ರಾಷ್ಟ್ರೀಯ

ಜಾಗತಿಕ ತಾಪಮಾನದಲ್ಲಿ ವಿಪರೀತ ಹೆಚ್ಚಳ; ಈ ಶತಮಾನದ ಬೃಹತ್ ಸಮಸ್ಯೆ : ಮೋದಿ ಎಚ್ಚರಿಕೆ

Pinterest LinkedIn Tumblr

Modi-in-delhi

ನವದೆಹಲಿ, ಏ.6-  ಇತ್ತೀಚೆಗೆ ವಾಯು ಮಾಲಿನ್ಯದ ಸೂಚ್ಯಂಕದಲ್ಲಿ ಭಾರಿ ಏರಿಕೆ ಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ತಾಪಮಾನದಲ್ಲಿನ ವಿಪರೀತ ಹೆಚ್ಚಳವು ಈ ಶತಮಾನದ ಅತ್ಯಂತ ಬೃಹತ್ ಸಮಸ್ಯೆಯಾಗಿದೆ ಎಂದು ಎಚ್ಚರಿಕೆ ನೀಡಿದರು. ದೆಹಲಿಯ ವಿಜ್ಞಾನ ಭವನದಲ್ಲಿ ಪರಿಸರ ಇಲಾಖೆ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಾಯು ಗುಣಮಟ್ಟ ಕಾಪಾಡುವ ಸೂಚ್ಯಂಕವನ್ನು ಬಿಡುಗಡೆ ಮಾಡಿ ಪ್ರಧಾನಿ ಮೋದಿ ಮಾತನಾಡಿದರು.

ನಾವು ಭಾರತೀಯರು. ಪುರಾತನ ಕಾಲದಿಂದಲೂ ಪ್ರಕೃತಿಯನ್ನು ಆರಾಧಿಸುತ್ತಾ, ಪೂಜಿಸುತ್ತಾ ಬಂದಿದ್ದೇವೆ. ಪ್ರಕೃತಿಯ ಸಂರಕ್ಷಣೆ ವಿಚಾರದಲ್ಲಿ ನಾವು ತುಂಬಾ ಸೂಕ್ಷ್ಮ. ಪ್ರಕೃತಿ, ಪರಿಸರಗಳ ಸಂರಕ್ಷಣೆ ಪ್ರತಿಯೊಬ್ಬನ ಜವಾಬ್ದಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಕೃತಿಯನ್ನು ರಕ್ಷಣೆ ಮಾಡಿಕೊಂಡು ಪರಿಸರ ಸಮತೋಲ ನಕಾಪಾಡುವ ವಿಷಯದಲ್ಲಿ ನಮ್ಮ ಕೊಡುಗೆ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಎಂಬುದು ಕಳವಳಕಾರಿ ವಿಚಾರವಾಗಿದೆ.   ಪ್ರಕೃತಿ-ಪರಿಸರ ರಕ್ಷಣೆಯ ವಿಷಯದಲ್ಲಿ ಭಾರತೀಯರು ಗರಿಷ್ಠ ಮಟ್ಟದ ಸೂಕ್ಷ್ಮತೆ, ಕಾಳಜಿ ಹೊಂದಿದ್ದು, ಈ ಕುರಿತಂತೆ ನಮ್ಮನ್ನು ಯಾವನೂ ಪ್ರಶ್ನೆ  ಮಾಡುವ ಅಗತ್ಯವಿಲ್ಲ ಎಂದು  ಹೇಳಿದರು.  ಈ ದೇಶದ 10 ಮಹಾನಗರಗಳಲ್ಲಿ ವಾಯುಮಾಲಿನ್ಯ, ಪರಿಸರ ಮಾಲಿನ್ಯಗಳನ್ನು ನಿಯಂತ್ರಿಸುವ ರಾಷ್ಟ್ರೀಯ ವಾಯು ಗುಣಮಟ್ಟದ ಸೂಚ್ಯಂಕಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ, ಪರಿಸರ,  ವಾಯು ಮಾಲಿನ್ಯದ ಕುರಿತಂತೆ ನಮ್ಮ  ಮುಂದೆ ಭಾಷಣ ಬಿಗಿಯುವವರು, ಉಪದೇಶ ಮಾಡುವವರೇ ನಮಗೆ , ಮಾಲಿನ್ಯರತಹಿ ಇಂಧನ ಉತ್ಪಾದನೆಗಾಗಿ ಪರಮಾಣು ಇಂಧನ ಒದಗಿಸಲು ನಿರಾಕರಿಸುತ್ತಾರೆ ಎಂದು ಖಾರವಾಗಿ ನುಡಿದರು.
ಪರಿಸರ, ವಾಯುಮಾಲಿನ್ಯಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕಾದರೆ ನಾವು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿ ಕೊಳ್ಳಬೇಕಾಗಿದೆ ಎಂದು ಮೋದಿ ಹೇಳಿದರು.

ಪರಿಸರ ಸಂರಕ್ಷಣೆ, ಪ್ರಕೃತಿಯ ಸಮತೋಲನ ಹಾಗೂ ಅಭಿವೃದ್ಧಿಗಳು  ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವು ಒಂದನ್ನು ಬಿಟ್ಟು ಇನ್ನೊಂದಿಲ್ಲ. ಪ್ರಕೃತಿ ರಕ್ಷಣೆಯಾದರೆ ತಾನೇತಾನಾಗಿ ಅಭಿವೃದ್ಧಿಯೂ ಆಗುತ್ತದೆ. ನಾವು ಹೊಗೆ ಉಗುಳುವ ಯಂತ್ರಗಳ ಅಬ್ಬರವನ್ನು ಕಡಿಮೆ ಮಾಡಬೇಕಾಗಿದೆ ಎಂದು ಪ್ರಧಾನಿ ಹೇಳಿದರು. ವಾಯು ಮಾಲಿನ್ಯ ತಡೆಗೆ ಸೂಕ್ತ ಕಾನೂನು ರೂಪಿಸುವ ಅಗತ್ಯವಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ 6 ಕಾನೂನುಗಳನ್ನು ಪರಿಷ್ಕೃತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದರು.

Write A Comment