ನವದೆಹಲಿ: ಯೋಗ ಗುರು ಬಾಬಾ ರಾಮ್‌ದೇವ್‌ರ ಪುತ್ರಜೀವಕ್ ಬೀಜ್ ಔಷಧದ ಬಗ್ಗೆ ಸಂಸತ್ತಿನಲ್ಲಿ ಪ್ರತಿಭಟನೆ ನಡೆದ ನಂತರ, ಆ ಔಷಧಿ ಭ್ರೂಣದ ಲಿಂಗಕ್ಕೆ ಸಂಬಂಧಿಸಿದ್ದಲ್ಲ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ. ಈ ಔಷಧಿ ಮಗು ಹುಟ್ಟಲು ಸಹಾಯ ಮಾಡುತ್ತದೆಯೇ ವಿನಾ ಮಗುವಿನ ಲಿಂಗಕ್ಕೆ ಸಂಬಂಧಿಸಿದಲ್ಲ .
ಸಂಸತ್ತಿನಲ್ಲಿ ಪುತ್ರಜೀವಕ್ ಬೀಜ್ ಬಗ್ಗೆ ವಿಪಕ್ಷ ಸಂಸದರು ಕೋಲಾಹಲ ಸೃಷ್ಟಿಸಿದ್ದಕ್ಕೆ ರಾಮ್‌ದೇವ್ ಪ್ರತ್ಯುತ್ತರ ನೀಡಿದ್ದಾರೆ. ಸಂಸತ್ತಿನಲ್ಲಿ ಸಾಮಾಜಿಕ, ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ನನ್ನನ್ನು ಟಾರ್ಗೆಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಅಪಖ್ಯಾತಿಗೊಳಪಡಿಸಲಾಗುತ್ತಿದೆ. ಜನತಾದಳ (ಸಂಯುಕ್ತ) ಸಂಸದ ಕೆಸಿ ತ್ಯಾಗಿ ಅವರು ಮೇಲ್ಮನೆಯಲ್ಲಿ ನನ್ನ ಮೇಲೆ ಆರೋಪ ಹೊರಿಸಿ ಅಪಖ್ಯಾತಿಗೊಳಪಡಿಸಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ರಾಮ್‌ದೇವ್ ಆಗ್ರಹಿಸಿದ್ದಾರೆ.
ಆದಾಗ್ಯೂ, ನಾವಿನ್ನು ಪುತ್ರಜೀವಕ್ ಬೀಜ ಔಷಧದ ಹೆಸರನ್ನು ಬದಲಾಯಿಲಿಸುವುದಿಲ್ಲ ಎಂದು ಬಾಬಾ ಹೇಳಿದ್ದಾರೆ.
-ಕೃಪೆ; ಕನ್ನಡಪ್ರಭ