ಅಂತರಾಷ್ಟ್ರೀಯ

ಅಮೆರಿಕ: 11ರ ಹರೆಯದ ಭಾರತೀಯ ಬಾಲಕನೀಗ ಪದವೀಧರ!

Pinterest LinkedIn Tumblr

1515893

ವಾಷಿಂಗ್ಟನ್, ಮೇ 24: ಸರಿ ಸುಮಾರು 11 ವರ್ಷಗಳ ಹರೆಯದ ಭಾರತೀಯ ಮೂಲದ ಅಮೆರಿಕನ್ ಬಾಲಕ ತನಿಷ್ಕ್ ಅಬ್ರಹಾಂ ಕ್ಯಾಲಿಫೋರ್ನಿಯದ ಅಮೆರಿಕನ್ ರಿವರ್ ಕಾಲೇಜ್‌ನಿಂದ ಗಣಿತ, ವಿಜ್ಞಾನ ಹಾಗೂ ವಿದೇಶಿ ಭಾಷಾ ಅಧ್ಯಯನದೊಂದಿಗೆ ಮೂರು ವಿಷಯಗಳಲ್ಲಿ ಸಂಯೋಜಿತ ಪದವಿ ಗಳಿಸಿ ಅಚ್ಚರಿ ಮೂಡಿಸಿದ್ದಾನೆ.

ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರಲು ಬಯಸುವ ತನಿಷ್ಕ್, ಭವಿಷ್ಯದಲ್ಲಿ ಅಮೆರಿಕದ ಅಧ್ಯಕ್ಷನಾಗುವ ಕನಸು ಕಾಣುತ್ತಿದ್ದಾನೆ. ಪ್ರೌಢಶಾಲಾ ಶಿಕ್ಷಣ ಪೂರೈಸುವ ಮೊದಲೇ ಬಾಲಕನು 42 ಕಾಲೇಜು ಕ್ರೆಡಿಟ್‌ಗಳನ್ನು ಗಳಿಸಿಕೊಂಡಿದ್ದಾನೆ.

‘‘ಕಲಿಕೆ ನನ್ನ ಆಸಕ್ತಿಯಾಗಿದೆ. ಹಾಗಾಗಿ ಕಲಿಯುವ ಬಯಕೆಯನ್ನು ನಾನು ಅನುಸರಿಸಿದ್ದೇನೆ ಮತ್ತು ಈ ಹಂತಕ್ಕೆ ತಲುಪಿದ್ದೇನೆ’’ ಎಂದು ಇತ್ತೀಚೆಗೆ ಪದವಿ ಸ್ವೀಕರಿಸಿದ ವೇಳೆ ಬಾಲಕ ತನಿಷ್ಕ್ ಸುದ್ದಿಗಾರರಿಗೆ ತಿಳಿಸಿದ್ದಾನೆ.

ತನಿಷ್ಕ್‌ನ ತಾಯಿ ತಾಜಿ ಅಬ್ರಹಾಂ ಪಶುವೈದ್ಯೆಯಾಗಿದ್ದಾರೆ. 2014ರಲ್ಲಿ ತನ್ನ ಹತ್ತನೆ ವಯಸ್ಸಿನಲ್ಲೇ ತನಿಷ್ಕ್ ಪ್ರೌಢಶಾಲಾ ಶಿಕ್ಷಣ ಪೂರೈಸಿ ದಾಖಲೆ ನಿರ್ಮಿಸಿದ್ದನು.
ತನಿಷ್ಕ್ ಅಬ್ರಹಾಂ ತನ್ನ ನಾಲ್ಕನೆಯ ವಯಸ್ಸಿನಲ್ಲೇ ಉನ್ನತ ಬುದ್ಧಿಮತ್ತೆ(ಐಕ್ಯೂ) ಸಂಸ್ಥೆಯಾದ ಮೆನ್ಸಾಕ್ಕೆ ಸೇರ್ಪಡೆಗೊಂಡಿದ್ದನು.

Write A Comment