ರಾಷ್ಟ್ರೀಯ

ಈ ವಾರಾಂತ್ಯದಲ್ಲಿ ಇಂಧನ ಬೆಲೆ ಮತ್ತೆ ಕಡಿಮೆಯಾಗುವ ಸಾಧ್ಯತೆ; ವಾಹನ ಸವಾರರಿಗೆ ಮತ್ತೊಂದು ಸಿಹಿ ಸುದ್ದಿ..!

Pinterest LinkedIn Tumblr

petrol30

ನವದೆಹಲಿ: ಜಾಗತೀಕ ಮಟ್ಟದಲ್ಲಿ ಇಂಧನ ಬೆಲೆ ಕುಸಿದ ಪರಿಣಾಮ ಈ ವಾರಾಂತ್ಯದಲ್ಲಿ ಪೆಟ್ರೋಲ್, ಡಿಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆಗಳಿವೆ.

ಈ ವಾರದಲ್ಲಿ ಪೆಟ್ರೋಲ್, ಡಿಸೆಲ್ ಬೆಲೆ ಕಡಿತಗೊಂಡರೆ, ಆಗಸ್ಟ್ ತಿಂಗಳೊಳಗಾಗಿ 7 ಭಾರಿ ಇಂಧನ ಬೆಲೆ ಕಡಿಮೆಯಾದಂತೆ. ಇತ್ತೀಚೆಗಷ್ಟೆ ಇಂಧನ ಬೆಲೆ ಕಡಿಮೆಯಾದ ಬೆನ್ನಲ್ಲೆ ಮತ್ತೆ ಬೆಲೆ ಕಡಿತದ ಸುದ್ದಿ ವಾಹನ ಸವಾರ ಮೊಗದಲ್ಲಿ ಸಂತಸ ಉಂಟುಮಾಡಿದೆ.

ಕಳೆದ ನವೆಂಬರ್ 1ರಂದು ಪ್ರತಿ ಲೀ.  ಪೆಟ್ರೋಲ್‌ಗೆ ರೂ. 2.14 ರಷ್ಟು ಕಡಿತಗೊಳಿಸಲಾಗಿತ್ತು. ಪ್ರತಿ ಲೀ. ಡಿಸೇಲ್‌ಗೆ ರೂ.2.25 ರಷ್ಟು ಕಡಿಮೆಯಾಗಿತ್ತು. ಕಳೆದ ಆಗಸ್ಟ್ ತಿಂಗಳಿಂದ ಪ್ರತಿ ಲೀಟರ್ ಪೆಟ್ರೋಲ್‌ಗೆ ಒಟ್ಟು 9.36 ರೂಪಾಯಿ ಕಡಿಮೆಯಾಗಿದೆ. ಪ್ರಸ್ತುತ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ರೂ.64.25ಕ್ಕೆ ಮಾರಾಟವಾಗುತ್ತಿದ್ದರೆ, ಪ್ರತಿ ಲೀಟರ್ ಡಿಸೇಲ್‌ಗೆ ರೂ.53.35 ಗೆ ಮಾರಾಟವಾಗುತ್ತಿದೆ.

ಐದು ವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ, ಕಳೆದ ಅಕ್ಟೋಬರ್ 19 ರಂದು, ಪ್ರತಿ ಲೀಟರ್ ಡಿಸೆಲ್‌ಗೆ ರೂ.3.37 ಕಡಿತಗೊಳಿಸಲಾಗಿತ್ತು. ಅದರ ಬೆನ್ನಲ್ಲೇ ಮತ್ತೆ ನವೆಂಬರ್‌ನಲ್ಲಿ ಡಿಸೆಲ್ ಬೆಲೆಯಲ್ಲಿ ಇಳಿಕೆ ಕಂಡಿದ್ದು ಗ್ರಾಹಕರ ಸಂತಸಕ್ಕೆ ಕಾರಣವಾಗಿತ್ತು. ಮತ್ತೆ ಈ ವಾರಾಂತ್ಯದಲ್ಲಿ ಡಿಸೆಲ್ ಬೆಲೆಯಲ್ಲಿ ಇಳಿಕೆ ಕಂಡರೆ ವಾಹನ ಸವಾರರಿಗೆ ಬಂಪರ್ ಕೊಡುಗೆ ದೊರೆಯಲಿದೆ.

Write A Comment