ರಾಷ್ಟ್ರೀಯ

ಬೈಕಿಗೆ ಬಸ್ ಡಿಕ್ಕಿ ಹೊಡೆಸಿದ ಚಾಲಕನನ್ನು ಬಡಿದು ಕೊಂದ ಅಪ್ಪ- ಮಗ

Pinterest LinkedIn Tumblr

9595mobike-graf-1

ನವದೆಹಲಿ: ಕಳೆದ ತಿಂಗಳಷ್ಟೇ ವ್ಯಕ್ತಿಯೊಬ್ಬ ತಮ್ಮ ಐ 20 ಕಾರಿಗೆ ಬೈಕ್ ಡಿಕ್ಕಿ ಹೊಡೆಸಿದ್ದನೆಂಬ ಕಾರಣಕ್ಕೆ ಆತನನ್ನು ಕಾರಿನಲ್ಲಿದ್ದವರು ಥಳಿಸಿ ಕೊಂದಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂತಹುದೇ ಪ್ರಕರಣ ನಡೆದಿದೆ.

ನವದೆಹಲಿಯಲ್ಲಿಯೇ ಈ ಘಟನೆ ಭಾನುವಾರ ನಡೆದಿದ್ದು, ತಂದೆ- ಮಗ ಬೈಕಿನಲ್ಲಿ ಹೋಗುತ್ತಿರುವ ವೇಳೆ ದೆಹಲಿ ಸಾರಿಗೆ ನಿಗಮದ ಬಸ್ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಇದರಿಂದ ರೊಚ್ಚಿಗೆದ್ದ ತಂದೆ- ಮಗ ಬಸ್ ಚಾಲಕನನ್ನು ಹಿಡಿದು ತೀವ್ರವಾಗಿ ಥಳಿಸಿದ್ದು, ಇದರಿಂದಾಗಿ ಆತ ಸಾವಿಗೀಡಾಗಿದ್ದಾನೆ.

ಆರೋಪಿಗಳ ಪೈಕಿ ಮಗ ಪರಾರಿಯಾಗಿದ್ದರೆ ತಂದೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಚಾಲಕನನ್ನು ಅಪ್ಪ- ಮಗ ಥಳಿಸುತ್ತಿದ್ದ ವೇಳೆ ನಿರ್ವಾಹಕ ಸೇರಿದಂತೆ ಬಸ್ ನಲ್ಲಿದ್ದ ಪ್ರಯಾಣಿಕರ್ಯಾರು ಆತನ ಸಹಾಯಕ್ಕೆ ಧಾವಿಸಿಲ್ಲವೆಂದು ಹೇಳಲಾಗಿದೆ.

Write A Comment