ರಾಷ್ಟ್ರೀಯ

250 ಮಂದಿ ಕಪ್ಪುಹಣ ಖಾತೆ ಹೊಂದಿರುವುದಾಗಿ ಒಪ್ಪಿದ್ದಾರೆ : ಜೇಟ್ಲಿ

Pinterest LinkedIn Tumblr

Jaitley_Arun

ನವದೆಹಲಿ: ವಿದೇಶದಲ್ಲಿರುವ ಕಪ್ಪು ಹಣದ ಬಗ್ಗೆ ನಡೆದಿರುವ ಚರ್ಚೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ಲೋಕಸಭೆಯಲ್ಲಿ ಉತ್ತರ ನೀಡಲಿದ್ದಾರೆ.

ಬುಧವಾರ ರಾಜ್ಯಸಭೆಯಲ್ಲಿ ವಿಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸಚಿವರ ಉತ್ತರಕ್ಕೆ ಅಸಮಧಾನ ಸೂಚಿಸಿ ಹೊರ ನಡೆದಿದ್ದವು.

ಕಲಾಪದಲ್ಲಿ ಇಲ್ಲಿಯವರೆಗೆ  ಏನೇನಾಯ್ತು?

ವಿದೇಶದಲ್ಲಿರುವ ಕಪ್ಪು ಹಣದ ಖಾತೆ ಹೊಂದಿರುವವರನ್ನು ಪತ್ತೆ ಹಚ್ಚಿ, ಕಪ್ಪು ಹಣವನ್ನು ವಾಪಸ್ ತರಲಾಗುವುದು ಆದರೆ ಅದಕ್ಕೆ ಸಮಯ ಬೇಕಾಗುತ್ತದೆ ಎಂದು ರಾಜ್ಯಸಭೆಯಲ್ಲಿ ಜೇಟ್ಲಿ ಹೇಳಿದ್ದಾರೆ.
427 ಖಾತೆಗಳನ್ನು ಪತ್ತೆ ಹಚ್ಚಿದ್ದು, 20 ಮಂದಿ ತಮಗೆ ವಿದೇಶದಲ್ಲಿ ಖಾತೆಗಳಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ-ಜೇಟ್ಲಿ ಹೇಳಿಕೆ
ಕಪ್ಪು ಹಣ ಹೊಂದಿರುವವರ ಹೆಸರನ್ನು ಬಹಿರಂಗ ಪಡಿಸಬೇಕೆ? ಬೇಡವೇ ಎಂಬುದು ಇಲ್ಲಿ ಸಮಸ್ಯೆಯಲ್ಲ. ಆದರೆ ಯಾವಾಗ ಬಹಿರಂಗ ಪಡಿಸಬೇಕು ಎನ್ನುವುದು ಮುಖ್ಯ. ಕಪ್ಪು ಹಣ ಹೊಂದಿದವರ ಹೆಸರನ್ನು ಬಿಜೆಪಿ ಬಹಿರಂಗ ಪಡಿಸಬೇಕೆಂದು ವಿಪಕ್ಷಗಳು ಒತ್ತಾಯಿಸಿದ್ದವು.
ಅಧಿಕಾರಕ್ಕೇರಿದ 100 ದಿನಗಳಲ್ಲಿ ಕಪ್ಪುಹಣವನ್ನು ವಾಪಸ್ ತರಲಾಗುವುದು. ಕಪ್ಪು ಹಣ ವಾಪಸ್ ತಂದರೆ ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೆ ರು.15 ಲಕ್ಷ ಹಂಚಿಕೆಯಾಗುತ್ತದೆ ಎಂದು ನರೇಂದ್ರ ಮೋದಿ ಚುನಾವಣೆಯ ವೇಳೆ ಭರವಸೆ ನೀಡಿದ್ದರು. ಇದೀಗ ಮೋದಿ ತಮ್ಮ ಮಾತುಗಳನ್ನು ಉಳಿಸಿಕೊಂಡಿಲ್ಲ. ಆದ್ದರಿಂದ ಅವರು ಜನರ ಕ್ಷಮೆ ಕೇಳಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ಜೇಟ್ಲಿ ತಳ್ಳಿ ಹಾಕಿದ್ದಾರೆ.
ಈ ದೇಶವನ್ನು ತಪ್ಪಾದ ದಾರಿಯಲ್ಲಿ ಮುನ್ನಡೆಸಲಾಗುತ್ತಿದೆ. 100 ದಿನಗಳಲ್ಲಿ ಕಪ್ಪು ಹಣವನ್ನು ತರುತ್ತೇವೆ ಎಂದಿದ್ದರು…ಆಡಳಿತಾರೂಢ ಪಕ್ಷಗಳು ಈ ವಿಷಯದಲ್ಲಿ ರಾಜಕೀಯ ನಡೆಸುತ್ತಿವೆ ಎಂದು ಮಾಜಿ ವಾಣಿಜ್ಯ ಸಚಿವ ಆನಂದ್ ಶರ್ಮಾ ಆರೋಪ.
ನೀವೆಲ್ಲರೂ ಸುಳ್ಳುಗಾರರು..ನಿಮಗೆ ಕಪ್ಪು ಹಣವನ್ನು ವಾಪಾಸ್ ತರಬೇಕೆಂಬ ಯಾವ ಉದ್ದೇಶವೂ ಇದ್ದಂತಿಲ್ಲ ಎಂದು ತೃಣಮೂಲ ಕಾಂಗ್ರೆಸ್ನ ಡೆರಿಕ್ ಓ ಬ್ರೈನ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಬಹುಜನ್ ಸಮಾಜ್ ಪಾರ್ಟಿ ಮುಖ್ಯಸ್ಥೆ ಮಾಯಾವತಿ, ಜನತಾದಳ (ಸಂಯುಕ್ತ)ದ ಶರದ್ ಯಾದವ್, ಎಡಪಕ್ಷದ ಸೀತಾರಾಂ ಯೆಚೂರಿ ಮೊದಲಾದವರು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಸಕ್ರಿಯರಾಗಿದ್ದರು.
ಲೋಕಸಭೆಯಲ್ಲಿ ನಿನ್ನೆ ಕಪ್ಪು ಹಣದ ಬಗ್ಗೆಯೇ ಚರ್ಚೆಯಾಗಿತ್ತು. ವಿಪಕ್ಷಗಳ ಒತ್ತಾಯದ ಮೇರೆಗೆ ಮೇಲ್ಮನೆ ಮತ್ತು ಕೆಳಮನೆಗಳಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಅನುಮತಿ ನೀಡಿತ್ತು.
ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯ ಕಲಾಪದಲ್ಲಿ ಇದೇ ಚರ್ಚೆಯನ್ನು ಮುಂದುವರಿಸಲು ವಿಪಕ್ಷಗಳು ತೀರ್ಮಾನಿಸಿವೆ.
ಡಿಸೆಂಬರ್ 23ರ ವರೆಗೆ ಚಳಿಗಾಲ ಅಧಿವೇಶನ ನಡೆಯಲಿದ್ದು, ಇದರಲ್ಲಿ 37 ಮಸೂದೆಗಳ ಮಂಡನೆಯಾಗಲಿದೆ.

Write A Comment