ರಾಷ್ಟ್ರೀಯ

ಕಾರು ಆಯ್ತು, ಈಗ ಪಕ್ಷದ ಲೋಗೊ ವಾಪಸ್ ಕೊಡಿ ಎಂದ ಆಪ್ ಬೆಂಬಲಿಗ

Pinterest LinkedIn Tumblr

334496-arvind-kejriwal-sting

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಳಸುತ್ತಿದ್ದ ನೀಲಿ ಬಣ್ಣದ ವ್ಯಾಗನಾರ್ ಕಾರು ವಾಪಸ್ ಕೇಳಿದ ಬೆನ್ನಲ್ಲೇ ಈಗ ಆಮ್ ಆದ್ಮಿ ಪಕ್ಷ(ಎಎಪಿ)ದ ಮತ್ತೊಬ್ಬ ಬೆಂಬಲಿಗ, ಆಪ್ ಪಕ್ಷದ ಲೋಗೊ ವಾಪಸ್ ಕೊಡುವಂತೆ ಒತ್ತಾಯಿಸಿದ್ದಾರೆ.

ಎಎಪಿ ಲೋಗೊ ತಾನೇ ಡಿಸೈನ್ ಮಾಡಿದ್ದು ಎಂದು ಹೇಳಿಕೊಂಡಿರುವ ಪಕ್ಷದ ಸ್ವಯಂಸೇವಕ ಸುನೀಲ್ ಲಾಲ್ ಅವರು, ವೆಬ್‌ಸೈಟ್, ಕರಪತ್ರ ಹಾಗೂ ಧ್ವಜ ಸೇರಿದಂತೆ ಇತರ ಯಾವುದೇ ಕಡೆಗಳಲ್ಲೂ ತನ್ನ ಲೋಗೊ ಬಳಸಬಾರದು ಎಂದು ಪಕ್ಷಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿರುವ ಸುನಿಲ್ ಲಾಲ್, ಎಎಪಿಯ ಲೋಗೊ ನಾನೇ ಡಿಸೈನ್ ಮಾಡಿರುವುದರಿಂದ ಅದು ನನ್ನ ಭೌದ್ಧಿಕ ಆಸ್ತಿ. ಅದನ್ನು ನಾನು ಯಾವತ್ತು ಪಕ್ಷಕ್ಕೆ ವರ್ಗಾವಣೆ ಮಾಡಿಲ್ಲ. ಹೀಗಾಗಿ ತಕ್ಷಣದಿಂದಲೇ ಆ ಲೋಗೊ ಉಪಯೋಗಿಸುವುದನ್ನು ನಿಲ್ಲಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಎಎಪಿ ಜನರ ಭಾವನೆಗೆ ಧಕ್ಕೆ ತಂದಿದೆ ಮತ್ತು ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಪಕ್ಷ ವಿಫಲವಾಗಿದೆ ಎಂದು ಆರೋಪಿಸಿ ಸುನಿಲ್ ಲಾಲ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಅಲ್ಲದೆ ತನ್ನ ರಾಜಿನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.

ಈ ಮೊದಲು ತನ್ನ ನಾಯಕ ಕಾರಿನಲ್ಲಿ ಓಡಾಡಲಿ ಎಂದು ಮಾರುತಿ ವ್ಯಾಗನಾರ್ ಕಾರನ್ನು ಕೇಜ್ರಿವಾಲ್ ಅವರಿಗೆ ದಾನ ಮಾಡಿದ್ದ ಕುಂದನ್ ಶರ್ಮಾ, ನಾನು ಕೊಟ್ಟಿದ ಕಾರು ಮತ್ತು ಪಕ್ಷಕ್ಕೆ ನೀಡಿದ್ದ ದೇಣಿಗೆಯನ್ನು ವಾಪಸ್ ಕೊಡುವಂತೆ ಟ್ವೀಟ್ ಮಾಡಿದ್ದರು. ಅಲ್ಲದೆ ನನ್ನ ದೇಣಿಗೆಗೆ ಇವರು ಸಮರ್ಥರಲ್ಲ ಎಂದು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶರ್ಮಾ ಹೇಳಿದ್ದರು.

Write A Comment