ರಾಷ್ಟ್ರೀಯ

ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣ: ಮೂರು ವರ್ಷ ಮಾಹಿತಿ ಅಲಭ್ಯ

Pinterest LinkedIn Tumblr

Black-Notes

ಬರ್ನ್‌/ನವದೆಹಲಿ: ವಿದೇಶ­ಗ­ಳಲ್ಲಿನ ಕಪ್ಪು ಹಣ­ವನ್ನು ಸ್ವದೇಶಕ್ಕೆ ತರಲು ಯತ್ನಿಸುತ್ತಿರುವ  ಭಾರತದ ಪ್ರಯತ್ನಗಳು ಸದ್ಯಕ್ಕೆ ಕೈಗೂ­ಡುವ ಲಕ್ಷಣ­ಗಳು ಕಾಣು­ತ್ತಿಲ್ಲ. ತನ್ನ  ಪ್ರಜೆಗಳು ಸ್ವಿಟ್ಜರ್‌­­ಲೆಂಡ್‌ ಬ್ಯಾಂಕು-­­­ಗಳಲ್ಲಿ ಹೊಂದಿ­ರುವ ಖಾತೆಗಳ ವಿವರ ಪಡೆ­ದುಕೊಳ್ಳುವುದಕ್ಕೆ ‘ಅನಿ­ರ್ಬಂಧಿತ ಮಾಹಿತಿ ವಿನಿಮಯ ವ್ಯವಸ್ಥೆ’ಯಡಿ ೨೦೧೮ರವರೆಗೆ ಕಾಯ­ಬೇಕಾಗುತ್ತದೆ.

ತೆರಿಗೆ ತಪ್ಪಿಸಿಕೊಳ್ಳುವಿಕೆ ಹಾಗೂ ವಂಚನೆಯ ವಿರುದ್ಧದ ಹೋರಾಟದಲ್ಲಿ ಪರಸ್ಪರ ನೆರವು ನೀಡುವುದಕ್ಕಾಗಿ ಅಂತರ­ರಾಷ್ಟ್ರೀಯ ಸಂಸ್ಥೆಯಾದ ಒಇ­ಸಿಡಿ, ‘ಅನಿ­ರ್ಬಂಧಿತ ಮಾಹಿತಿ ವಿನಿ­ಮಯ’ ವ್ಯವಸ್ಥೆ ರೂಪಿಸಿದೆ.

ಭಾರತ ಸೇರಿದಂತೆ ೪೦ಕ್ಕೂ ಹೆಚ್ಚು ದೇಶಗಳು ಈ ವ್ಯವಸ್ಥೆ ಜಾರಿಗೆ ಬಂದ ತಕ್ಷಣವೇ ಮೊದಲ ಹಂತದಲ್ಲಿ ಪರಸ್ಪರ ಮಾಹಿತಿ  ವಿನಿಮಯ ಮಾಡಿ­ಕೊಳ್ಳಲಿವೆ. ಈ ದೇಶ­ಗಳು ೨೦೧೬ರಿಂದ ಮಾಹಿತಿ ಸಂಗ್ರಹಿ­ಸಲು ಉದ್ದೇಶಿ­ಸಿವೆ. ೨೦೧೭ರ ಸೆಪ್ಟೆಂಬರ್‌­ನಲ್ಲಿ ಮಾಹಿತಿ ವಿನಿಮಯ ಪ್ರಕ್ರಿಯೆ ಆರಂಭಿಸಲಿವೆ ಎಂದು ಸ್ವಿಟ್ಜರ್‌ಲೆಂಡ್‌ ಸರ್ಕಾ­­ರದ ನೂತನ ವರದಿ ತಿಳಿಸಿದೆ.

೫೮ ದೇಶಗಳು ೨೦೧೭ ರಲ್ಲಿ ಹಾಗೂ ೩೫ ದೇಶ­ಗಳು  ೨೦೧೮ರಲ್ಲಿ ಮೊದಲ ಬಾರಿಗೆ ಮಾಹಿತಿ­ ವಿನಿಮಯ ಮಾಡಿ­ಕೊಳ್ಳಲಿವೆ ಎಂದು

ವರದಿ ಹೇಳಿದೆ. ಭಾರತವು ೨೦೧೭ರ ಮೊದಲ ವಿನಿ­ಮಯ ಗುಂಪಿನಲ್ಲಿದ್ದರೂ ಸ್ವಿಟ್ಜರ್‌­ಲೆಂಡ್‌­ನಿಂದ ಮಾಹಿತಿ ಪಡೆಯು­ವುದಕ್ಕೆ ೨೦೧೮ರವರೆಗೆ ಕಾಯಬೇಕು.  ಸ್ವಿಟ್ಜರ್‌­ಲೆಂಡ್‌ ೨೦೧೮ನೇ ವರ್ಷದ ಪಟ್ಟಿಯಲ್ಲಿ ಇರುವುದೇ ಇದಕ್ಕೆ ಕಾರಣ.

ವಿನಿಮಯ ಪ್ರಕ್ರಿಯೆ: ಯಾವುದೇ ಒಂದು ದೇಶದ ವ್ಯಕ್ತಿ  ಇನ್ನೊಂದು ದೇಶದಲ್ಲಿ ಬ್ಯಾಂಕ್‌\ ಖಾತೆ ಹೊಂದಿದ್ದರೆ ಆ ಬ್ಯಾಂಕ್‌ ಮೊದಲು ತನ್ನ ದೇಶದ ಸಂಬಂಧಪಟ್ಟ ಅಧಿಕಾರಿಗಳಿಗೆ ಆತನ ಖಾತೆ ವಿವರಗಳನ್ನು ನೀಡು­ತ್ತದೆ. ನಂತರ­ದಲ್ಲಿ ಈ ಅಧಿಕಾರಿಗಳು ಆ ವ್ಯಕ್ತಿಯ ದೇಶಕ್ಕೆ  ಮಾಹಿತಿಯನ್ನು ರವಾನಿಸುತ್ತಾರೆ.

ಈ ವ್ಯವಸ್ಥೆಯ ಅಡಿಯಲ್ಲಿ ಬ್ಯಾಂಕ್‌ ಖಾತೆ ಸಂಖ್ಯೆ, ಹೆಸರು, ವಿಳಾಸ, ಹುಟ್ಟಿದ ದಿನಾಂಕ, ತೆರಿಗೆ ಗುರುತು ಸಂಖ್ಯೆ,  ಬಡ್ಡಿ, ಲಾಭಾಂಶ… ಇತ್ಯಾದಿ ಮಾಹಿತಿಗಳನ್ನು ಹಂಚಿಕೊಳ್ಳಬಹುದು.

ತನಿಖೆಯಲ್ಲಿ ಸಿಇಐಬಿ
ಕಪ್ಪು ಹಣದ ತನಿಖೆ­ ಚುರುಕು­ಗೊ­ಳಿ­ಸುವ ಸಲು­ವಾಗಿ ವಿಶೇಷ ತನಿಖಾ ತಂಡವು ಕೇಂದ್ರೀಯ ಆರ್ಥಿಕ ಗುಪ್ತ­ದಳದ (ಸಿಇಐಬಿ) ನೆರವು ಪಡೆಯು­ತ್ತಿದೆ.  ವಿಶೇಷ ತನಿಖಾ ತಂಡದಲ್ಲಿ­ರುವ (ಎಸ್‌ಐಟಿ) ಎಲ್ಲ ತನಿಖಾ ಹಾಗೂ ಜಾರಿ ಸಂಸ್ಥೆಗಳ ನಡುವೆ ಪ್ರಮುಖ ಸಂಯೋಜಕ ಸಂಸ್ಥೆಯಾಗಿ ಸಿಇಐಬಿ ಕೆಲಸ ಮಾಡಲಿದೆ.

Write A Comment