ರಾಷ್ಟ್ರೀಯ

‘ಕಿಸ್ ಆಫ್ ಲವ್’ ಆಯ್ತು ಇದೀಗ ‘ಕಿಸ್ ಇನ್ ದಿ ಸ್ಟ್ರೀಟ್: ಕೇರಳದಲ್ಲಿ ಇಂದು 2ನೇ ಹಂತದ ‘ಕಿಸ್ ಆಫ್ ಲವ್’

Pinterest LinkedIn Tumblr

kiss-of-love

ತಿರುವನಂತಪುರ: ಕೇರಳದಲ್ಲಿ  ಇಂದು 2ನೇ ಹಂತದ ‘ಕಿಸ್ ಆಫ್ ಲವ್’ ಪ್ರತಿಭಟನೆ ನಡೆಯಲಿದ್ದು ಕೋಝಿಕೋಡ್ನಲ್ಲಿ ಭರದ ಸಿದ್ಧತೆ ಸಾಗಿದೆ.

ಕೋಝಿಕೋಡ್ನ ಪ್ರದೇಶದಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಬೆಳಕಿಗೆ ಬಂದಿತು. ಇದರ ಬೆನ್ನಲ್ಲೆ ಸ್ಥಳೀಯ ಜನಪರ ಸಂಘಟನೆಗಳು ಇದರ ವಿರುದ್ಧ ಪ್ರತಿಭನಟನೆ ನಡೆಸಲು ಮುಂದಾದವು.

ಅಂತೆಯೇ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದನ್ನು ಖಂಡಿಸಿ, ಕೆಲ ಫೇಸ್ ಬುಕ್ ನವೆಂಬರ್ 2 ರಂದು, ಸಂಘಟನೆಗಳು ಕೊಚ್ಚಿ ತೀರದಲ್ಲಿ ‘ಕಿಸ್ ಆಫ್ ಲವ್’ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.

ಯುವಕ ಯುವತಿಯರು ಸೇರಿದಂತೆ ಹಲವರು ಪರಸ್ಪರ ಚುಂಬನ ನೀಡುವ ನೀಡುವ ಮೂಲಕ ಪ್ರತಿಭಟನೆಗೆ ಮುಂದಾದರು. ಈ ವೇಳೆ ಪ್ರತಿಭನಟೆಯಲ್ಲಿ ಭಾಗವಹಿಸಿದ್ದವರನ್ನು ಪೊಲೀಸರು ಬಂದಿಸಲು ಮುಂದಾದರು. ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಯಿತು.

ಇದರ ಬೆನ್ನಲ್ಲೆ ದೇಶದ ಪ್ರಮುಖ ನಗರಗಳಲ್ಲೂ ‘ಕಿಸ್ ಆಫ್ ಲವ್’ ಹೆಸರಿನಡಿಯಲ್ಲಿ ಪ್ರತಿಭಟನೆ ನಡೆಸುವ ಕುರಿತು ವಿವಾದಕ್ಕೂ ಕಾರಣವಾಯಿತು. ಬೆಂಗಳೂರಿನಲ್ಲಿ ಕಳೆದ ನವೆಂಬರ್ 22 ರಂದು ‘ಕಿಸ್ ಆಫ್ ಲವ್’ ಪ್ರತಿಭಟನೆ ನಡೆಸುವ ಕುರಿತು ಕೆಲ ಸಂಘಟನೆಗಳು ಸರ್ಕಾರದ ಅನುಮತಿ ಪಡೆಯಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.

ಸಾಮಾಜಿಕ ಮನೋಭಾವಕ್ಕೆ ಧಕ್ಕೆ ಉಂಟಾಗುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಲಿಲ್ಲ. ಸರ್ಕಾರದ ನಿರ್ಧಾರದಿಂದಾಗಿ ‘ಕಿಸ್ ಆಫ್ ಲವ್’ ಕಾರ್ಯಕ್ರಮದ ಆಯೋಜಕರು ಹಿಂದೆಸರಿದರು.

ಇದೀಗ ಕೇರಳದಲ್ಲಿ ಮತ್ತೆ ‘ಕಿಸ್ ಆಫ್ ಲವ್’ ಕಾರ್ಯಕ್ರಮ ನಡೆಯುವ ಕುರಿತು ಆಯೋಜಕರು ಪ್ರಕಟಿಸಿದ್ದಾರೆ.

2ನೇ ಹಂತದ ‘ಕಿಸ್ ಆಫ್ ಲವ್’ ಪ್ರತಿಭಟನೆಯನ್ನು ‘ಕಿಸ್ ಇನ್ ದಿ ಸ್ಟ್ರೀಟ್’ ಎಂಬ ಹೆಸರಿನಲ್ಲಿ ಹಮ್ಮಿಕೊಂಡಿದೆ. ನಾಳೆ ಕೋಝಿಕೋಡ್ ನ ಮೋಫಿಸಿಸ್ ಬಸ್ ನಿಲ್ದಾಣದ ಸಮೀಪ ಪ್ರತಿಭಟನೆ ನಡೆಯಲಿದೆ.

‘ಕಿಸ್ ಇನ್ ದಿ ಸ್ಟ್ರೀಟ್’ ಪ್ರತಿಭಟನೆಯಲ್ಲಿ ಭಾಗವಹಿಸಲು ಈಗಾಗಲೇ ಸಾವಿರಾರು ಮಂದಿ ಯುವಕರು, ಯುವತಿಯರು ತಮ್ಮ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

Write A Comment