ಅಂತರಾಷ್ಟ್ರೀಯ

ಹಿಂದು ಎಂಬ ಕಾರಣಕ್ಕೆ ಭಾರತೀಯನನ್ನು ಹಳಿಗೆ ತಳ್ಳಿ ಹತ್ಯೆಗೈದ ಅಮೆರಿಕ ಮಹಿಳೆಗೆ 24 ವರ್ಷ ಜೈಲುಶಿಕ್ಷೆ!

Pinterest LinkedIn Tumblr

Women-In-Jail

ನ್ಯೂಯಾರ್ಕ್: ಧರ್ಮಾಂಧದಲ್ಲಿದ್ದ ವಿದೇಶಿ ಮಹಿಳೆಯೊಬ್ಬಳು ಕೇವಲ ಹಿಂದು ಎಂಬ ಕಾರಣಕ್ಕೆ ಭಾರತೀಯನೊಬ್ಬನನ್ನು ರೈಲಿನ ಹಳಿಗೆ ತಳ್ಳಿ, ಹತ್ಯೆ ಮಾಡಿ ಇದೀಗ 24 ವರ್ಷ ಜೈಲು ಶಿಕ್ಷೆ ಪಡೆದಿರುವ ಘಟನೆ ನ್ಯೂಯಾರ್ಕ್ ನ ಕ್ವೀನ್ಸ್ ಪ್ರದೇಶದಲ್ಲಿ ನಡೆದಿದೆ.

2012ರ ಡಿಸೆಂಬರ್ 27 ರಂದು ಭಾರತದ ಸುನಂದೋ ಸೇನ್ (46) ಎಂಬುವವರು ನ್ಯೂಯಾರ್ಕ್ ನ ಸಬ್ ವೇ ರೈಲು ನಿಲ್ದಾಣದ ಬಳಿ ನಿಂತಿದ್ದರು. ಸುನಂದೋ ಸೇನ್ ಹಿಂದೆಯಿಂದ ಹಿಂದೆ ನಿಂತಿದ್ದ ಅಮೆರಿಕದ ಎರಿಕ ಮೆನನ್ಡೇಜ್ ಎಂಬ ಮಹಿಳೆ, ರೈಲು ಬರುತ್ತಿದ್ದ ಸಂದರ್ಭ ನೋಡಿ ಸುನಂದೋ ಸೇನ್ ರನ್ನು ಹಳಿಗೆ ತಳ್ಳಿದ್ದಾಳೆ. ಈ ವೇಳೆ ರೈಲು ಬರುತ್ತಿದ್ದ ರಭಸಕ್ಕೆ ಸುನಂದೋ ಸೇನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹತ್ಯೆ ಮಾಡಿದ ಮಹಿಳೆಯನ್ನು ನ್ಯೂಯಾರ್ಕ್ ಪೊಲೀಸರು ಬಂಧಿನಕ್ಕೊಳಪಡಿಸಿದ್ದರು.

ಪ್ರಕರಣ ಸಂಬಂಧ ಇಂದು ವಿಚಾರಣೆ ಕೈಗೊಂಡಿದ್ದ ನ್ಯೂಯಾರ್ಕ್ ನ ನ್ಯಾಯಾಲಯವು ಎರಿಕ ಮೆನನ್ಡೇಜ್ ಅವರನ್ನು ಹಲವು ಪ್ರಶ್ನೆಗಳನ್ನು ಕೇಳಿತು. ಈ ವೇಳೆ ಎರಿಕ ಮೆನನ್ಡೇಜ್ ತನಗೇನು ನೆನಪಿಲ್ಲ, ನಾನು ಆತನನ್ನು ಯಾವ ಕಾರಣಕ್ಕೆ ಹಳಿಗೆ ತಳ್ಳಿ ಹತ್ಯೆ ಮಾಡಿದೆ ಎಂಬುದು ನನಗೆ ಗೊತ್ತೇ ಇಲ್ಲ ಎಂದು ಹೇಳಿದ್ದಳು.

ಇದಕ್ಕೆ ಉತ್ತರಿಸಿದ ನ್ಯಾಯಾಧೀಶರು ಹತ್ಯೆ ಮಾಡಿದ ನಂತರ ಪೊಲೀಸರು ನಿನ್ನನ್ನು ಬಂಧಿಸುವ ವೇಳೆ ಪ್ರಶ್ನೆ ಕೇಳಿದ್ದರು. ಯಾವ ಕಾರಣಕ್ಕೆ ಎಂದು. ಆಗ ನೀನು ನನಗೆ ಹಿಂದೂ ಮತ್ತು ಮುಸ್ಲಿಮರು ಎಂದರೆ ಇಷ್ಟವಿಲ್ಲ ಅವರನ್ನು ದ್ವೇಷಿಸುತ್ತೇನೆ. ಈತ ಹಿಂದು ಆದ ಕಾರಣಕ್ಕೆ ಹತ್ಯೆ ಮಾಡಿದ್ದೇನೆ ಎಂದು ಹೇಳಿದ್ದೆ ಎಂದರು.

ಇದಕ್ಕುತ್ತರಿಸಿದ ಎರಿಕ ಮೆನನ್ಡೇಜ್ ನನಗೆ ಏನು ನೆನಪಿಲ್ಲ. ಆತ ಸಾಯುತ್ತಿರುವ ಭೀಕರ ದೃಶ್ಯದ ಸನ್ನಿವೇಶವಷ್ಟೇ ನನಗೆ ನೆನಪಿದೆ ಎಂದು ಹೇಳಿದಳು. ವಾದ-ಪ್ರತಿವಾದ ಕೇಳಿದ ನಂತರ ನ್ಯಾಯಾಧೀಶರಿಗೆ ಎರಿಕ ಮೆನನ್ಡೇಜ್ ಅವರ ತಪ್ಪಿರುವುದಾಗಿ ತಿಳಿದುಬಂದಿದೆ.. ನಂತರ ಆಕೆಗೆ ಕನಿಷ್ಟ 24 ವರ್ಷ ಶಿಕ್ಷೆ ವಿಧಿಸಿದ್ದಾರೆ.

ಮೂಲಗಳ ಪ್ರಕಾರ ಭಾರತೀಯ ಮೂಲದ ಮೃತ ಸುನಂದೋ ಸೇನ್ ಅವಿವಾಹಿತರಾಗಿದ್ದು, ಇವರ ಪೋಷಕರು ಹಲವು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದು, ನ್ಯೂಯಾರ್ಕ್ ನಲ್ಲಿ ಖಾಸಗಿ ರೂಮ್ ಒಂದರಲ್ಲಿ ವಾಸವಾಗಿದ್ದರು ಹೇಳಲಾಗುತ್ತಿದೆ.

Write A Comment