ರಾಷ್ಟ್ರೀಯ

ಕಾಣೆಯಾದ ಮಕ್ಕಳ ಪತ್ತೆಗೆ ವೆಬ್‌ಸೈಟ್‌

Pinterest LinkedIn Tumblr

Children-jpg

ಹೊಸದಿಲ್ಲಿ: ದೇಶದಲ್ಲಿ ಪ್ರತಿ ತಾಸಿಗೆ 11 ಮಕ್ಕಳು ಕಣ್ಮರೆಯಾಗುತ್ತಿದ್ದು, ಇಂಥ ಮಕ್ಕಳ ಪತ್ತೆಗೆ ನೆರವಾಗುವ ನಿಟ್ಟಿನಲ್ಲಿ ಸರಕಾರ ಜೂನ್‌ 2ರಿಂದ ವೆಬ್‌ಸೈಟ್‌ ಆರಂಭಿಸಲಿದೆ.
ಮಹಿಳೆ ಮತ್ತು ಮಕ್ಕಳ ಸಚಿವಾಲಯ ದೇಶದ ಇಂಥ ಮೊದಲ ವೆಬ್‌ಸೈಟ್‌ ಉದ್ಘಾಟಿಸಲಿದ್ದು, ಕಾಣೆಯಾದ ಮಕ್ಕಳ ಮಾಹಿತಿಯನ್ನು ಈ ವೆಬ್‌ಸೈಟ್‌ನಲ್ಲಿ ನೇರವಾಗಿ ಅಪ್‌ಲೋಡ್‌ ಮಾಡಬಹುದಾಗಿದೆ. ನಾಪತ್ತೆಯಾದ ಬಗ್ಗೆ ವರದಿ ಮಾಡುವುದಷ್ಟೇ ಅಲ್ಲದೇ, ಮಕ್ಕಳ ಪತ್ತೆಗೆ ನಡೆದಿರುವ ಪ್ರಯತ್ನದ ಬಗ್ಗೆಯೂ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಬಹುದಾಗಿದೆ. ಕಣ್ಮರೆಯಾಗಿರುವ ಮಕ್ಕಳ ಪತ್ತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಲಾಗುವ ಎಲ್ಲ ಪ್ರಶ್ನೆಗಳಿಗೆ khoyapaya.gov.in ಉತ್ತರಿಸಲಿದೆ.

ವೆಬ್‌ಸೈಟ್‌ನಲ್ಲಿ ಏನಿದೆ ?

ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಸಹಭಾಗಿತ್ವದ ವೆಬ್‌ಸೈಟ್‌ನಲ್ಲಿ ‘My child is missing’, ‘I have sighted a child’ ಮತ್ತು ‘Search a missing child’ ಎಂಬ ವಿಭಾಗಗಳಿರುತ್ತವೆ. ಮಕ್ಕಳು ಕಣ್ಮರೆಯಾದ ಸಂದರ್ಭದಲ್ಲಿ ಪೊಲೀಸರು ಕಡ್ಡಾಯವಾಗಿ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸುವಂತೆ ಸೂಚಿಸಿ ಕೋರ್ಟ್‌ ಹೊರಡಿಸಿರುವ ಆದೇಶದ ಲಿಂಕ್‌ ಸಹ ವೆಬ್‌ಸೈಟ್‌ನಲ್ಲಿದೆ.

‘ಮಕ್ಕಳು ಕಾಣೆಯಾದಾಗ ಏನು ಮಾಡಬೇಕು ಎಂಬ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಇಲ್ಲ. ಇಂಥ ವಿಷಯಗಳಲ್ಲಿ ಪೊಲೀಸರು ಪ್ರಮುಖ ಪಾತ್ರ ನಿರ್ವಹಿಸುವ ಕಾರಣ, ಪೊಲೀಸರ ನೆರವು ಪಡೆಯಲು ವೆಬ್‌ಸೈಟ್‌ ಸಹಕರಿಸುವುದು,’ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ದಿನಕ್ಕೆ 18 ಮಕ್ಕಳು ಕಣ್ಮರೆ:

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ದಿನ ಸುಮಾರು 18 ಮಕ್ಕಳು ಕಾಣೆಯಾಗುತ್ತಾರೆ. ಈ ಪೈಕಿ ನಾಲ್ವರು ಸುಳಿವು ಪತ್ತೆ ಆಗುವುದಿಲ್ಲ. ಇಂಥ ಪ್ರಕರಣಗಳ ಬಗ್ಗೆ ಹೆಚ್ಚು ಗಮನ ಹರಿಸದ ಪೊಲೀಸರು ಅಗತ್ಯ ನೆರವು ನೀಡುವುದಿಲ್ಲ ಎಂಬುದು ಪೋಷಕರು ಆರೋಪ ಎಂದು ಪೀಪಲ್ಸ್‌ ರೈಟ್‌ ಎಂಬ ಎನ್‌ಜಿಓ ವರದಿ ಹೇಳಿದೆ.

Write A Comment