ರಾಷ್ಟ್ರೀಯ

ರಿಯಲ್ ಎಸ್ಟೇಟ್ ಮಸೂದೆಯಿಂದ ಬಿಲ್ಡರ್ಸ್ ಗಳಿಗೆ ಲಾಭ: ರಾಹುಲ್ ಗಾಂಧಿ

Pinterest LinkedIn Tumblr

Rahul-Gandhi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿವಾದಿತ ಭೂಸ್ವಾಧೀನ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೀಗ ರಿಯಲ್ ಎಸ್ಟೇಟ್ ಮಸೂದೆ ವಿರುದ್ಧ ಕಿಡಿ ಕಾರಿದ್ದಾರೆ.

ಎನ್ ಡಿಎ ಸರ್ಕಾರದ ರಿಯಲ್ ಎಸ್ಟೇಟ್ ಮಸೂದೆ ಖರೀದಿದಾರರಿಗಿಂತ ಉದ್ಯಮಿಗಳಿಗೇ ಹೆಚ್ಚಿನ ಅನುಕೂಲವಾಗುವಂತಿದೆ. ಇದು ಉಧ್ಯಮಿಗಳ ಪರವಾದ ಮಸೂದೆಯಾಗಿದ್ದು, ಇದರಿಂದ ಬಿಲ್ಡರ್ಸ್ ಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿಯಲ್ಲಿ ಕೆಲ ಎನ್ ಸಿಆರ್ ಫ್ಲ್ಯಾಟ್ ಖರೀದಿದಾರರ ಜೊತೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಸ್ವಾಧೀನ ಮಸೂದೆ ರೈತರ ಬದುಕನ್ನೇ

ಹಾಳುಮಾಡುತ್ತದೆ. ಇದು ಕೇವಲ ರೈತರ ಮತ್ತು ಬುಡಕಟ್ಟು ಜನರ ಪ್ರಶ್ನೆಯಲ್ಲ. ಇದು ಸಾಮಾನ್ಯ ಜನರಿಗೂ ಸಂಬಂಧಿಸಿದ್ದಾಗಿದ್ದು, ಇದರಿಂದ ಅವರು ಪಾಠ ಕಲಿಯಬೇಕು. ಈ ಮಸೂದೆಯಲ್ಲಿ ಪಾರದರ್ಶಕತೆ ಕೊರತೆ ಇದ್ದು, ರಿಯಲ್ ಎಸ್ಟೇಟ್ ಮಸೂದೆ ಬಿಲ್ಡರ್ಸ್ ಮತ್ತು ಉಧ್ಯಮಿಗಳ ಹಿತ ಕಾಯುತ್ತದೆಯೇ ವಿನಃ, ಖರೀದಿದಾರರ ಸುರಕ್ಷತೆಯನ್ನಲ್ಲ ಎಂದು ಅವರು ಹೇಳಿದರು.

ರಾಹುಲ್ ಗೆ ಬಿಜೆಪಿ ತಿರುಗೇಟು

ರಿಯಲ್ ಎಸ್ಟೇಟ್ ಮಸೂದೆ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸುತ್ತಿದ್ದಂತೆಯೇ ಅತ್ತ ಬಿಜೆಪಿ ಕೂಡ ರಾಹುಲ್ ಗೆ ತಿರುಗೇಟು ನೀಡಿದೆ. ಬೇರೆಯವರನ್ನು ಟೀಕಿಸುವ ಮೊದಲು ತಮ್ಮ ಅಧಿಕಾರದ ಅವಧಿಯಲ್ಲಿ ಅವರು ರೈತರಿಗೆ ಏನಾದರೂ ಒಳ್ಳೆಯ ಕೆಲಸ ಮಾಡಿದ್ದಾರೆಯೇ ಎಂದು ಹೇಳುವ ಮೂಲಕ ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಅವರು ರಾಹುಲ್ ಗಾಂಧಿ ಅವರಿಗೆ ಖಡಕ್ ತಿರುಗೇಟು ನೀಡಿದೆ.
-ಕನ್ನಡ ಪ್ರಭ

Write A Comment