ರಾಷ್ಟ್ರೀಯ

ಸಚಿವಾಲಯಕ್ಕೆ ಪತ್ರಕರ್ತರ ಪ್ರವೇಶಕ್ಕೆ ನಿರ್ಬಂಧ; ಮನೀಷ್‌ ಸಿಸೋಡಿಯಾ ಪತ್ರಿಕಾಗೋಷ್ಠಿಯಲ್ಲಿ ಗದ್ದಲ

Pinterest LinkedIn Tumblr

MEADIA

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಅವರ ಸಚಿವ ಸಹೋದ್ಯೋಗಿಗಳು ಕೆಲಸ ಆರಂಭಿಸಿದ ಮೊದಲ ದಿನವೇ ಸಚಿವಾ­ಲ­ಯಕ್ಕೆ ಪತ್ರಕರ್ತರ ಪ್ರವೇಶ ನಿರ್ಬಂಧಿ­ಸ­ಲಾಯಿತು. ಇದರಿಂದಾಗಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋ­ಡಿಯಾ ಅವರ ಪತ್ರಿಕಾಗೋಷ್ಠಿಯಲ್ಲಿ ಗದ್ದಲ ಉಂಟಾಯಿತು.

ಫೆ. 14ರಂದು ಶನಿವಾರ ಅಧಿಕಾರ ವಹಿಸಿಕೊಂಡ ಅರವಿಂದ್‌ ಕೇಜ್ರಿವಾಲ್‌ ಹಾಗೂ ಅವರ ಸಂಪುಟ ಸಹೋ­ದ್ಯೋ­ಗಿಗಳು ಸೋಮವಾರ ತಮ್ಮ ಕಚೇರಿಗ­ಳಿಗೆ ಹಾಜರಾಗಿ ಕೆಲಸ ಆರಂಭಿಸಿದರು. ಹೊಸ ಸರ್ಕಾರದ ಕಲಾಪ ವರದಿ ಮಾಡಲು ಸಚಿವಾಲ­ಯಕ್ಕೆ ಆಗಮಿಸಿದ ಮುದ್ರಣ, ಎಲೆಕ್ಟ್ರಾನಿಕ್‌ ಮಾಧ್ಯಮಗಳ ವರದಿ­ಗಾರರು ಮತ್ತು ಛಾಯಾ­ಗ್ರಾಹಕ­ರನ್ನು ಭದ್ರತಾ ಸಿಬ್ಬಂದಿ ಬಾಗಿಲಲ್ಲಿ ತಡೆದರು.

ಹಿರಿಯ ಅಧಿಕಾರಿಗಳಿಂದ ಮೌಖಿಕ ಆದೇಶವಿರುವುದರಿಂದ ಪತ್ರಕರ್ತರನ್ನು ಒಳಬಿಡಲು ಸಾಧ್ಯವಿಲ್ಲವೆಂದು ಭದ್ರತಾ ಸಿಬ್ಬಂದಿ  ಸ್ಪಷ್ಟಪಡಿಸಿದರು. ಈ ಕುರಿತು ಪ್ರತಿಕ್ರಿಯಿಸಲು ಹಿರಿಯ ಅಧಿಕಾರಿಗಳು ಸಿಗಲಿಲ್ಲ. ಅನಂತರ ಕೇಜ್ರಿವಾಲ್‌ ಅಧ್ಯ­ಕ್ಷತೆ­ಯಲ್ಲಿ ನಡೆದ ಮೊದಲ ಸಂಪುಟ ಸಭೆ ತೀರ್ಮಾನಗಳನ್ನು ಕುರಿತು ವಿವರಿ­ಸಲು ಉಪ ಮುಖ್ಯಮಂತ್ರಿ ಮನೀಷ್‌ ಸಿಸೋ-­ಡಿಯಾ ಪತ್ರಿಕಾಗೋಷ್ಠಿಗೆ ಬಂದಾಗ ತೀವ್ರ ಗದ್ದಲ ಉಂಟಾ­ಯಿತು. ಮಾತ­ನಾಡಲು ಸಾಧ್ಯ­ವಾಗದ ಪರಿಸ್ಥಿತಿ ಸೃಷ್ಟಿ­ಯಾಗಿ­ದ್ದರಿಂದ ಅವರು ಎದ್ದು ಹೊರ ನಡೆದರು.

ಪತ್ರಕರ್ತರು ನಡೆದುಕೊಳ್ಳುವ ರೀತಿ ಇದಲ್ಲ. ಕೆಲಸ ಮಾಡುವಾಗ ಸಣ್ಣಪುಟ್ಟ ಸಮಸ್ಯೆಗಳಾಗಬಹುದು. ಅದನ್ನೇ ದೊಡ್ಡದು ಮಾಡಬಾರದು ಎಂದು ಉಪ ಮುಖ್ಯಮಂತ್ರಿ ಹೇಳಿದರು. ಅನಂತರ ಸಿಸೋಡಿಯಾ ಪತ್ರಕರ್ತರ ಕರೆಗಳನ್ನು ಸ್ವೀಕರಿಸಲಿಲ್ಲ.
ಶನಿವಾರ ಎಎಪಿ ಸರ್ಕಾರ ಅಧಿಕಾರ ಸ್ವೀಕರಿಸಿದ ಬಳಿಕವೂ ಇದೇ ರೀತಿ ವಾತಾವರಣ ಸೃಷ್ಟಿಯಾಗಿತ್ತು. ವಿಧಾನ­ಸೌಧಕ್ಕೆ ಪತ್ರಕರ್ತರ ಪ್ರವೇಶ ನಿರಾಕರಿ­ಸಲಾಗಿತ್ತು.

ದೆಹಲಿಯಲ್ಲಿ ಗುಡಿಸಲು ನೆಲಸಮ ಇಲ್ಲ: ದೆಹಲಿಯಲ್ಲಿ ಗುಡಿಸಲುಗಳನ್ನು ನೆಲ­ಸಮ ಮಾಡಬಾರದೆಂದು ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದೆ.

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿ­ವಾಲ್‌ ನೇತೃತ್ವದಲ್ಲಿ ಸೋಮವಾರ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಗುಡಿಸಲುಗಳನ್ನು ನೆಲಸಮ ಮಾಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿತು. ಸದ್ಯ ಜಾರಿಯಲ್ಲಿರುವ ನೆಲಸಮ ಕಾನೂನುಗಳನ್ನು ಪರಾ­ಮರ್ಶೆ ಮಾಡುವವರೆಗೆ ನಗರದೊಳಗೆ ನೆಲ­ಸಮ ಕಾರ್ಯಾಚರಣೆ ನಡೆಸಬಾ­ರದು ಎಂದು ಆದೇಶಿಸಿತು.

ವಿಧಾನಸಭೆ ಚುನಾವಣೆ ಸಮಯ­ದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗುಡಿಸಲುಗಳನ್ನು ನೆಲಸಮ ಮಾಡು­ವುದಿಲ್ಲ ಎಂದು ಎಎಪಿ ಭರವಸೆ ನೀಡಿತ್ತು. ಆದರೆ, ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ನಡೆಯುವ ಕಾರ್ಯಾಚರಣೆಗೆ ಈ ನಿರ್ಧಾರ ಅನ್ವಯವಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಮಾರ್ಚ್ 23ಕ್ಕೆ ಮೊದಲ ಅಧಿವೇಶನ: ದೆಹಲಿ ವಿಧಾನಸಭೆ ಮೊದಲ ಅಧಿವೇ­ಶನ ಈ ತಿಂಗಳ 23 ಹಾಗೂ 24ರಂದು ಕರೆಯುವಂತೆ ಸಚಿವ ಸಂಪುಟ ಶಿಫಾರಸು ಮಾಡಿದೆ. ವಿಧಾನಸಭೆಗೆ ಹೊಸ­ದಾಗಿ ಆಯ್ಕೆ­ಯಾಗಿರುವ ಶಾಸ­ಕರ ಪ್ರಮಾಣ ವಚನ ಹಾಗೂ ಸ್ಪೀಕರ್‌, ಉಪ ಸ್ಪೀಕರ್‌ ಚುನಾವಣೆ ನಡೆಸಲು ಅಧಿವೇಶನ ಕರೆಯುವಂತೆ ಸಂಪುಟ ಶಿಫಾರಸು ಮಾಡಿದೆ. ಮುಖ್ಯಮಂತ್ರಿ ಕೇಜ್ರಿವಾಲ್‌ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಉಪ ಮುಖ್ಯ­ಮಂತ್ರಿ ಮನೀಷ್‌ ಸಿಸೋಡಿಯಾ ಸೇರಿ ಎಲ್ಲ ಸಚಿವರು ಭಾಗವಹಿಸಿದ್ದರು.
ಚುನಾವಣೆ ವೇಳೆ ನೀಡಲಾಗಿರುವ ಅರ್ಧ ದರದಲ್ಲಿ ವಿದ್ಯುತ್‌ ಪೂರೈಸುವ ಭರವಸೆ ಜಾರಿಗೆ ಸೂಕ್ತ ಪ್ರಸ್ತಾವನೆ ಕಳುಹಿಸುವಂತೆ ಕೇಜ್ರಿವಾಲ್ ಅಧಿಕಾರಿ­ಗಳಿಗೆ ಸೂಚನೆ ನೀಡಿದ್ದಾರೆ.

Write A Comment