ನವದೆಹಲಿ: ಸಿಗರೇಟುಗಳ ಬಿಡಿ ಮಾರಾಟ ಮತ್ತು ತಂಬಾಕು ಬಳಕೆ ಮೇಲೆ ನಿಷೇಧ ಹೇರುವ ಶಿಫಾರಸಿಗೆ ಕೇಂದ್ರ ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದೆ.
ಸದ್ಯದಲ್ಲೇ ಈ ಶಿಫಾರಸುಗಳು ಸಂಪುಟದ ಮುಂದೆ ಬರಲಿದ್ದು ಅಲ್ಲಿ ಒಪ್ಪಿಗೆ ದೊರೆತ ಬಳಿಕ ಸಂಸತ್‌ನಲ್ಲಿ ಮಂಡನೆಯಾಗಲಿದೆ. ಅಲ್ಲೂ ಅಂಗೀಕಾರವಾದರೆ ತಂಬಾಕಿನ ಮೇಲೆ ನಿಯಂತ್ರಣ ಮಾತ್ರವಲ್ಲದೆ, ತಂಬಾಕು ಅಥವಾ ಸಿಗರೇಟು ಸೇವನೆಗೆ ಕನಿಷ್ಠ ವಯೋವುತಿ ಏರಿಕೆ, ತಂಬಾಕು ಉತ್ಪನ್ನ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿ ವಿಧಿಸಲಾಗುವು ದಂಡ ಹೆಚ್ಚಳ ಸೇರಿದಂತೆ ಅನೇಕ ಕಠಿಣ ಶಿಫಾರಸುಗಳನ್ನು ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಆರೋಗ್ಯ ಸಚಿವಾಲಯ ಈ ಶಿಫಾರಸುಗಳಿಗೆ ಒಪ್ಪಿಗೆ ನೀಡಿದ್ದು, ಸಚಿವರ ಅಭಿಪ್ರಾಯ ಸಂಗ್ರಹಿಸಲು ಕರಡು ಟಿಪ್ಪಣಿಯನ್ನೂ ಸಿದ್ಧಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಜೆ.ಪಿ ನಡ್ಡಾ ಅಳರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.