ಮೀರತ್, ಮಾ.25: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಮಂಗಳಮುಖಿಯೊಬ್ಬರು ಯುವಕರಿಬ್ಬರ ಮರ್ಮಾಂಗಗಳನ್ನು ಕತ್ತರಿಸಿರುವ ಘಟನೆ ನಡೆದಿದೆ. ಜಾನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪಾಂಚಾಲಿ ಫೌಲ್ಟ್ರಿ ಫಾರಂ ಬಳಿ ಗಂಭೀರ ಸ್ಥಿತಿಯಲ್ಲಿದ್ದ ಯುವಕರು ಪತ್ತೆಯಾದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ಇಬ್ಬರು ಯುವಕರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಯುವಕರನ್ನು ಶಬ್ಬೀರ್ ಮತ್ತು ಪ್ರದೀಪ್ ಎಂದು ಗುರುತಿಸಲಾಗಿದೆ. ನೀಲಂ ಎಂಬ ಮಂಗಳಮುಖಿ ಇವರಿಬ್ಬರಿಗೂ ಕುಡಿಯಲು ಚಹಾ ಕೊಟ್ಟಿದ್ದು, ಅದನ್ನು ಕುಡಿದ ಯುವಕರು ಪ್ರಜ್ಞಾಹೀನರಾಗಿದ್ದಾರೆ. ಆಗ ನೀಲಂ ತನ್ನ ತಂಡದ ಸದಸ್ಯರ ಸಹಾಯದಿಂದ ಯುವಕರಿಬ್ಬರ ಮರ್ಮಾಂಗಗಳನ್ನು ಕತ್ತರಿಸಲಾಗಿದೆ. ಶಬ್ಬೀರ್ ನೀಲಂ ಜತೆ ಡಲು ಬಾರಿಸುತ್ತಿದ್ದ ಪ್ರದೀಪ್ ಅಡಿಗೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.