ನವದೆಹಲಿ: ಬರಲಿರುವ ಸಿನೆಮಾ “ಜಾನಿಬ್ – ಅ ಸೆಲೆಬ್ರೇಶನ್ ಆಫ್ ಹುಮ್ಯಾನಿಟಿ” ಎಂಬ ರಾಜಕೀಯ ಸಿನೆಮಾಗೆ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಗೀತರಚನೆ ಮಾಡಿದ್ದಾರೆ.
ಪ್ರಣವ್ ಸಿಂಗ್ ನಿರ್ದೇಶನದ ಸಾಮಾಜಿಕ-ರಾಜಕೀಯ ರೊಮ್ಯಾಂಟಿಕ್ ಡ್ರಾಮಾದಲ್ಲಿ ಅಶುತೋಶ್ ರಾಣಾ, ಜಿಮ್ಮಿ ಶೇರ್ಗಿಲ್, ಸಂಜಯ್ ಸೂರಿ ಮಾತು ಹಿತೇನ್ ತೇಜ್ವಾನಿ ನಟಿಸಿದ್ದಾರೆ.
ಕೋಮು ಗಲಭೆ ಮತ್ತು ರಾಜಕೀಯ ಅಸ್ಥಿರತೆಯ ಹಿನ್ನಲೆಯಲ್ಲಿ ಹಿಂದು ಹುಡುಗ ಹಾಗು ಮುಸ್ಲಿಂ ಹುಡುಗಿ ಜಾನಿಬ್ ನಡುವೆ ನಡೆಯುವ ರೋಮ್ಯಾಂಟಿಕ್ ಪ್ರೇಮಕಥೆಯನ್ನು ಸಿನೆಮಾ ಹೊಂದಿದೆ.
“ಸಾಮಾಜಿಕ ಸಂದೇಶ ಹರಡಲು ಸಿನೆಮಾ ಪರಿಣಾಮಕಾರಿ ಮಾಧ್ಯಮ” ಎಂದಿದ್ದಾರೆ ಕಪಿಲ್ ಸಿಬಲ್.
“ನಮ್ಮ ಗ್ರಹಿಕೆ ಮತ್ತು ಮಾನಸಿಕ ಸ್ಥಿತಿಯನ್ನು ಬದಲಾಯಿಸಿಕೊಳ್ಳದ ಹೊರತು ಯಾವುದೇ ಕಾನೂನು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ” ಎಂದು ಕಪಿಲ್ ಹೇಳಿದ್ದಾರೆ.