ರಾಷ್ಟ್ರೀಯ

ಅಪ್ರಾಪ್ತ ಬಾಲಕಿಯನ್ನು ಮಾರಾಟ ಮಾಡಲು ಮುಂದಾಗಿದ್ದ ಮಹಿಳೆ ಅರೆಸ್ಟ್

Pinterest LinkedIn Tumblr

6413black-crime-stats

17 ವರ್ಷದ ಅಪ್ರಾಪ್ತ  ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ಮಹಿಳೆಯೊಬ್ಬಳನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಏನಿದು ಘಟನೆ ..?

ಚಾಮರಾಜಪೇಟೆ ವಾಲ್ಮೀಕಿ ನಗರದ ನಿವಾಸಿ ಫರಾನಾ ಎಂಬಾಕೆ ತನ್ನ ಪಕ್ಕದ ಮನೆಯ ಬಾಲಕಿಯನ್ನು ಪುಸಲಾಯಿಸಿ ದೆಹಲಿಗೆ ಕಳುಹಿಸಲು ಮುಂದಾಗಿದ್ದಳು ಎನ್ನಲಾಗಿದ್ದು ಇದೇ ಕಾರಣಕ್ಕೆ ಸೋಮವಾರ ಸಂಜೆ ಶಂಶದಾಳನ್ನು ತನ್ನ ಮನೆಗೆ ಕರೆತಂದಿದ್ದಳು. ಅಲ್ಲದೇ ರಾತ್ರಿ 8 ಗಂಟೆಯೊಳಗಾಗಿ ನಗರ ಕೇಂದ್ರ ರೈಲು ನಿಲ್ದಾಣಕ್ಕೆ ತೆರಳಿ, ಅಲ್ಲಿ ಇಬ್ಬರಿಗೂ ದೆಹಲಿ ಟಿಕೆಟ್ ಪಡೆದು, ರೈಲಿಗಾಗಿ ಕಾಯುತ್ತಿದ್ದಳು. ಈ ಸಮಯದಲ್ಲಿ  ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ಚಾಮರಾಜಪೇಟೆ ಪೊಲೀಸರು, ಫರಾನಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ವಾಲ್ಮೀಕಿ ನಗರದ ತನ್ನ ನಿವಾಸದಲ್ಲಿ ಅಗರಬತ್ತಿ ತಯಾರಿಸುವ ಫರಾನಾ, ತನ್ನ ಮನೆಯ ಸುತ್ತಮುತ್ತಲ ಮನೆಯವರಿಗೆ ಅನುಮಾನ ಬಾರದಂತೆ ಬಾಲಕಿಯನ್ನು ಅಪಹರಿಸಿ ಮಾರಾಟ ಮಾಡಲು ಸಿದ್ದತೆ ನಡೆಸಿದ್ದಳು ಎನ್ನಲಾಗಿದ್ದು ಈಕೆ ಈ ಬಾಲಕಿಯನ್ನು ಎಲ್ಲಿಗೆ ಕಳುಹಿಸುತ್ತಿದ್ದಳು, ಇದರ ಹಿಂದೆ ಯಾರ ಕೈವಾಡವಿದೆ ಎಂಬುದರ ಬಗೆಗೆ ತನಿಖೆ ನಡೆಯುತ್ತಿದ್ದು ತನಿಖೆಯ ನಂತರವೇ ಸತ್ಯಾಂಶ ಹೊರಬೀಳಬೇಕಿದೆ.

Write A Comment