ರಾಷ್ಟ್ರೀಯ

ಡಿ.ಕೆ. ರವಿಯವರಿಗೆ ಇಂಜೆಕ್ಸನ್ ನೀಡಿ ಸಾಯಿಸಲಾಗಿದೆ !

Pinterest LinkedIn Tumblr

dk

ಕಳೆದ ತಿಂಗಳು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ದಕ್ಷ ಐಎಎಸ್ ಅಧಿಕಾರಿ ರವಿಯವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂದು ಅವರ ಸಹೋದರ ಡಿ.ಕೆ.ರಮೇಶ್ ಆರೋಪಿಸಿದ್ದಾರೆ.

“ನನ್ನ ಸಹೋದರ ರವಿ ಸ್ವತಃ ಸಾವಿಗೆ ಶರಣಾಗುವ ವ್ಯಕ್ತಿಯೇ ಅಲ್ಲ. ಆತನಿಗೆ ಇಂಜೆಕ್ಷನ್ ಕೊಟ್ಟು ಸಾಯಿಸಿರುವುದು ನೂರಕ್ಕೆ ನೂರು ಸತ್ಯ”, ಎಂದು ಡಿಕೆ ರವಿ ಅವರ ಅಣ್ಣ ಡಿಕೆ ರಮೇಶ್ ಹೇಳಿದ್ದಾರೆ.

ದೊಡ್ಡಕೊಪ್ಪಲಿನ ತಮ್ಮ ನಿವಾಸದಲ್ಲಿ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಅವರು,” ರವಿಗೆ ಇಂಜೆಕ್ಷನ್ ಕೊಟ್ಟು ಸಾಯಿಸಿರುವುದು ನೂರಕ್ಕೆ ನೂರು ಸತ್ಯ. ಈ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸಿಬಿಐ ತನಿಖೆ ಬಗ್ಗೆ ಮಾತನಾಡಿದ ಅವರು ಸಿಬಿಐ ತನಿಖೆಯನ್ನು ಪ್ರಾರಂಭಿಸಿರುವುದರ ಕುರಿತು ನಮಗೆ ಯಾವ ಮಾಹಿತಿಯೂ ಇಲ್ಲ.ಯಾವ ಅಧಿಕಾರಿಯೂ ಇಲ್ಲಿಯವರೆಗೆ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.

ತಮ್ಮ ಮಗನ ಮಾತನ್ನು ಸಮರ್ಥಿಸಿಕೊಂಡ ತಾಯಿ ಗೌರಮ್ಮ ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಯಲ್ಲ. ಆತನಿಗೆ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಲಾಗಿದೆ ಎಂದು ವಾದಿಸುತ್ತಿದ್ದಾರೆ.

ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ತನಿಖೆ ಗುರುವಾರದಿಂದ ಅಧಿಕೃತವಾಗಿ ಆರಂಭಗೊಂಡಿದ್ದು, ದಿಲ್ಲಿಯ ಸಿಬಿಐ ತಂಡಕ್ಕೆ ಪ್ರಕರಣವನ್ನು ವಹಿಸಲಾಗಿದೆ. ಸಿಬಿಐ ವಿಶೇಷ ತನಿಖಾ ದಳದ ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಮತ್ತು ಎಸ್ಪಿ ರಾಜಾಬಾಲಾಜಿ ನೇತೃತ್ವದ ತಂಡ ತನಿಖೆಯ ಉಸ್ತುವಾರಿ ವಹಿಸಿದೆ.

Write A Comment