ಗಲ್ಫ್

ಕೊರೋನಾಗೆ ಬಲಿಯಾದ ಎಲ್ಲಾ ದೇಶಗಳ ಪ್ರಜೆಗಳ ಕುಟುಂಬಗಳಿಗೆ ನೆರವು ಘೋಷಿಸಿದ ಯುಎಇ

Pinterest LinkedIn Tumblr

ದುಬೈ: ಕೋವಿಡ್-19 ಸಾಂಕ್ರಾಮಿಕದಿಂದ ಮೃತಪಟ್ಟವರ ಕುಟುಂಬಗಳಿಗೆ ಸರಕಾರದಿಂದ ಹಲವು ಸೌಲಭ್ಯಗಳನ್ನು ನೀಡಲಾಗುವುದು ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಘೋಷಿಸಿದೆ.

ಕೋವಿಡ್ ನಿಂದ ಮೃತಪಟ್ಟ ಎಲ್ಲಾ ದೇಶಗಳ ಪ್ರಜೆಗಳಿಗ ಕುಟುಂಬಗಳಿಗೆ ಈ ಸೇವೆಯನ್ನು ಒದಗಿಸುವ ಜವಾಬ್ದಾರಿಯನ್ನು ಎಮಿರೇಟ್ಸ್ ರೆಡ್ ಕ್ರೆಸೆಂಟ್‍(ERC) ಗೆ ವಹಿಸಲಾಗಿದೆ. ERC ಮಹಾ ಪ್ರಧಾನ ಕಾರ್ಯದರ್ಶಿ ಡಾ.ಮುಹಮ್ಮದ್ ಅಲ್ ಫಲಾಹಿ ಈ ಬಗ್ಗೆ ಹೇಳಿಕೆ ನೀಡಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಡು ಕಷ್ಟದಲ್ಲಿರುವ ಈ ಎಲ್ಲ ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದು ವಿವರಿಸಿದ್ದಾರೆ.

ಮೃತಪಟ್ಟವರನ್ನು ಗುರುತಿಸಿ ಅವರ ಸಂಬಂಧಿಕರ ದೂರವಾಣಿ ಸಂಖ್ಯೆ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಹಣಕಾಸು ನೆರವು, ಗೃಹಭತ್ಯೆ ಅಥವಾ ಶಾಲಾ ಶುಲ್ಕವನ್ನು ERC ನೀಡಲಿದೆ. ಇದುವರೆಗೆ ದೇಶದಲ್ಲಿ 35 ಮಂದಿ ಯುಎಇ ನಿವಾಸಿಗಳು ಕೋವಿಡ್-19 ಸಾಂಕ್ರಾಮಿಕಕ್ಕೆ ಬಲಿಯಾಗಿದ್ದಾರೆ.

Comments are closed.