ರಾಷ್ಟ್ರೀಯ

ಸಾಮಾನ್ಯರ ಜಮೀನು ಕಬಳಿಸಲು ಪ್ರಮುಖ ಸ್ಥಾನಗಳನ್ನು ತುಂಬಿಲ್ಲ: ರಾಹುಲ್

Pinterest LinkedIn Tumblr

Sonia-Rahul

ನವದೆಹಲಿ: ನರೇಂದ್ರ ಮೋದಿ ಸರ್ಕಾರವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸರ್ಕಾರದ ಪ್ರಮುಖ ಸ್ಥಾನಗಳಾದ ಆರ್ ಟಿ ಐ ಆಯುಕ್ತ, ಲೋಕಪಾಲ್ ಹಾಗೂ ಮುಖ್ಯ ಕಣ್ಗಾವಲು ಆಯುಕ್ತ ಸ್ಥಾನಗಳನ್ನು ಖಾಲಿ ಬಿಟ್ಟಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಮತ್ತೆ ಸೂಟು-ಬೂಟು ಸರ್ಕಾರ ಇದು ಎಂದಿರುವ ಗಾಂಧಿ, ಈ ಸ್ಥಾನಗಳನ್ನು ತುಂಬದೆ ಖಾಲಿ ಬಿಟ್ಟಿರುವುದೇಕೆಂದರೆ ಸಾಮಾನ್ಯ ಜನರ ನೆಲವನ್ನು ಕಬಳಿಸಲು ಸುಲಭವಾಗಲಿ ಎಂದು ಹಾಗು ಉದ್ದಿಮೆದಾರರಿಗೆ ಸಹಾಯ ಮಾಡಲು ಎಂದು ದೂರಿದ್ದಾರೆ.

“ನಮ್ಮ ಸರ್ಕಾರ ಪಾರದರ್ಶಕತೆಗೆ ಹೋರಾಡಿತು. ಆರ್ ಟಿ ಐ ಆಯುಕ್ತ, ಲೋಕಪಾಲ್ ಹಾಗೂ ಮುಖ್ಯ ಕಣ್ಗಾವಲು ಆಯುಕ್ತ ಸ್ಥಾನಗಳನ್ನು ಖಾಲಿ ಬಿಡಲಾಗಿದೆ.

“ಏಕೆಂದರೆ ಇದು ಸೂಟು-ಬೂಟು ಸರ್ಕಾರ. ಸಾಮಾನ್ಯ ಜನರ ನೆಲವನ್ನು ಕಬಳಿಸಲು ಸುಲಭವಾಗಲಿ ಎಂದು ಹಾಗು ಉದ್ದಿಮೆದಾರರಿಗೆ ಸಹಾಯ ಮಾಡಲು ಸರ್ಕಾರ ಹೀಗೆ ಮಾಡುತ್ತಿದೆ” ಎಂದು ಸಂಸತ್ತಿನ ಹೊರಗೆ ಪತ್ರಕರ್ತರಿಗೆ ತಿಳಿಸಿದ್ದಾರೆ.

Write A Comment