ಅಂತರಾಷ್ಟ್ರೀಯ

ಚೀನಾದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ; 10 ಬಿಲಿಯನ್ ಒಪ್ಪಂದದ ಮೇಲೆ ಮೋದಿ ಕಣ್ಣು

Pinterest LinkedIn Tumblr

Modi-in-china

ಕ್ಸಿಯಾನ್, ಮೇ 14: ಭಾರತ-ಚೀನಾ ನಡುವೆ ರಸ್ತೆ ನಿರ್ಮಾಣ, ಗಡಿ ಸಮಸ್ಯೆ ನಿವಾರಣೆ, ಇ-ವೀಸಾ ಸೇವೆ ಸೇರಿದಂತೆ ಹಲವಾರು ಮಹತ್ವದ ಒಪ್ಪಂದಗಳಿಗೆ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಸಹಿ ಹಾಕುವ ಮೂಲಕ ಉಭಯ ರಾಷ್ಟ್ರಗಳ ನಡುವಿನ ಹೊಸ ಬಾಂಧವ್ಯಕ್ಕೆ ಮುನ್ನುಡಿ ಬರೆಯುವ ಸಾಧ್ಯತೆಗಳಿವೆ.

ಪ್ರಧಾನಿಯಾದ ನಂತರ ಇದೇ ಮೊದಲ ಬಾರಿಗೆ ಚೀನಾಕ್ಕೆ ಆಗಮಿಸಿರುವ ಮೋದಿ ಅವರಿಗೆ ಅಲ್ಲಿನ ಸಾಂಪ್ರದಾಯಿಕ ಪದ್ಧತಿಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ನರೇಂದ್ರ ಮೋದಿ ಅವರ ನಡುವಿನ ಉನ್ನತ ಮಟ್ಟದ ಮಾತುಕತೆ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಹೊಸ ಮುನ್ನುಡಿ ಬರೆಯಲಿದೆ ಎಂದು ಚೀನಾ ಪತ್ರಿಕೆಗಳು ಉಲ್ಲೇಖಿಸಿವೆ.

ಮೋದಿ ಇಲ್ಲಿ ಇರುವವರೆಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಜತೆಗಿರಲು ತೀರ್ಮಾನಿಸಿದ್ದಾರೆ. ಅಧ್ಯಕ್ಷರು ತಮ್ಮ ಆತ್ಮೀಯರೊಂದಿಗೆ ಮಾತ್ರ ಈ ರೀತಿಯಿರಲು ಇಚ್ಚಿಸುತ್ತಾರೆ. ಇಂದು ಮೋದಿ ಚೀನಾದ ಇತಿಹಾಸ ಪ್ರಸಿದ್ಧ ಯುದ್ಧ ಸ್ಮಾರಕ ಟೆರ್ರಾಕೋಟಾ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಸುಮಾರು ಒಂದು ಗಂಟೆಗಳ ಕಾಲ ಅಲ್ಲಿನ ಕಲಾಕೃತಿಗಳನ್ನು ವೀಕ್ಷಿಸಿದರು.

Modi-in-china12

Modi-in-china1

ಚೀನಾದ ಮೊದಲ ಸಾಮ್ರಾಟ ಕ್ವಿನ್ ಕ್ಸಿ ಹಾಂಗ್ ಅವರ ಕಾಲದ ಸಹಸ್ರಾರು ಸೈನಿಕರ ಶಿಲ್ಪಗಳಿರುವ ವಸ್ತು ಸಂಗ್ರಹಾಲಯಕ್ಕೆ ಮಾರು ಹೋದ ಮೋದಿ ಅವರು ಪ್ರೇಕ್ಷಕರ ಪುಸ್ತಕದಲ್ಲಿ ಈ ಸ್ಥಳ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ ಎಂದು ಬರೆಯುವ ಮೂಲಕ ಅಭಿಮಾನ ಮೆರೆದರು. ಮೂರು ದಿನಗಳ ಕಾಲ ಚೀನಾ ಪ್ರವಾಸದಲ್ಲಿರುವ ಮೋದಿ ಅವರಿಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಅಧಿಕಾರಿಗಳ ನಡುವೆ ಶೃಂಗಸಭೆ ನಡೆಯಲಿದೆ. ಇದಕ್ಕೂ ಮುನ್ನ ಮೋದಿ ಅವರಿಗೆ ಉನ್ನತ ಮಟ್ಟದ ಸತ್ಕಾರ ಮಾಡಲಾಗುವುದು. ನಾಳೆ ಉಭಯ ನಾಯಕರ ನಡುವೆ ಮಹತ್ವದ ಮಾತುಕತೆ ನಡೆಯಲಿದ್ದು, ಈ ಸಂದರ್ಭದಲ್ಲಿ 10 ಬಿಲಿಯನ್ ಡಾಲರ್‌ಗಳ 20ಕ್ಕೂ ಹೆಚ್ಚು ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಮಾತುಕತೆ ಸಂದರ್ಭದಲ್ಲಿ ಸಮುದ್ರದ ಮಾರ್ಗವಾಗಿ ಚೀನಾಗೆ ರಸ್ತೆ ನಿರ್ಮಿಸುವುದು, ಗಡಿ ಸಮಸ್ಯೆ ನಿವಾರಣೆ ಮತ್ತು ವ್ಯಾಪಾರ ಸಂಬಂಧ ವೃದ್ಧಿಸಿಕೊಳ್ಳುವುದು ಸೇರಿದಂತೆ 20ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ.

Write A Comment