ರಾಷ್ಟ್ರೀಯ

ಪ್ರಧಾನಿ ಮೋದಿ ಹೆಸರು ಕೆಡಿಸಲು ಸಂಚು: ಬಾಬಾ ರಾಮದೇವ್‌ ಕಿಡಿ

Pinterest LinkedIn Tumblr

ram

ಹೊಸದಿಲ್ಲಿ: ನನ್ನ ಇಮೇಜ್‌ಗೆ ಹಾನಿ ಮಾಡಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಹೆಸರು ಕೆಡಿಸಲು ಸಂಚು ನಡೆಸಲಾಗುತ್ತಿದ್ದು, ಆ ಕಾರಣಕ್ಕೆ ನನ್ನನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂದು ಯೋಗ ಗುರು ಬಾಬಾ ರಾಮದೇವ್‌ ದೂರಿದ್ದಾರೆ.

ದಿವ್ಯ ಫಾರ್ಮಸಿಯ ಆಯುರ್ವೇದ ಉತ್ಪನ್ನ ‘ಪುತ್ರಜೀವಿಕ ಬೀಜ’ದ ಹೆಸರಿನಲ್ಲಿ ನಡೆಯುತ್ತಿರುವ ವಿವಾದದ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಬಾಬಾ ರಾಮ್‌ದೇವ್‌, ಈ ವಿಚಾರವನ್ನು ರಾಜ್ಯಸಭೆಯಲ್ಲಿ ಗುರುವಾರ ಪ್ರಸ್ತಾಪಿಸಿದ ಜೆಡಿಯು ಸಂಸದ ಕೆ.ಸಿ. ತ್ಯಾಗಿ ವಿರುದ್ಧ ಕಿಡಿ ಕಾರಿದರಲ್ಲದೆ, ಅವರು ತಮ್ಮ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

‘ಪುತ್ರಜೀವಿಕ ಬೀಜ’ದ ಹೆಸರಿನ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಬಾಬಾ, ಈ ಔಷಧದ ಸಸ್ಯಶಾಸ್ತ್ರೀಯ ಹೆಸರು ‘ಪುತ್ರಂಜೀವ ರಾಕ್ಸ್‌ಬರ್ಗಿ’ ಎಂದು ಹೇಳಿದರು. ಅಲ್ಲದೆ ಇದಕ್ಕೆ ಹಿಂದಿ, ಗುಜರಾತಿ ಮತ್ತು ಕನ್ನಡದಲ್ಲಿ ‘ಪುತ್ರಜೀವಿಕ” ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಆದರೆ, ಹೆಸರಿನ ಕಾರಣಕ್ಕೆ ವಿವಾದ ಸೃಷ್ಟಿಸಿರುವ ಈ ಆಯುರ್ವೇದ ಉತ್ಪನ್ನಕ್ಕೆ ಸಂಬಂಧಿಸಿದಂತೆ ಅಬಾಧ್ಯತೆಗಳು ಸೇರಿಸಲು ಯೋಗ ಗುರು ಒಪ್ಪಿಗೆ ಸೂಚಿಸಿದರು.

ವಿವಾದಕ್ಕೆ ನಾಂದಿ:
ಲಿಂಗಾನುಪಾತ ಸಮಸ್ಯೆ ದೇಶವನ್ನು ತೀವ್ರವಾಗಿ ಕಾಡುತ್ತಿರುವ ಹೊತ್ತಿನಲ್ಲಿ ‘ಪುತ್ರ ಸಂತಾನ’ಕ್ಕೆ ಮನ್ನಣೆ ನೀಡುವ ಯೋಗಗುರು ಬಾಬಾ ರಾಮ್‌ದೇವ್ ಅವರ ಉದ್ಯಮದ ಔಷಧವೊಂದು ಕೋಲಾಹಲಕ್ಕೆ ಕಾರಣವಾಗಿತ್ತು. ಬಾಬಾ ರಾಮ್‌ದೇವ್ ಮಾಲೀಕತ್ವದ ದಿವ್ಯ ಫಾರ್ಮಸಿಯ ‘ಪುತ್ರ ಜೀವಕ್ ಬೀಜ್’ ಎಂಬ ಔಷಧ ರಾಜ್ಯಸಭೆಯಲ್ಲಿ ಗುರುವಾರ ತೀವ್ರ ಗದ್ದಲಕ್ಕೆ ಕಾರಣವಾಗಿತ್ತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ಸದಸ್ಯರು, ‘ಬೇಟಿ ಬಚಾವೋ, ಬೇಟಿ ಪಡಾವೋ’ ಅಂದೋಲನಕ್ಕೆ ಚಾಲನೆ ನೀಡಿರುವ ಪ್ರಧಾನಿ ಈ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದರು.

‘ಪುತ್ರಜೀವಕ್ ಬೀಜ್’ ಪೊಟ್ಟಣವನ್ನು ಪ್ರದರ್ಶಿಸಿದ ಜೆಡಿಯುವಿನ ಕೆ ಸಿ ತ್ಯಾಗಿ, ಏ.14ರಂದು ಖರೀದಿಸಿರುವ ಉತ್ಪನ್ನದ ರಸೀದಿಯ ಪ್ರತಿಯನ್ನೂ ತೋರಿಸಿದ್ದರು. ಹರಿಯಾಣದ ಬ್ರಾಂಡ್ ರಾಯಭಾರಿಯಾಗಿರುವ ಯೋಗ ಗುರುವಿನೊಬ್ಬರ ಕಂಪನಿಯು ಇಂತಹ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಅಕ್ರಮ ಹಾಗೂ ಅಸಂವಿಧಾನಿಕ ಎಂದು ಕಿಡಿಕಾರಿದ್ದರು.
-ಕೃಪೆ: ವಿಜಯ ಕನಾಱಟಕ

Write A Comment