ರಾಷ್ಟ್ರೀಯ

ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸಲು ಚಿಂತನೆ: ಹರಿಯಾಣ ಸರ್ಕಾರ

Pinterest LinkedIn Tumblr

Bhagavathgeeta

ನವದೆಹಲಿ: ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸಲು ಹರಿಯಾಣ ಸರ್ಕಾರ ಚಿಂತನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಈ ಕುರಿತಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಉನ್ನತ ಶಿಕ್ಷಣದ ಪ್ರಧಾನ ನಿರ್ದೇಶಕ ಟಿ.ಸಿ.ಗುಪ್ತಾ ಅವರು, ಭಗವದ್ಗೀತೆಯನ್ನು ಜ್ಞಾನದ ಸರ್ವೋಚ್ಚ ಮೂಲ ಎಂದು ಬಣ್ಣಿಸಿದ್ದು, ಅದನ್ನು ಶಾಲಾ ಪಠ್ಯಕ್ರಮ ಅಳವಡಿಸುವಂತೆ ರಾಜ್ಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಕೇಂದ್ರಕ್ಕೆ ಸಲಹೆ ನೀಡಲಾಗಿದೆ. ಯಾವ ತರಗತಿಗೆ ಎಷ್ಟನೇ ಹಂತದ ಭಗವದ್ಗೀತೆಯನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಶೈಕ್ಷಣಿಕ ಸಂಸ್ಧೆಗಳು ನಿರ್ಧಾರಿಸಬೇಕಿದೆ ಎಂದು ಹೇಳಿದ್ದಾರೆ.

ಹಲವು ವಿದ್ಯಾರ್ಥಿಗಳು ಸಂಸ್ಕೃತ ಕುರಿತಂತೆ ಹೆಚ್ಚು ಪರಿಣತಿ ಹೊಂದಿಲ್ಲದಿರುವುದಾಗಿ ತಿಳಿದುಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಮಾಹಿತಿ ಕಲೆ ಹಾಕುವಂತೆ ರಾಜ್ಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಕೇಂದ್ರಕ್ಕೆ ಸೂಚನೆ ನೀಡಲಾಗಿದೆ. ಒಂದು ಈ ಕುರಿತಂತೆ ಸಮಸ್ಯೆ ಎದುರಾದರೆ ಭಗವದ್ಗೀತೆಯನ್ನು ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಅನುವಾದ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Write A Comment