ಅಂತರಾಷ್ಟ್ರೀಯ

ವಂಚಕ ಭಾರತೀಯನಿಗೆ ಅಮೆರಿಕದಲ್ಲಿ 6 ವರ್ಷ ಜೈಲು

Pinterest LinkedIn Tumblr

Jail

ನ್ಯೂಯಾರ್ಕ್, ಏ.11: ತಾನು ಕದ್ದ ಪ್ರಮಾಣ ಪತ್ರಗಳು, ಗುರುತಿನ ಚೀಟಿಗಳನ್ನು ತೋರಿಸಿ ತಾನೊಬ್ಬ ಕನ್ಸಲ್ಟೆಂಟ್ ಎಂದು ಹೇಳಿಕೊಂಡು ಫೇಸ್‌ಬುಕ್ ಸಂಸ್ಥಾಪಕರೂ ಸೇರಿದಂತೆ ಅನೇಕ ಕೋಟ್ಯಾಧೀಶರನ್ನು ವಂಚಿಸಿದ್ದ ಭಾರತ ಮೂಲದ ವ್ಯಕ್ತಿಯೊಬ್ಬನಿಗೆ ಇಲ್ಲಿನ ನ್ಯಾಯಾಲಯ ಆರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ನ್ಯೂಯಾರ್ಕ್ ಸ್ಟೇಟ್ ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಲಾಗಿದ್ದ ವಂಚನೆ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 38 ವರ್ಷದ ಭಾರತೀಯ ಅರುಣ್ ಗಂಗೂಲಿ ಎಂಬುವನಿಗೆ ನ್ಯಾಯಾಲಯ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ನಿನ್ನೆ ತೀರ್ಪು ನೀಡಿತು. ನಕಲಿ ದಾಖಲೆಗಳನ್ನು ನೀಡಿ ಅನೇಕ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಹಣಕಾಸು ಕನ್ಸಲ್ಟೆಂಟ್ ಮತ್ತು ಆರ್ಥಿಕ ಸಲಹೆಗಾರನಾಗಿ ಕೆಲಸ ಗಿಟ್ಟಿಸಿಕೊಂಡಿದ್ದ ಗಂಗೂಲಿ ಅನೇಕ ಅಕ್ರಮಗಳಲ್ಲೂ ಭಾಗಿಯಾಗಿದ್ದಾರೆ.

Write A Comment