ರಾಷ್ಟ್ರೀಯ

ಸ್ನೇಹಿತನನ್ನು ಕೊಲೆ ಮಾಡಿ ಯುವತಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆ: ಟ್ಯಾಕ್ಸಿ ಚಾಲಕ ಹಾಗೂ ಮೂವರು ಸ್ನೇಹಿತರಿಂದ ದುಷ್ಕೃತ್ಯ

Pinterest LinkedIn Tumblr

rape-and-murder

ಡೆಹ್ರಾಡೂನ್: ಟ್ಯಾಕ್ಸಿ ಚಾಲಕನೊಬ್ಬ ದೆಹಲಿ ಮೂಲದ ಪ್ರವಾಸಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಅಲ್ಲದೆ ಅವಳ ಜೊತೆಗಿದ್ದ ಸ್ನೇಹಿತನನ್ನು ಕೊಲೆ ಮಾಡಿ ಈ ದುಷ್ಕೃತ್ಯ ಎಸಗಿದ್ದಾನೆ. ಈ ಕೃತ್ಯದಲ್ಲಿ ಟ್ಯಾಕ್ಸಿ ಚಾಲಕ ಹಾಗೂ ತನ್ನ ಮೂವರು ಗೆಳೆಯರು ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

27 ವರ್ಷದ ಮೃತ ಮಹಿಳೆಯನ್ನು ಮೌಮಿತ ದಾಸ್, 24 ವರ್ಷದ ಯುವಕನನ್ನು ಅವಿಜಿತ್ ಪೌಲ್ ಎಂದು ಗುರುತಿಸಲಾಗಿದೆ. ಇವರಿಬ್ಬರು ದೀಪಾವಳಿಯ ಆಚರಣೆಗೆಂದು ಅ.21 ರಂದು ಡೆಹ್ರಾಡೂನ್‌ಗೆ ಆಗಮಿಸಿದ್ದರು. ಈ ವೇಳೆ ಅವರು ಕಾಣೆಯಾಗಿರುವುದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ನಾಲ್ವರು ಆರೋಪಿಗಳು ಇದೀಗ ಪೊಲೀಸ್ ವಶದಲ್ಲಿದ್ದು ಅವರನ್ನು ರಾಜು, ಬಬ್ಲು, ಗುಡ್ಡು ಮತ್ತು ಕುಂದನ್ ಎಂದು ಗುರುತಿಸಲಾಗಿದೆ. ಯುವತಿಯ ಸ್ನೇಹಿತನನ್ನು ಮೊದಲು ಹತ್ಯೆ ನಡೆಸಿ, ಬಳಿಕ ಯುವತಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡಿದ ಬಳಿಕ ಅವರಲ್ಲಿದ್ದ ನಗದು, ಅಮೂಲ್ಯ ವಸ್ತುಗಳನ್ನು ದರೋಡೆ ನಡೆಸಿರುವುದಾಗಿ ಬಂಧಿತ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಅಕ್ಟೋಬರ್ 23 ರಂದು ಯುವಕ ಹಾಗೂ ಯುವತಿ ಡೆಹ್ರಾಡೂನ್ ಸಮೀಪದ ಟೈಗರ್ ಫಾಲ್ಸ್ ಪ್ರದೇಶದಿಂದ ಟ್ಯಾಕ್ಸಿಯಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಟ್ಯಾಕ್ಸಿ ಚಾಲಕ ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬರುವಂತೆ ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಟ್ಯಾಕ್ಸಿ ಚಾಲಕ ಮತ್ತು ಆತನ ಮೂವರು ಸ್ನೇಹಿತರು ಈ ದೃಷ್ಕೃತ್ಯ ಎಸಗಿದ್ದಾರೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ಕಾಣೆಯಾಗಿರುವವರ ಕುರಿತ ಪ್ರಕರಣವನ್ನು ಪೊಲೀಸರು ಬೆನ್ನತ್ತಿದಾಗ ಉತ್ತರಕಾಶಿಯ ಪುರೋಲಾ ಪ್ರದೇಶದಲ್ಲಿ ಯುವತಿ ಪೌಲ್‌ನ ಶವ ಪತ್ತೆಯಾಯಿತು. ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಯಮುನಾ ನದಿಗೆ ತಳ್ಳಿ ಹತ್ಯೆ ಮಾಡಿರುವುದು ತಿಳಿದುಬಂದಿತು. ಈ ವೇಳೆ ತನಿಖೆ ಚುರುಕುಗೊಳಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment