ಇಂದೋರ್: ಅತ್ತೆ, ಮಾವ, ಗಂಡ, ಮೈದುನ, ನಾದಿನಿ ಎಲ್ಲ ಸೇರಿ ಸೊಸೆಗೆ ಕಿರುಕುಳ ನೀಡುವ ಸುದ್ದಿಯನ್ನಂತೂ ಸಾಮಾನ್ಯವಾಗಿ ಕೇಳೇ ಇರುತ್ತೀರಾ. ಆದರೆ ಸೊಸೆಯೊಬ್ಬರು ತನ್ನ ಅತ್ತೆ- ಮಾವನ ಮೇಲೆ ಅಮಾನುಷವಾಗಿ ದೌರ್ಜನ್ಯ ನಡೆಸಿದ ಘಟನೆ ಇಂದೋರ್‌ನಲ್ಲಿ ನಡೆದಿದೆ.
ತಾನು ದೈವ ಶಕ್ತಿಯುಳ್ಳವಳು ಎಂದು ಹೇಳಿ ತನ್ನ ಗಂಡನ ಮನೆಯವರನ್ನು ಬೆದರಿಸಿದ ಮಹಿಳೆ ಅವರ ಮೇಲೆ ತನ್ನ ಪೈಶಾಚಿಕತನವನ್ನು ಮೆರೆದಿದ್ದಾಳೆ. ತನ್ನ ಪತಿಯನ್ನು ಅಂಧವಿಶ್ವಾಸದಲ್ಲಿ ಸಿಲುಕಿಸುವಂತೆ ಮಾಡಿದ ಆಕೆ ಆತನಿಂದ ತನ್ನ ಕೈ ಕಾಲು ಒತ್ತಿಸಿಕೊಳ್ಳುವುದು, ಅಡುಗೆ ಮಾಡಿಸುವುದು, ಪಾತ್ರೆ ತೊಳೆಸುವುದು ಹೀಗೆ ಮನೆಗೆಲಸವನ್ನೆಲ್ಲಾ ಮಾಡಿಸಿಕೊಂಡು ಗುಲಾಮನನ್ನಾಗಿಸಿಕೊಂಡಿದ್ದಳು. ಆಕೆ ಎಸಗಿದ ಮತ್ತೂ ಹೇಯ ಕೃತ್ಯವೇನೆಂದರೆ ತನ್ನ ಅತ್ತೆ ಮಾವನಿಗೆ ಚಹಾದಲ್ಲಿ ಮೂತ್ರವನ್ನು ಸೇರಿಸಿ ಕುಡಿಸಿದ್ದು.
ಆಕೆಯಲ್ಲಿ ದೇವರ ಶಕ್ತಿಯಿಲ್ಲ. ನಾಟಕವಾಡುತ್ತಿದ್ದಾಳೆ ಎಂದು ಬಹಿರಂಗವಾದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ತಕ್ಷಣ ಆಕೆಯ ಗಂಡನ ಮನೆಯವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಆರೋಪಿ ಮತ್ತು ಆಕೆಗೆ ಸಾಥ್ ನೀಡಿದ್ದ ಸಹೋದರನ ಮೇಲೆ ಕೌಟುಂಬಿಕ ಹಿಂಸೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.