ರಾಷ್ಟ್ರೀಯ

ಪ್ರಕೃತಿಯ ಅಚ್ಚರಿ, ಪ್ರವಾಹದಲ್ಲೇ ಹುಟ್ಟಿ ಬಂದವು 3,500 ಕಂದಮ್ಮಗಳು!..!

Pinterest LinkedIn Tumblr

kashmiri

ಶ್ರೀನಗರ, ಸೆ.23: ಹೇಗಿದೆ ನೋಡಿ ಪ್ರಕೃತಿಯ ಅಚ್ಚರಿ. ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ವಿನಾಶಕಾರಿ ಮಳೆ, ಪ್ರವಾಹ, ಭೂಕುಸಿತಗಳಲ್ಲಿ 300ಕ್ಕೂ ಹೆಚ್ಚು ಜನ ಮೃತಪಟ್ಟು 400ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರೆ, ಇತ್ತ ಅದೇ ಕಣಿವೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಪ್ರವಾಹದ ಅವಧಿಯಲ್ಲಿ ಸುಮಾರು 3,500ಕ್ಕೂ ಹೆಚ್ಚು ಸಂಖ್ಯೆಯ ಜೀವಗಳು ಈ ಭೂಮಿಗೆ ಬಂದಿವೆ!

1,260 ಮಕ್ಕಳು ಶಸ್ತ್ರ ಚಿಕಿತ್ಸೆ ಮೂಲಕ ಜನಿಸಿದ್ದರೆ, 2,300 ಮಕ್ಕಳು ಸಹಜ ಹೆರಿಗೆಯಲ್ಲಿ ಜನ್ಮ ತಾಳಿವೆ. ಇದು ಸೆ.4ರಿಂದ 20ರವರೆಗಿನ ಅವಧಿಯಲ್ಲಿ ಅಂದರೆ ಪ್ರಕೃತಿ ವಿಕೋಪದ ವೇಳೆ ಎಂದು ಅಧಿಕೃತ ವಕ್ತಾರರೊಬ್ಬರು ತಿಳಿಸಿದ್ದಾರೆ. ಈ ಅವಧಿಯಲ್ಲಿ ಕಾಶ್ಮೀರ ಕಣಿವೆಯ ವಿವಿಧ ಜಿಲ್ಲಾಸ್ಪತ್ರೆಗಳಿಗೆ 5,77,595 ಮಂದಿ ಹೊರರೋಗಿಗಳು ಬಂದು ಚಿಕಿತ್ಸೆ ಪಡೆದಿದ್ದಾರೆ.

36,600 ಜನ ಒಳರೋಗಿಗಳಾಗಿದ್ದು, 1,435 ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗಳು ಹಾಗೂ 1,03,160 ವಿವಿಧ ಲ್ಯಾಬ್‍ಟೆಸ್ಟ್‍ಗಳು ನಡೆದಿವೆ. ಈ ವಿಧ್ವಂಸಕ ಪ್ರವಾಹದಿಂದ ಇಲಾಖೆಯಲ್ಲಿ 100 ಕೋಟಿ ರೂ.ಗಳಿಗೆ ಹೆಚ್ಚಿನ ನಷ್ಟದ ಹೊರತಾಗಿಯೂ ನೂರಾರು ಆರೋಗ್ಯ ಶಿಬಿರಗಳನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರವಾಹದ ವೇಳೆ ರಾಜ್ಯ ವೈದ್ಯಕೀಯ ಇಲಾಖೆ ಕಾಳಜಿ ವಹಿಸಿ ಉತ್ತಮಮಟ್ಟದ ಚಿಕಿತ್ಸೆ ಒದಗಿಸಿದೆ ಎಂದು ಅವರು ಹೇಳಿದ್ದಾರೆ.

Write A Comment