ರಾಷ್ಟ್ರೀಯ

ಬಾಬಾ ರಾಮದೇವ್ ಯು-ಟರ್ನ್: ಮೋದಿ ಸಂಪುಟದ ಸಚಿವರು ಅಸಭ್ಯರು, ರಾಹುಲ್ ಗಾಂಧಿ ಶ್ರೇಷ್ಠ ವ್ಯಕ್ತಿ

Pinterest LinkedIn Tumblr

rama

ಹರಿದ್ವಾರ: ಬಿಜೆಪಿ ಪರ ಮತ್ತು ಕಾಂಗ್ರೆಸ್ ವಿರೋಧಿ ಎಂದು ಕರೆಸಿಕೊಳ್ಳುವ ಪ್ರಖ್ಯಾತ ಯೋಗಗುರು ಬಾಬಾ ರಾಮದೇವ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಹೊಗಳಿ, ಮೋದಿ ಸರಕಾರದ ಮಂತ್ರಿಗಳನ್ನು ಗರ್ವಿಗಳೆಂದು ಜರಿದು ದಿಗ್ಭ್ರಾಂತಗೊಳಿಸಿದ್ದಾರೆ.

ಮೋದಿ ಸರಕಾರ ಒಂದು ವರ್ಷ ಪೂರೈಸಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ಬಾಬಾ, ಪ್ರಧಾನಿ ಮೋದಿಯವರನ್ನು ಕೊಂಡಾಡಿದರು. ಆದರೆ ಅವರ ಸಂಪುಟದಲ್ಲಿ ಕೆಲವು ಸಚಿವರು ಗರ್ವದಿಂದ ಮೆರೆದಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಸರಕಾರದ ಕೆಲವು ನೀತಿಗಳ ವಿರುದ್ಧ ರಾಹುಲ್ ಗಾಂಧಿಯವರ ಆಕ್ರಮಣಕಾರಿ ಪ್ರಚಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಬಾಬಾ, ರಾಹುಲ್ ಅವರ ಈ ನಡೆ ವಾಸ್ತವವಾಗಿ ಸತ್ತೇ ಹೋಗಿದೆ ಎನ್ನುವಂತಿದ್ದ ಕೈ ಪಕ್ಷಕ್ಕೆ ಹೊಸ  ಜೀವಸೆಲೆಯಾಗಿ ಪರಿಣಮಿಸುತ್ತಿದೆ.  ಇಂತಹ ದೊಡ್ಡ ರಾಜಕೀಯ ಮನೆ (ಕಾಂಗ್ರೆಸ್) ಜಡತ್ವದ ಕೆಳಗೆ ಸಿಕ್ಕಿಹಾಕಿಕೊಂಡಿತ್ತು.  ಆದರೆ ಅದೀಗ ತನ್ನ ಚಕ್ರಗಳಲ್ಲಿ ಚಲಿಸಲು ಪ್ರಾರಂಭಿಸಿದೆ,” ಎಂದು ಹೇಳಿದ್ದಾರೆ.

“ಅಭಿವೃದ್ಧಿ ಮತ್ತು ರೈತರ ಸಮಸ್ಯೆಗಳನ್ನು ಕುರಿತಂತೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ಯಶಸ್ವಿಯಾಗಿದೆ. ಈಗ ರೈತರ ವಿಶ್ವಾಸವನ್ನು ಮರಳಿ ಗಳಿಸುವ ಸವಾಲು ಕೇಂದ್ರದ ಮುಂದಿದೆ. ಅವರು ಹೊಸ ಕೃಷಿ ನೀತಿ ರೂಪಿಸಬೇಕಿದೆ ಎಂದು ಬಾಬಾ ಸಲಹೆ ನೀಡಿದ್ದಾರೆ.

ಭೂಸ್ವಾಧೀನ ಮಸೂದೆ ಕುರಿತು ಮಾತನಾಡಿದ ಬಾಬಾ, “ಇದು ಕೆಲವು ಪ್ರದೇಶಗಳಲ್ಲಿ ಸೂಕ್ತ. ಇದರ ಉತ್ತಮ ಅಂಶಗಳ ಬಗ್ಗೆ ಹೇಳುವುದಾದರೆ, ಇದು ರೈತರಿಗೆ ವಿದ್ಯುತ್, ಗೊಬ್ಬರ ಮತ್ತು ನೀರಾವರಿ ಮತ್ತು ಸಮರ್ಪಕ ಕನಿಷ್ಠ ಬೆಂಬಲ ಬೆಲೆ  ಒದಗಿಸಲಿದೆ. ಆದರೆ ರೈತರನ್ನು ಕೌಶಲ್ಯರಹಿತ ಕಾರ್ಮಿಕರು ರೀತಿಯಲ್ಲಿ ನೋಡುವುದು ದುರದೃಷ್ಟಕರ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Write A Comment