ರಾಷ್ಟ್ರೀಯ

ಸ್ವಚ್ಛ ಭಾರತ ಆಂದೋಲನದೊಂದಿಗೆ ವಿಷಬೀಜ ಬಿತ್ತುತ್ತಿದ್ದಾರೆ: ರಾಹುಲ್ ಗಾಂಧಿ

Pinterest LinkedIn Tumblr

Rahul_Gandhi_Sonia_Gandhi_Manmohan_pledge650

ನವದೆಹಲಿ: ಒಂದು ಕಡೆ ಸ್ವಚ್ಛತಾ ಆಂದೋಲನ ನಡೆಸುತ್ತಾ ಮತ್ತೊಂದೆಡೆ ವಿಷ ಬೀಜವನ್ನು ಬಿತ್ತುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯ ತಾಲ್‌ಕಟೋರಾ ಕ್ರೀಡಾಂಗಣದಲ್ಲಿ ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರು ಅವರ 125ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕುಪಿತ ವ್ಯಕ್ತಿಗಳು ದೇಶವ್ನು ಮುನ್ನಡೆಸುತ್ತಿದ್ದಾರೆ ಎಂದರು.

ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರೀತಿಯಿಂದ ಸ್ವಾತಂತ್ರ ಪಡೆದ ಏಕೈಕ ದೇಶ ನಮ್ಮದು, ಅಂತದರಲ್ಲಿ ಇಂದು ಆವೇಶಭರಿತ ಜನರು ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದರು. ಇಂತಹ ಶಕ್ತಿಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂದರು.

ಭಾರತದ ಪ್ರತಿಯೊಬ್ಬ ಪ್ರಜೆಯಲ್ಲೂ ಕಾಂಗ್ರೆಸ್ ಬಗ್ಗೆ ಗೌರವವಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗೌರವಕ್ಕೆ ಕಾಂಗ್ರೆಸ್ ಪಾತ್ರವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಹುಚ್ಚು ಆವೇಶದೊಂದಿಗೆ ದೇಶವನ್ನು ಆಳುತ್ತಿರುವವರು ಇಂದು ಸ್ವಚ್ಛತಾ ಆಂದೋಲನ ನಡೆಸಿದರೆ ಮತ್ತೊಂದೆಡೆ ವಿಷಬೀಜ ಬಿತ್ತುತ್ತಾರೆ. ಹೆಚ್ಚಿನ ಛಾಯಾಚಿತ್ರಗಳಿಗೆ ಅವಕಾಶ ನೀಡುತ್ತಾ ಕಡಿಮೆ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಗಾಂಧೀಜಿ, ನೆಹರು ಪಾತ್ರ ಪ್ರಮುಖವಾಗಿತ್ತು. ನವಭಾರತ ನಿರ್ಮಾಣಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟರು ಎಂದರು. ಆದರೆ ಇಂದು ನೆಹರು ಪರಂಪರೆಯನ್ನು ಅಳಿಸಿ ಹಾಕುವ ಪ್ರಯತ್ನಗಳು ನಡೆಯುತ್ತಿದೆ. ಸ್ವಚ್ಛ ಭಾರತವೋ ಅಥವಾ ಭಾರತದ ವಿಭಜನೆಯೋ ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದರು.

Write A Comment