ರಾಷ್ಟ್ರೀಯ

ಮೋದಿ ಬಗ್ಗೆ ಮಾತನಾಡಿದರೆ ಹುಷಾರ್..! : ಪ್ರಧಾನಿ ಟೀಕಿಸಿದ್ದ ವಿದ್ಯಾರ್ಥಿ ಸಂಘಟನೆ ನಿಷೇಧ

Pinterest LinkedIn Tumblr

Madras-IIT

ಚೆನ್ನೈ, ಮೇ 29-ಪ್ರಧಾನಿ ನರೇಂದ್ರ ಮೋದಿ ಆಡಳಿತದ ಕಾರ್ಯವೈಖರಿ ಕುರಿತಂತೆ ವಿಚಾರ ಸಂಕಿರಣ ಏರ್ಪಡಿಸಿದ್ದ ವಿದ್ಯಾರ್ಥಿಗಳ ಮೇಲೆ ಮದ್ರಾಸ್ ಐಐಟಿ  ನಿಷೇಧ ಹೇರಿದೆ. ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವಾಲಯದ ಸೂಚನೆ ಮೇರೆಗೆ ಐಐಟಿ ಮದ್ರಾಸ್‌ಈ ಕ್ರಮಕೈಗೊಂಡಿದ್ದು, ವಿಚಾರ ಸಂಕಿರಣ ಏರ್ಪಡಿಸಿದ್ದ ಐಐಟಿಯ

ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್‌ನ ವಿದ್ಯಾರ್ಥಿಗಳ ಸಂಘಟನೆಯ ಮೇಲೆ ಈ ನಿಷೇಧ ಹೇರಿದೆ. ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್ ಸಂಘಟನೆಯ ವಿದ್ಯಾರ್ಥಿಗಳು ಮೋದಿ ಆಡಳಿತದ ಬಗ್ಗೆ ಇಂಥದ್ದೊಂದು ವಿಚಾರ ಸಂಕಿರಣ ಆಯೋಜಿಸಿದ್ದಾರೆ ಎಂಬ ಮಾಹಿತಿ ಪಡೆದ ಗೃಹ ಖಾತೆ ತಕ್ಷಣ ಈ ವಿದ್ಯಾರ್ಥಿ ಸಂಘಟನೆಯನ್ನೇ ನಿಷೇಧಿಸಿದೆ. ನರೇಂದ್ರ ಮೋದಿ ಸರ್ಕಾರದ ಹಿಂದಿ ಹೇರಿಕೆ, ಗೋಹತ್ಯೆ ನಿಷೇಧ, ಭೂಸ್ವಾಧೀನ ಕಾಯ್ದೆಗಳ ವಿರುದ್ಧ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳನ್ನು ಸಂಘಟಿಸಲು ಪೆರಿಯಾರ್ ಫೋರಮ್ ಸಂಘಟನೆ ಈ ಕಾರ್ಯಕ್ರಮ ಆಯೋಜಿಸಿತ್ತು. ಈ ಬಗ್ಗೆ ದೂರು ಕೊಡುವುದಕ್ಕೂ ನಿರ್ಬಂಧ ಹೇರಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಮಾನವ ಸಂಪನ್ಮೂಲ ಸಚಿವಾಲಯದ ಈ ಕೃತ್ಯವನ್ನು ಖಂಡಿಸಿರುವ ಜೆಡಿಯು ನಾಯಕ ಅಲಿ ಅನ್ವರ್, ಇದು ಕೇಂದ್ರದ ಅತ್ಯಂತ ಅಪಾಯಕಾರಿ ನಡೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಪ್ರಜಾತಂತ್ರಕ್ಕೇ ಗಂಡಾಂತರಕಾರಿ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳೂ ನಮ್ಮ ಹೋರಾಟ ಹತ್ತಿಕ್ಕುವ ಎನ್‌ಡಿಎ ಸರ್ಕಾರ ಸರ್ವಾಧಿಕಾರಿ ಧೋರಣೆ ತಳೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Write A Comment