ರಾಷ್ಟ್ರೀಯ

ಉದ್ಯಮಿ ಮೇಲೆ ಗುಂಡಿನ ದಾಳಿ ಪ್ರಕರಣ : ಪೊಲೀಸ್ ಪೇದೆಯಿಂದಲೇ ಕೊಲೆಗೆ ಯತ್ನ-ಬಂಧಿಸಲು ಪೊಲೀಸರ ಸಿದ್ಧತೆ

Pinterest LinkedIn Tumblr

Shootput

ಹೈದ್ರಾಬಾದ್, ನ.20: ಮುತ್ತಿನ ನಗರಿ ಹೈದ್ರಾಬಾದ್‌ನಲ್ಲಿ ನಿನ್ನೆ ಉದ್ಯಮಿಯೊಬ್ಬರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪೊಲೀಸ್ ಪೇದೆಯೇ ಗುಂಡು ಹಾರಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಒಬುಲೇಶು ಎಂಬ ಪೊಲೀಸ್ ಪೇದೆಯನ್ನು ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆದರೆ, ಈವರೆಗೂ ಈತನನ್ನು ಬಂಧಿಸಿರುವ ಬಗ್ಗೆ ಖಚಿತಪಟ್ಟಿಲ್ಲ.

ನಿನ್ನೆ ಬೆಳಿಗ್ಗೆ ಹೈದ್ರಾಬಾದ್‌ನ ಬಂಜಾರ ಹಿಲ್ಸ್‌ನ ಕೆಬಿಆರ್ ಪಾರ್ಕ್‌ನಲ್ಲಿ ಆರೋಬಿಂದು ಫಾರ್ಮ ಕಂಪೆನಿಯ ಉಪಾಧ್ಯಕ್ಷ ಕೆ.ನಿತ್ಯಾನಂದರೆಡ್ಡಿ ಮೇಲೆ ಎಕೆ-47 ಬಂದೂಕಿನಿಂದ ಗುಂಡಿನ ದಾಳಿ ನಡೆದಿತ್ತು. ಆಶ್ಚರ್ಯಕರ ರೀತಿಯಲ್ಲಿ ನಿತ್ಯಾನಂದರೆಡ್ಡಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಎಕೆ-47 ಬಂದೂಕಿನಿಂದ ಪೇದೆ ಒಬಲೇಶನೇ ಗುಂಡು ಹಾರಿಸಿದ್ದಾನೆಂಬ ಅನುಮಾನ ವ್ಯಕ್ತವಾಗಿದೆ. ಪ್ರಸ್ತುತ ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈತ ೧೫ ದಿನಗಳ ಕಾಲ ರಜೆಯಲ್ಲಿದ್ದಾನೆ. ಅನಂತ್‌ಪುರದಿಂದ ಹೈದ್ರಾಬಾದ್‌ಗೆ ಆಗಮಿಸಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ಕಳೆದ ವರ್ಷ ವಿಶಾಖಪಟ್ಟಣದಲ್ಲಿ ನಕ್ಸಲೀಯರ ಮೇಲೆ ದಾಳಿ ನಡೆದ ವೇಳೆ ಎಕೆ-೪೭ ಬಂದೂಕು ಅಪಹರಣವಾಗಿತ್ತು. ಈ ಬಂದೂಕಿನಿಂದಲೇ ಗುಂಡಿನ ದಾಳಿ ನಡೆದಿದೆ ಎಂಬುದು ಪೊಲೀಸರ ವಾದ. ಇದೀಗ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಅವಲೋಕಿಸುತ್ತಿದ್ದಾರೆ. ಇದರಲ್ಲಿ ಬಂದೂಕಿನಿಂದ ಗುಂಡು ಹಾರಿಸಿರುವ ಅನಾಮಧೇಯ ವ್ಯಕ್ತಿಯ ಚಿತ್ರ ಸೆರೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ಬೆಳಿಗ್ಗೆ ನಿತ್ಯಾನಂದರೆಡ್ಡಿ ತನ್ನ ಆಡಿ ಕಾರಿನಲ್ಲಿ ಬರುತ್ತಿದ್ದ ವೇಳೆ ಆಗಂತುಕರು ಗುಂಡಿನ ದಾಳಿ ನಡೆಸಿದ್ದರು. ಇತ್ತೀಚೆಗಷ್ಟೆ ಉದ್ಯೋಗಕ್ಕೆ ಸೇರಿದ್ದ ಓಬಳೇಶ್ ಅರಬಿಂದೋ ಫಾರ್ಮಾ ನಿರ್ದೇಶಕ ಕೆ.ನಿತ್ಯಾನಂದರೆಡ್ಡಿಯವರನ್ನು ಅಪಹರಿಸಿ ಒಂದು ಕೋಟಿ ರೂ.ಗಳಿಗೆ ಬೇಡಿಕೆ ಇಡುವ ಯೋಜನೆ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಬೆಳಿಗ್ಗೆ ಹೈದ್ರಾಬಾದ್‌ನ ಬಂಜಾರ ಹಿಲ್ಸ್‌ನ ಕೆಬಿಆರ್ ಪಾರ್ಕ್‌ನಲ್ಲಿ ಆರೋಬಿಂದು ಫಾರ್ಮ ಕಂಪೆನಿಯ ಉಪಾಧ್ಯಕ್ಷ ಕೆ.ನಿತ್ಯಾನಂದರೆಡ್ಡಿ ಮೇಲೆ ಎಕೆ-೪೭ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದ ಓಬಳೇಶ್‌ನನ್ನು ಅವನ ಮೊಬೈಲ್ ಕರೆ ಮೂಲಕ ಪತ್ತೆಹಚ್ಚಿದ ಪೊಲೀಸರು ಅವನನ್ನು ಬಂಧಿಸಲು ಮುಂದಾದರು. ಈ ವೇಳೆಗಾಗಲೇ ಆರೋಪಿ ಓಬಳೇಶ್ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುವ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ. ಬಸ್ ಆಗಲೇ ಅನಂತಪುರ-ಕರ್ನೂಲ್ ಮಧ್ಯೆ ಬರುತ್ತಿತ್ತು. ಮಾರ್ಗಮಧ್ಯದಲ್ಲಿ ಬಸ್ ತಡೆದ ಪೊಲೀಸರು ಒಳಗಿದ್ದ ಪೇದೆ ಓಬಳೇಶ್‌ನನ್ನು ವಶಕ್ಕೆ ತೆಗೆದುಕೊಂಡರು.

ಪ್ರಸ್ತುತ ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆ ಓಬಳೇಶ್ 15 ದಿನಗಳ ಕಾಲ ರಜೆಯಲ್ಲಿದ್ದಾನೆ. ಕಳೆದ ವರ್ಷ ವಿಶಾಖಪಟ್ಟಣದಲ್ಲಿ ನಕ್ಸಲೀಯರ ಮೇಲೆ ದಾಳಿ ನಡೆದ ವೇಳೆ ಎಕೆ-೪೭ ಬಂದೂಕು ಅಪಹರಣವಾಗಿತ್ತು. ಈ ಬಂದೂಕಿನಿಂದಲೇ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ನಿನ್ನೆ ಬೆಳಿಗ್ಗೆ ನಿತ್ಯಾನಂದರೆಡ್ಡಿ ತನ್ನ ಔಡಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಬಂಜಾರಾ ಹಿಲ್ಸ್‌ನಲ್ಲಿ ಪೇದೆ ಓಬಳೇಶ್ ಅವರ ಕಾರಿನೊಳಕ್ಕೇ ನುಗ್ಗಿ ಯದ್ವಾತದ್ವ ಗುಂಡುಹಾರಿಸಿದ್ದಾರೆ.

Write A Comment