ರಾಷ್ಟ್ರೀಯ

‘ಹುಡ್ ಹುಡ್’ ಚಂಡಮಾರುತ: ಆಂಧ್ರ, ಒಡಿಶಾದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

Pinterest LinkedIn Tumblr

Odisha_Rain_Fall

ಹೊಸದಿಲ್ಲಿ, ಅ. 12: ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ  ‘ಹುಡ್ ಹುಡ್’ ಚಂಡಮಾರುತದ ಅಬ್ಬರ ಆರಂಭವಾಗಿದ್ದು, ನಿರೀಕ್ಷೆಗೂ ಮುನ್ನವೇ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ.

ಗಂಟೆಗೆ 190 ಕಿ.ಮೀ. ವೇಗ­ದಲ್ಲಿ ಗಾಳಿ ಬೀಸುತ್ತಿದ್ದು, ಚಂಡಮಾರುತ ಅಪ್ಪಳಿಸುವ ವೇಳೆಗೆ ಗಾಳಿಯ ವೇಗ ಗಂಟೆಗೆ 140 ರಿಂದ 150 ಕಿ.ಮೀಗೆ ಹೆಚ್ಚಾಗುವ ಸಾಧ್ಯತೆಯಿದೆ.

ಮುಂಜಾಗ್ರತಾ ಕ್ರಮವಾಗಿ ಆಂಧ್ರ­ದಲ್ಲಿ ಸುಮಾರು 5 ಲಕ್ಷ ಮತ್ತು ಒಡಿಶಾದಲ್ಲಿ 3.5 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಆಂಧ್ರದ ವೈಜಾಗ್​, ವಿಶಾಖಪಟ್ಟಣಂ ಹಾಗೂ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಭಾರೀ ಮಳೆ ಆರಂಭವಾಗಿದ್ದು, ಎಲ್ಲೆಡೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ವಿಶಾಖಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರಿಗೆ ಬಸ್​ ಸಂಚಾರ ಸ್ಥಗಿತಗೊಳಿಸಲಾಗಿದೆ. ಎರಡೂ ರಾಜ್ಯಗಳಲ್ಲಿ ಸುಮಾರು 70 ರೈಲುಗಳ ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ. ಅಲ್ಲದೆ, ಜನರ ರಕ್ಷಣೆ ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ವಾಯು ಪಡೆಯಿಂದ 10 ಹೆಲಿಕಾಪ್ಟರ್​, ನೌಕಾ ನೆಲೆ ಹಾಗೂ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಪಡೆಗಳು ಸನ್ನದ್ಧವಾಗಿವೆ.

Write A Comment