನಗರ ಸಭೆ ಈ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದೆ. ತಮ್ಮ ಹತ್ತಿರದಲ್ಲಿರುವ ಶೌಚಾಲಯವನ್ನು ಬಳಸಿದವರಿಗೆ ೧ ರುಪಾಯಿ ಸಿಗಲಿದೆ.

ಇದು ೬೭ ಜಾಗಗಳಲ್ಲಿ ಪ್ರಾರಂಭಿಕವಾಗಿ ಜಾರಿಯಾಗಲಿದ್ದು ಯಶಸ್ವಿಯಾದರೆ ನಗರದ ಎಲ್ಲ ಸಾರ್ವಜನಿಕ ಶೌಚಾಲಯಗಳಲ್ಲಿ ಇದನ್ನು ಜಾರಿಗೊಳಿಸಲಾಗುವುದು ಎಂದು ಇಂಗ್ಲಿಶ್ ನಿಯತಕಾಲಿಕ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಸಾರ್ವಜನಿಕ ತೆರೆದ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ಅತಿ ಹೆಚ್ಚಿನ ದಂಡ ಹಾಕುವುದಕ್ಕೂ ಅಹಮದಾಬಾದ್ ನಗರ ಸಭೆ ಮುಂದಾಗಿದೆ.

ಅಹಮದಾಬಾದ್ ನಗರ ಸಭೆ ಮುಖ್ಯಸ್ಥ ಪ್ರವೀಣ್ ಪಾಟಿಲ್ ಹೇಳುವಂತೆ ನಗರದಲ್ಲಿ ೩೦೦ ಸಾರ್ವಜನಿಕ ಶೌಚಾಲಯಗಳಿವೆ ಎಂದಿದ್ದಾರೆ. “ಸಾರ್ವಜನಿಕ ತೆರೆದ ಪ್ರದೇಶಗಳಲ್ಲಿ ಹೆಚ್ಚು ಮೂತ್ರವಿಸರ್ಜನೆ ಮಾಡುತ್ತಿರುವ ಹತ್ತಿರದ ೬೭ ಪ್ರದೇಶಗಳಲ್ಲಿ ನಾವು ಪ್ರಾರಂಭಿಕವಾಗಿ ನಾವು ಈ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ” ಎಂದು ಹೇಳಿದ್ದರೆ.

Write A Comment