ರಾಷ್ಟ್ರೀಯ

ವಿರೋಧ ಪಕ್ಷದ ನಾಯಕತ್ವ: ಕಾಂಗ್ರೆಸ್ ಪಕ್ಷವನ್ನು ಕುಚೋದ್ಯ ಮಾಡಿದ ಬಿಜೆಪಿ

Pinterest LinkedIn Tumblr

Rahul-Gandhi

ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ನಗಣ್ಯ ಸಂಖ್ಯೆಯ ಬಗ್ಗೆ ಕುಹಕವಾಡಿರುವ ಬಿಜೆಪಿ ಪಕ್ಷ, ವಿರೋಧ ಪಕ್ಷ ಎಷ್ಟು ದುರ್ಬಲವಾಗಿದೆ ಎಂದರೆ, ಅವರ ನಾಯಕರಿಗೆ ವಿರೋಧಪಕ್ಷ ನಾಯಕನ ಮಾನ್ಯತೆ ನೀಡಲು ಸರ್ಕಾರ ಕಷ್ಟ ಪಟ್ಟು ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಲೋಕಸಭೆಯ 543 ಸದಸ್ಯ ಸಂಖ್ಯೆಯಲ್ಲಿ ಶೇಕಡಾ ೧೦% ಸದಸ್ಯರೂ ಕಾಂಗ್ರೆಸ್ ನಿಂದ ಆಯ್ಕೆಯಾಗಿಲ್ಲವಾದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕೊಡಲಾಗುವುದಿಲ್ಲ ಎಂದು ಈ ಹಿಂದೆ ಸ್ಪೀಕರ್ ಹೇಳಿದ್ದರು. ಕಾಂಗ್ರೆಸ್ ೪೪ ಲೋಕಸಭಾ ಸದಸ್ಯರ ಬಲಾಬಲ ಹೊಂದಿದೆ.

ಬಿಜೆಪಿ ಸದಸ್ಯತ್ವ ಜಾಥಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ “ವಿರೋಧ ಪಕ್ಷದ ನಾಯಕನ ಮಾನ್ಯತೆಗಾಗಿ ಸರ್ಕಾರ ಕೆಲಸ ಮಾಡಬೇಕಿದೆ. ಬಿಜೆಪಿ ವಿರೋಧ ಪಕ್ಷವಾಗಿದ್ದಾಗ, ಅದು ಜನರ ದನಿಯಾಗಿತ್ತು ಆದರೆ ಇಂದಿನ ವಿರೋಧ ಪಕ್ಷ ಸಂಪೂರ್ಣ ಸೋತಿದೆ” ಎಂದಿದ್ದಾರೆ.

ಸದ್ಯ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲು, ಸಂವಿಧಾನದಲ್ಲಿ ತಿದ್ದುಪಡಿ ತರುವ ಪ್ರಸ್ತಾವ ಸರ್ಕಾರದ ಮುಂದೆ ಇರುವ ಹಿನ್ನಲೆಯಲ್ಲಿ ರಾಮ್ ಮಾಧವ್ ಬಿಜೆಪಿ ಸರ್ಕಾರ ಎಷ್ಟು ಬಲಿಷ್ಟವಾಗಿದೆ ಎಂದರೆ ನಮಗೆ ನಿಜವಾದ ವಿರೋಧವೇ ಇಲ್ಲ ಎಂದಿದ್ದಾರೆ.

ಸದ್ಯ ೩.೬ ಕೋಟಿ ಸದ್ಯರನ್ನು ಹೊಂದಿರುವ ಬಿಜೆಪಿ ಪಕ್ಷ ಅದನ್ನು ತ್ರಿಗುಣಗೊಳಿಸುವುದರತ್ತ ಕಾರ್ಯತಂತ್ರ ರೂಪಿಸಿದೆ ಮತ್ತು ಪಕ್ಷದ ಕಾರ್ಯಕರ್ತರನ್ನು ೬ ಲಕ್ಷದಿಂದ ೮ ಲಕ್ಷಕ್ಕೆ ಏರಿಸುವುದರತ್ತ ಗಮನ ಹರಿಸಿದೆ.

Write A Comment