ರಾಷ್ಟ್ರೀಯ

ಕಣ್ಣು ಹೊಡೆದು ಕೆನ್ನೆ ಊದಿಸಿಕೊಂಡ ರಾಜಕೀಯ ಪುಢಾರಿ..! ಕೆರಳಿದ ಯುವತಿಯಿಂದ ಥಳಿತ

Pinterest LinkedIn Tumblr

Agra-girl-beat

ಆಗ್ರಾ, ಮೇ 19: ರಾಜಕಾರಣಿಗಳ ಹಿಂಬಾಲಕರು ತಮ್ಮ ನಾಯಕರ ಹೆಸರು ಹೇಳಿಕೊಂಡು ಏನೆಲ್ಲ ಮಾಡುವುದನ್ನು ನಾವು ನಿತ್ಯ ಎಲ್ಲೆಡೆ ಕಾಣುತ್ತೇವೆ. ಇಂಥವರ ಕಿರುಕುಳಕ್ಕೆ ಈಡಾಗುವವರು ಎಷ್ಟೋ ಜನ. ಅದರಲ್ಲಿ ಕೆಲವರು ಮಾತ್ರ ಇಂಥಾ ಪುಡಿ ರೌಡಿಗಳಿಗೆ ಬುದ್ಧಿ ಕಲಿಸದೆ ಬಿಡುವುದಿಲ್ಲ. ಅಂತಹ ಒಂದು ಘಟನೆ ಇಂದು ಆಗ್ರಾದಲ್ಲಿ ನಡೆದಿದೆ.

ಘಟನೆ ವಿವರ: ಉತ್ತರಪ್ರದೇಶದ ಆಡಳಿತಾರೂಢ ಸಮಾಜವಾದಿ ಪಾರ್ಟಿ ನಾಯಕರೊಬ್ಬರ ಭಂಟನೊಬ್ಬ ಇಂದೂ ಕೂಡ ತನ್ನ ಛಾಳಿ ಮುಂದುವರೆಸಿದ್ದ. ತನ್ನ ನಾಯಕನ ಕಾರಿನಲ್ಲಿ ಕುಳಿತಿದ್ದ ಈ ಪುಢಾರಿ ಪಕ್ಕದಲ್ಲೇ ನಿಂತಿದ್ದ ಯುವತಿಗೆ ಕಣ್ಣು ಹೊಡೆದಿದ್ದಾನೆ. ತಾವು ಕೂತಿದ್ದ ಕಾರು ಪಕ್ಷದ ನಾಯಕನದ್ದಾಗಿರೋದ್ರಿಂದ ಆ ಹುಡುಗಿ ಸುಮ್ಮನಿರುತ್ತಾಳೆಂದು ಆ ಮೂರ್ಖ ಭಾವಿಸಿದ್ದ. ಆದರೆ ಆಗಿದ್ದೇ ಬೇರೆ.

23ರ ಹರೆಯದ ಆ ಸುಂದರ ಯುವತಿ ಕೆರಳಿ ದುರ್ಗಿಯ ಅವತಾರ ತಾಳಿದಳು. ಎಸ್‌ಪಿ ನಾಯಕನಿಗೆ ಸೇರಿದ ಆ ಮರ್ಸಿಡೀಸ್ ಕಾರಿನ ಬಾನೆಟ್ ಮೇಲೆ ಜಂಪ್ ಮಾಡಿದ ಯುವತಿ, ಅದರ ಗಾಜುಗಳನ್ನು ಪುಡಿಪುಡಿ ಮಾಡಿ ನಾಯಕನ ಕೊರಳಪಟ್ಟಿ ಹಿಡಿದಳು. ಅವನು ಆಚೆ ಈಚೆ ನೋಡುವಷ್ಟರಲ್ಲೇ ಕೆನ್ನೆಗೊಂದು ಬಾರಿಸಿಯೇ ಬಿಟ್ಟಳು.

ಈ ಹುಡುಗಿಯ ಹಠಾತ್ ದಾಳಿಯಿಂದ ಕಕ್ಕಾಬಿಕ್ಕಿಯಾದ ಮರಿ ಪುಢಾರಿ ದಿಕ್ಕು ತೋಚದೆ ಸುಮ್ಮನಾಗಿಬಿಟ್ಟ. ಅಷ್ಟರಲ್ಲಿ ಸುತ್ತಮುತ್ತಲಿನವರು ಜಮಾಯಿಸಿದರು. ಅಷ್ಟರಲ್ಲಾಗಲೇ ವ್ಯಗ್ರಳಾಗಿದ್ದ ಯುವತಿ, ಕಿಟಕಿ ಗಾಜುಗಳನ್ನೂ ಒಡೆದು ಹಾಕಿ ಸಮಾಜವಾದಿ ಪಾರ್ಟಿಯ ಧ್ವಜವನ್ನು ಚಿಂದಿ ಚಿಂದಿ ಮಾಡಿ ಬಿಸಾಡಿದ್ದಳು. ನಿನಗೆ ತಾಕತ್ತಿದ್ದರೆ ಕಾರಿನಿಂದ ಕೆಳಗಿಳಿದು ಬಂದು ನನ್ನೆದುರು ನಿಲ್ಲು ಎಂದು ಸವಾಲನ್ನೂ ಹಾಕಿದಳು. ನಾಯಕನ ಭಂಟ ತಬ್ಬಿಬ್ಬಾಗಿ ತೆಪ್ಪಗೆ ಕುಳಿತ. ದೊಡ್ಡ ನಾಯಕ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಾರ ಈ ಹುಡುಗಿ ಪ್ರಸಂಗದ ವಿಡಿಯೋ ಕ್ಲಿಪ್‌ಗಳು ಈಗಾಗಲೇ ಅನೇಕ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ.

Write A Comment