ರಾಷ್ಟ್ರೀಯ

ಎಲ್ಲೋ ಚೆಕ್ ಬುಕ್ ಇಟ್ಟು ಕೈ ಸುಟ್ಟುಕೊಳ್ಳಬೇಡಿ

Pinterest LinkedIn Tumblr

che

ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ ನೆಟ್ ಬ್ಯಾಕಿಂಗ್ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದರೂ ಕೆಲವೊಂದು ಕಡೆ ಅನಿವಾರ್ಯವಾಗಿ ಚೆಕ್ ಬಳಕೆ ಮಾಡಬೇಕಾಗುತ್ತದೆ.

ಚೆಕ್ ಬಳಕೆ ಕಡಿಮೆ ಯಾಗಿರುವುದರಿಂದ ಅದನ್ನು ಕಳೆದುಕೊಳ್ಳುವ ಸಂಭವೂ ಹೆಚ್ಚಾಗಿದೆ. ಎಲ್ಲೋ ಕೈ ತಪ್ಪಿ ಚೆಕ್ ಬುಕ್ ಇಟ್ಟು ಯಾರಾದರೂ ಗೋಲ್ ಮಾಲ್ ಮಾಡಿದರೆ ಎಂದು ಪರಿತಪಿಸುವುದನ್ನು ಕಂಡಿದ್ದೇವೆ. ಹಾಗಾದರೆ ಚೆಕ್ ಬುಕ್ ದುರ್ಬಳಕೆ ಅಥವಾ ಮೋಸ ಹೋಗುವುದರಿಂದ ತಪ್ಪಿಸಿಕೊಳ್ಳುವುದುದು ಹೇಗೆ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆಲ್ಲ ಇಲ್ಲಿದೆ ಉತ್ತರ.

* ಯಾವ ಕಾರಣಕ್ಕೂ ಎಲ್ಲರಿಗೂ ಕಾಣುವಂತೆ ಚೆಕ್ ಬುಕ್ ಇಡಬೇಡಿ. ಸುರಕ್ಷಿತ ಸ್ಥಳದಲ್ಲಿ ಚೆಕ್ ಬುಕ್ ಇಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕ್ಯಾನ್ಸಲ್ ಆದ ಚೆಕ್ ಗಳನ್ನು ಕಾಯ್ದಿರಿಸಿಕೊಳ್ಳುವುದು ಜಾಣ ನಡೆ.
* ಬ್ಯಾಂಕ್ ನಿಂದ ಚೆಕ್ ಬುಕ್ ಪಡೆದಾಗ ಯಾವೂದಾರೂ ಚೆಕ್ ಮಿಸ್ ಆಗಿದೆಯೇ? ಅಥವಾ ಹರಿದಿದೆಯೇ? ಎಂಬುದನ್ನು ಗಮನಿಸಿಕೊಳ್ಳಬೇಕಯ.
* ಯಾರಾಗಾದರೂ ಚೆಕ್ ನೀಡುವುದಕ್ಕಿಂತ ಮುಂಚಿತವಾಗಿ ಸಹಿ ಹಾಕಲು ಹೋಗಬೇಡಿ.
* ಕ್ಯಾನ್ಸಲ್ ಆದ ಚೆಕ್ ಗಳನ್ನು ನಾಶಮಾಡಿ. ಜತೆಗೆ ಅವುಗಳ ಅಂಕೆ ಮತ್ತು ಎಂಐಸಿಆರ್ ಕೋಡ್ ಒಂದೆಡೆ ಬರೆದಿಟ್ಟುಕೊಳ್ಳುವುದು ಒಳಿತು.
* ನಿಮ್ಮ ಬ್ಯಾಂಕ್ ಖಾತೆಯನ್ನು ಆಗಾಗ ಪರಿಶೀಲನೆ ಮಾಡುತ್ತಿರಿ.[ಅಕೌಂಟ್ ಕ್ಲೋಸ್ ಮಾಡುವ ಮುನ್ನ 6 ಅಂಶ ತಲೆಯಲ್ಲಿರಲಿ]
* ನೀವು ಹಣ ನೀಡುವ ವ್ಯಕ್ತಿಯ ಹೆಸರು ಬರೆದ ನಂತರ ಸಾಲಿನ ಕೊನೆಯವರೆಗೆ ಒಂದು ಗೆರೆ ಎಳೆಯಿರಿ. ಅಲ್ಲದೇ ಹೆಸರಿನ ಮಧ್ಯೆ ದೊಡ್ಡದಾಗಿ ಜಾಗ ಬಿಡುವುದು ಒಳಿತಲ್ಲ.
* ಚೆಕ್ ನ ಎಡ ಮೂಲೆಯ ಮೇಲೆ ಒಮ್ಮೆ ಕಣ್ಣು ಹಾಯಿಸುವುದು ಉತ್ತಮ. ನಗದು ಬದಲಾವಣೆ ಅಗತ್ಯವಿಲ್ಲ ಎಂದೆನಿಸಿದ್ದಲ್ಲಿ ಅಕೌಂಟ್ ಪೇ ಎಂದು ಬರೆಯಲು ಮರೆಯಬಾರದು.
* ಹಣ ಬರೆದಾದ ಮೇಲೆ ಈ “/-” ಚಿಹ್ನೆ ಹಾಕಲು ಮರೆಯಬೇಡಿ. 25,000 ಎಂದು ಬರೆಯುವ ಬದಲು 25,000/- ಎಂದು ಬರೆಯಬೇಕು.
* ಚೆಕ್ ನೀಡಿದ ಬಗ್ಗೆ ಒಂದು ದಾಖಲೆಯನ್ನು ಕಾಪಿಡುವುದು ಉತ್ತಮ
* ಒಂದು ವೇಳೆ ಖಾತೆ ಕ್ಲೋಸ್ ಮಾಡುವುದಾದರೆ ಎಲ್ಲ ಚೆಕ್ ಗಳನ್ನು ನಾಶ ಮಾಡಬೇಕು.

Write A Comment