ಗಲ್ಫ್

ಯುಎಇ-ಸೌದಿ ಪ್ರಯಾಣಿಕರಿಂದ ಸುಮಾರು 16 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಪತ್ತೆ; ಜೈಪುರ ವಿಮಾನ ನಿಲ್ದಾಣದಲ್ಲಿ 14 ಮಂದಿ ಬಂಧನ

Pinterest LinkedIn Tumblr

ದುಬೈ: ಯುಎಇ ಹಾಗು ಸೌದಿ ಅರೇಬಿಯಾದಿಂದ ಚಾರ್ಟೆಡ್ ವಿಮಾನದಲ್ಲಿ ರಾಜಸ್ತಾನದ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 14 ಮಂದಿ ಪ್ರಯಾಣಿಕರನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು, ಅವರಿಂದ ಸುಮಾರು 16 ಕೋಟಿ ರೂಪಾಯಿ ಮೌಲ್ಯದ 32 ಕೆ.ಜಿ.ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಭಾರತಕ್ಕೆ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದ್ದು, ಈ ವಿಮಾನದ ಮೂಲಕ ಪ್ರಯಾಣಿಕರು ತಮ್ಮ ಸಾಮಾನುಗಳ ಮೂಲಕ ಚಿನ್ನದ ಕಳ್ಳ ಸಾಗಾಣೆ ಮಾಡಲು ಯತ್ನಿಸಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಯುಎಇಯ ರಾಸಲ್ ಖೈಮಾ ಹಾಗು ಸೌದಿ ಅರೇಬಿಯಾದ ರಿಯಾದಿನಿಂದ ಎರಡು ಚಾರ್ಟೆಡ್ ವಿಮಾನದಲ್ಲಿ ಚೀನಾದ ಕಳ್ಳ ಸಾಗಾಣೆ ನಡೆಸಲಾಗಿದ್ದು, ಸುಮಾರು 16 ಕೋಟಿ ರೂಪಾಯಿ ಮೌಲ್ಯದ 32 ಕೆ.ಜಿ.ಚಿನ್ನ ಕಳ್ಳಸಾಗಾಣೆಯನ್ನು ಭೇದಿಸುವಲ್ಲಿ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಆರೋಪಿಗಳು ಎಮೆರ್ಜೆನ್ಸಿ ಲೈಟಿನಲ್ಲಿ ಚಿನ್ನ ಕಳ್ಳಸಾಗಾಣೆ ಮಾಡಿದ್ದು, ಚಿನ್ನದ ಸಣ್ಣ ಇಟ್ಟಿಗೆಗಳನ್ನು ಬ್ಯಾಟರಿಗಳ ಚಡಿಗಳಲ್ಲಿ ತುಂಬಿಸಲಾಗಿತ್ತು.

ಮಾರ್ಚ್ ಅಂತ್ಯದಿಂದ ಕರೋನಾ ಸೋಂಕಿನಿಂದಾಗಿ ಜೈಪುರ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನಯಾನ ಸಂಸ್ಥೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕಳೆದ ಹಣಕಾಸು ವರ್ಷದಲ್ಲಿ ಜೈಪುರ ವಿಮಾನ ನಿಲ್ದಾಣದಲ್ಲಿ 75 ಕ್ಕೂ ಹೆಚ್ಚು ಪ್ರಕರಣಗಳಲ್ಲಿ 20 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

Comments are closed.