ರಾಷ್ಟ್ರೀಯ

ರಾಮಜನ್ಮಭೂಮಿ ಅಯೋಧ್ಯೆಯಲ್ಲಿಲ್ಲ, ಪಾಕಿಸ್ತಾನದಲ್ಲಿದೆ: ಖುರೇಷಿ

Pinterest LinkedIn Tumblr

pak

ಹೈದ್ರಾಬಾದ್: ರಾಮ ಜನ್ಮಭೂಮಿ ಪಾಕಿಸ್ತಾನದಲ್ಲಿದೆಯೇ ಹೊರತು ಆಯೋಧ್ಯೆಯಲ್ಲಲ್ಲ ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಅಬ್ದುಲ್ ರಹೀಮ್ ಖುರೇಶಿ ಹೇಳಿದ್ದಾರೆ.

ಅಯೋಧ್ಯೆ ಕಾ ತನಾಝಾ ಎನ್ನುವ ಹೆಸರಿನ ತಾವೇ ಬರೆದಿರುವ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿರುವುದರಿಂದ ಬಾಬ್ರಿ ಮಸೀದಿ ಪರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳು ಕಡಿಮೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಶೋಧಕ ಖ್ಯಾತ ಅರ್ಕಿಯಾಲಾಜಿಸ್ಟ್ ಅವರ ಪ್ರಕಾರ, ರಾಮದೇವರ ಜನ್ಮಭೂಮಿ ಅಯೋಧ್ಯೆಯಲ್ಲ.  ಪಾಕಿಸ್ತಾನದಲ್ಲಿರುವ ರಾಮದೇರಿ ಪಟ್ಟಣ ರಾಮನ ಜನ್ಮಭೂಮಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಪಾಕ್ ವಶಕ್ಕೆ ಬಂದಿದೆ. ಪ್ರಸ್ತುತ ಸಂಶೋಧನೆ ಪ್ರಕಾರ, ಪಾಕ್ ವಶದಲ್ಲಿರುವ ಹರಪ್ಪ ಬಳಿ ರಾಮಜನ್ಮಭೂಮಿಯಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಒಂದು ದಿನದ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೋಮುದ್ವೇಷದ ಭಾಷಣ ಮಾಡಿದ್ದರು. ಆಡ್ವಾಣಿ ಕೂಡಾ ಬಾಬ್ರಿ ಮಸೀದಿ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇಂತಹ ನಾಯಕರಿಗೆ ಕೇಂದ್ರ ಸರಕಾರ ಭಾರತ ರತ್ನ ಮತ್ತು ಪದ್ಮ ವಿಭೂಷಣ್ ಪ್ರಶಸ್ತಿ ನೀಡಿರುವ ಔಚಿತ್ಯವನ್ನು ಮುಸ್ಲಿಂ ನಾಯಕ ಓವೈಸಿ ಪ್ರಶ್ನಿಸಿದ್ದಾರೆ.

Write A Comment