ರಾಷ್ಟ್ರೀಯ

ದೆಹಲಿ ಸಿಎಂ ಆಗಿ ಕೇಜ್ರಿವಾಲ್ ಅಧಿಕಾರಕ್ಕೆ ಏರಲಿರುವ ಅರವಿಂದ್ ಕೇಜ್ರಿವಾಲ್ ಯಾರು..?

Pinterest LinkedIn Tumblr

Arvind Kejriwal

ನವದೆಹಲಿ: ದೆಹಲಿಯಲ್ಲಿ ಮೋದಿ ಅಲೆಯನ್ನು ಕೇಜ್ರಿವಾಲ್ ಸುನಾಮಿ ಬ್ರೇಕ್ ಮಾಡಿದೆ. ಈ ಮೂಲಕ ಎರಡನೇ ಬಾರಿ ದೆಹಲಿ ಸಿಎಂ ಆಗಿ ಕೇಜ್ರಿವಾಲ್ ಅಧಿಕಾರಕ್ಕೆ ಏರಲಿದ್ದಾರೆ.

ಹಿನ್ನೆಲೆ: 1989ರಲ್ಲಿ ಕೇಜ್ರಿವಾಲ್ ತಮ್ಮ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪೂರೈಸಿ, 1992ರಲ್ಲಿ ಕಂದಾಯ ಇಲಾಖೆಯಲ್ಲಿ ಜಂಟಿ ಆಯುಕ್ತ ಕೆಲಸಕ್ಕೆ ಸೇರಿಕೊಂಡರು. ತಮ್ಮ ತೆರಿಗೆ ಕಚೇರಿಯಲ್ಲಿ ನಡೆದ ಭ್ರಷ್ಟಚಾರದಿಂದ ಆಕ್ರೋಶಗೊಂಡು ಇದರ ವಿರುದ್ಧ ಹೋರಾಡಲು 2000ರಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿ ಭ್ರಷ್ಟಚಾರದ ವಿರುದ್ಧ ಧ್ವನಿ ಎತ್ತಿದರು.

ಬಳಿಕ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸಲು ಪರಿವರ್ತನ ಎಂಬ ಸಂಘವನ್ನು ಹುಟ್ಟುಹಾಕಿದರು. ಇವರ ಹಲವು ಹೋರಾಟಕ್ಕೆ ಮಣಿದ ಸರ್ಕಾರ ಮಾಹಿತಿ ಹಕ್ಕು ಕಾಯ್ದೆ(551) ಜಾರಿಗೆ ತಂದಿತು. ಉತ್ತಮ ನಾಯಕತ್ವದೊಂದಿಗೆ, ಭ್ರಷ್ಟಾಚಾರದ ವಿರುದ್ದ ಹೋರಾಡಿದ್ದ ಕೇಜ್ರಿವಾಲ್‍ಗೆ 2006ರಲ್ಲಿ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಲಭಿಸಿದೆ.

ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸಲು 2010ರಲ್ಲಿ ಜನಲೋಕಪಾಲ ಮಸೂದೆ ಜಾರಿಗೆ ತರಲು ಅಣ್ಣಾ ಹಜಾರೆ, ಕಿರಣ್ ಬೇಡಿ ಜೊತೆಗೂಡಿ ದೆಹಲಿ ಸೇರಿದಂತೆ ದೇಶದ ಮಹಾನಗರಗಳಲ್ಲಿ ಪ್ರತಿಭಟನೆ ನಡೆಸಿದ್ದರು.

ಕೇಂದ್ರ ಸರ್ಕಾರ ಇವರ ಪ್ರತಿಭಟನೆ ಮಣಿಯದ ಹಿನ್ನಲೆಯಲ್ಲಿ 2012ರಲ್ಲಿ ಅಧಿಕೃತವಾಗಿ ಕೇಜ್ರಿವಾಲ್ ಆಮ್ ಆದ್ಮಿ ಪಾರ್ಟಿಯನ್ನು ಹೊರತಂದರು. ನಂತರ ಮೊದಲ ಬಾರಿಗೆ 2013ರಲ್ಲಿ ಆಮ್ ಆದ್ಮಿ ಪಕ್ಷದಿಂದ ಚುನಾವಣೆಯ ಕಣಕ್ಕಿಳಿದ ಕೇಜ್ರಿವಾಲ್, ಕಾಂಗ್ರೆಸ್ ಪಕ್ಷದ ಶೀಲಾ ದೀಕ್ಷಿತ್‍ರನ್ನು ಸೋಲಿಸಿ 2013 ಡಿಸೆಂಬರ್ 28 ದೆಹಲಿಯ ಸಿಎಂ ಆಗಿ ಹೊರಹೊಮ್ಮಿದರು.

ಸಿಎಂ ಹುದ್ದೆಗೆ ರಾಜೀನಾಮೆ: 2014ರ ಫೆ.14ರಂದು ಜನ ಲೋಕಪಾಲ ಮಸೂದೆ ಮಂಡನೆ ವೇಳೆ ಕೇಜ್ರಿವಾಲ್‍ಗೆ ದೆಹಲಿಯಲ್ಲಿ ವಿಧಾನಸಭೆಯಲ್ಲಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಬೆಂಬಲ ನೀಡಿರಲಿಲ್ಲ. ಬೆಂಬಲ ನೀಡದ್ದಕ್ಕೆ ಬೇಸತ್ತ ಕೇಜ್ರಿವಾಲ್ ಅದೇ ದಿನ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

Write A Comment